ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ
ನವದೆಹಲಿ, ಅಕ್ಟೋಬರ್, 17: ಇನ್ನು ಮುಂದೆ ಪಿಎಫ್ ಕ್ಲೇಮ್ ಮತ್ತಷ್ಟು ಸುಲಭವಾಗಲಿದೆ. ಆನ್ ಲೈನ್ ಮೂಲಕವೇ ಪಿಎಫ್ ಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ನಡೆಸಲು ಕೇಂದ್ರ ಸರ್ಕಾರ ಯೋಜನೆಯನ್ನು ಸಿದ್ಧಮಾಡಿದೆ.
ಪಿಎಫ್ ಹಣವನ್ನು ಆನ್‌ಲೈನ್ ಮೂಲಕ ಹಿಂಪಡೆಯುವ ವ್ಯವಸ್ಥೆ ಜಾರಿಗೊಳಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ ಮುಂದಾಗಿದೆ. ಮೊಬೈಲ್ ನಲ್ಲಿಯೇ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವ್ಯವಸ್ಥೆಯನ್ನು ಈ ಹಿಂದೆ ಕಲ್ಪಿಸಲಾಗಿತ್ತು.[ಇನ್ನು ಕೇವಲ 20 ದಿನದಲ್ಲಿ ಪಿಎಫ್ ಪಾವತಿ]
2016ರ ಮಾರ್ಚ್ ಅಂತ್ಯದ ವೇಳೆಗೆ ಆನ್‌ಲೈನ್ ಪಿಎಫ್ ವಿಥ್ ಡ್ರಾ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆಯಾದ ಮೂರು ಗಂಟೆಗಳ ಒಳಗಾಗಿ ಪಿಎಫ್ ಕ್ಲೇಮ್ ಮಾಡಬಹುದಾಗಿದೆ.

ಖಾತೆದಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಪಿಎಫ್ ಮೊತ್ತ ಅವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗಲಿದೆ. ಆನ್‌ಲೈನ್ ಪಿಎಫ್ ವಿತ್‌ಡ್ರಾ ವ್ಯವಸ್ಥೆ ಬಗ್ಗೆ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಮಾರ್ಚ್ ಅಂತ್ಯದ ವೇಳೆ ಜಾರಿಗೆ ತರುವ ವಿಶ್ವಾಸವಿದೆ ಎಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತ ಕೆ.ಕೆ. ಜಲನ್ ತಿಳಿಸಿದ್ದಾರೆ.[ಪಿಎಫ್ ಬಗ್ಗೆ ಎಲ್ಲಾ ಮಾಹಿತಿ ಆನ್ ಲೈನ್ ನಲ್ಲಿ ಸಿಗುತ್ತೆ]
ಒಟ್ಟಿನಲ್ಲಿ ಕೇಂದ್ರ ಸರ್ಕಾರ, ರೈಲ್ವೆ, ಕಾರ್ಮಿಕರ ಭವಿಷ್ಯ ನಿಧಿ, ವಿವಿಧ ದಾಖಲೆ ನೀಡುವಿಕೆ ಎಲ್ಲವನ್ನು ಆಧುನೀಕರಣ ಮಾಡುತ್ತಿದೆ. ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡುವಂಥ ಕೆಲಸವನ್ನು ಇಲಾಖೆಗಳು ಮಾಡುತ್ತಿವೆ.












Click it and Unblock the Notifications