2019-20ನೇ ಸಾಲಿನ ಇಪಿಎಫ್‌ಗೆ ಶೇ. 8.5ರಷ್ಟು ಬಡ್ಡಿ ನೀಡುವ ಸಾಧ್ಯತೆ
ನವದೆಹಲಿ, ಡಿಸೆಂಬರ್ 14: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2019-20 ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ತನ್ನ ಸುಮಾರು ಆರು ಕೋಟಿ ಚಂದಾದಾರರಿಗೆ ಶೇಕಡಾ 8.5ರಷ್ಟು ಬಡ್ಡಿದರವನ್ನು ನೀಡುವ ಸಾಧ್ಯತೆಯಿದೆ.
ಈ ವರ್ಷದ ಸೆಪ್ಟೆಂಬರ್ 9ರಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ಸಭೆ ಸೇರಿದ್ದ ಇಪಿಎಫ್‌ಒನ ಕೇಂದ್ರ ಮಂಡಳಿಯು ಎರಡು ಕಂತುಗಳಲ್ಲಿ ಇಪಿಎಫ್ ಬಡ್ಡಿಯನ್ನು ನೀಡಲು ನಿರ್ಧರಿಸಿತ್ತು. ಮೊದಲನೇ ಕಂತಿನಲ್ಲಿ ಶೇಕಡಾ 8.15ರಷ್ಟು ಮತ್ತು ಎರಡನೇ ಕಂತಿನಲ್ಲಿ ಶೇಕಡಾ ಶೇ. 0.35 ರಂತೆ ವಿಂಗಡಿಸಿತ್ತು.
ಶೇಕಡಾ 8.5 ರ ಬಡ್ಡಿದರವು ಈಗಾಗಲೇ ಏಳು ವರ್ಷಗಳ ಕನಿಷ್ಠವಾಗಿತ್ತು , ಹಿಂದಿನ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ತನ್ನ ಚಂದಾದಾರರಿಗೆ ಶೇಕಡಾ 8.65 ರಷ್ಟು ಬಡ್ಡಿ ಸಲ್ಲಿಸಿದೆ.

ಈ ವರ್ಷದ ಆರಂಭದಲ್ಲೇ ಶೇಕಡಾ 8.5ರಷ್ಟು ಬಡ್ಡಿದರಕ್ಕೆ ಸಾಲವನ್ನು ನೀಡಲು ಕಾರ್ಮಿಕ ಸಚಿವಾಲಯವು, ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಹೀಗಾಗಿ ಹಣಕಾಸು ಸಚಿವಾಲಯವು ಕೆಲವು ದಿನಗಳಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದ್ದು, ಇದೇ ತಿಂಗಳಿನಲ್ಲಿ(ಡಿಸೆಂಬರ್) ಜಮಾ ಮಾಡುವ ಸಾಧ್ಯತೆಯಿದೆ.
ಮೊದಲೇ ಯೋಜಿಸಿದಂತೆ ಇಪಿಎಫ್ಒ ಹಣಕಾಸು ಸಚಿವಾಲಯದ ಅನುಮತಿಯನ್ನು ಕೋರಿದ ಕೂಡಲೇ ಇಪಿಎಫ್‌ಗೆ ಶೇಕಡಾ 8.15ರಷ್ಟು ಬಡ್ಡಿಯನ್ನು ನೀಡಬೇಕಾಗಿದ್ದು, ಡಿಸೆಂಬರ್ 31ರೊಳಗೆ ಉಳಿದ ಶೇಕಡಾ 0.35ರಷ್ಟು ಬಡ್ಡಿಯನ್ನು ಜಮಾ ಮಾಡಲು ಯೋಜಿಸಿದೆ.












Click it and Unblock the Notifications