ನಗದು ಮೀಸಲಿಂದ ಟಿಕೆಟ್ ರೀಫಂಡ್ ಮಾಡುತ್ತಿರುವ ಎಮಿರೇಟ್ಸ್

ವಿಶ್ವದಾದ್ಯಂತ ಕಾಯ್ದಿರಿಸಿದ್ದ ಟಿಕೆಟ್ ಗಳ ಹಣದ ಮರುಪಾವತಿಗಾಗಿ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ನಗದು ಮೀಸಲನ್ನು ಬಳಸುತ್ತಿದೆ. ಕೊರೊನಾ ವೈರಾಣು ವಿಶ್ವದಾದ್ಯಂತ ಹಬ್ಬಿರುವುದರಿಂದ ಎಲ್ಲ ಪ್ರಯಾಣಿಕರ ವಿಮಾನಗಳು ಹಾರಾಟ ನಿಲ್ಲಿಸಿವೆ. ಇನ್ನು ಐದು ಲಕ್ಷಕ್ಕೂ ಹೆಚ್ಚು ಟಿಕೆಟ್ ಗಳ ಹಣ ಮರುಪಾವತಿಸಬೇಕಿದೆ.

ದುಬೈ ಮೂಲದ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ಒಂದು ತಿಂಗಳಿಗೆ 1,50,000 ಟಿಕೆಟ್ ಮರುಪಾವತಿಗೆ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಕೊರೊನಾ ವೈರಸ್ ವ್ಯಾಪಿಸುವ ಮುನ್ನ 35,000 ಟಿಕೆಟ್ ಗಳ ಹಣ ಮರುಪಾವತಿ ಮಾಡಲಾಗುತ್ತಿತ್ತು. ಆಗಸ್ಟ್ ಆರಂಭದಲ್ಲಿ ಎಲ್ಲ ಬಾಕಿಯನ್ನು ಮರುಪಾವತಿಸಲಾಗುವುದು ಎಂದಿದೆ.

ನಾವಾಗಿಯೇ ಟಿಕೆಟ್ ರೀಫಂಡ್ ಮಾಡುತ್ತಿರುವುದರಿಂದ ನಮ್ಮ ನಗದು ಮೀಸಲು ಕುಸಿದುಹೋಗಿದೆ. ಆದರೆ ಇದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಸಂಸ್ಥೆಯ ಅಧ್ಯಕ್ಷ ಟಿಮ್ ಕ್ಲಾರ್ಕ್ ಹೇಳಿದ್ದಾರೆ.

Emirates

ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ ಪ್ರಕಾರ, ಜಾಗತಿಕ ಮಟ್ಟದ ವಿಮಾನ ಯಾನ ವಲಯಕ್ಕೆ ಎರಡನೇ ತ್ರೈಮಾಸಿಕದಲ್ಲಿ 61 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗುವ ಅಂದಾಜಿದೆ.

ಇದೀಗ ಎಮಿರೇಟ್ಸ್ ನಿಂದ ಎರಡು ಇತರ ಆಯ್ಕೆಗಳನ್ನು ನೀಡಲಾಗಿದೆ:
* ಈಗಿನ ಟಿಕೆಟ್ ನೇ 24 ತಿಂಗಳ ಕಾಲ ಬಳಿಯಲ್ಲಿಟ್ಟುಕೊಳ್ಳುವುದು

* ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪಾವತಿಸಿದ ಮೂಲ ಮೊತ್ತಕ್ಕೆ ಬಳಕೆ ಮಾಡದ ಟಿಕೆಟ್ ಗಳ ಭಾಗವನ್ನು ಟ್ರಾವೆಲ್ ವೋಚರ್ ಗಳಾಗಿ ಬದಲಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+