ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಬೆಂಗಳೂರು, ಫೆಬ್ರವರಿ 21:ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಠೇವಣಿಗೆ ನೀಡಲಾಗುತ್ತಿದ್ದ ಶೇ 8.65ರಷ್ಟು ಬಡ್ಡಿದರವನ್ನು 2017-18 ಸಾಲಿನಂತೆ ಶೇ 8.55ಕ್ಕೆ ಇಳಿಕೆ ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಕೇಂದ್ರ ಟ್ರಸ್ಟಿಗಳು(CBT) ಬಡ್ಡಿದರ ಇಳಿಕೆ ಬಗ್ಗೆ ಬುಧವಾರ(ಫೆಬ್ರವರಿ 21) ನಿರ್ಣಯ ಕೈಗೊಂಡಿದ್ದಾರೆ ಎಂದು ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಕಟಿಸಿದೆ.

Provident Fund Deposits To Fetch Lower Interest Rate In 2017-18

ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ.

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+