Breaking; ಅಕ್ರಮ ಹಣ ವರ್ಗಾವಣೆ, ವಿವೋ ಕಂಪನಿ ಮೇಲೆ ಇಡಿ ದಾಳಿ

ನವದೆಹಲಿ, ಜುಲೈ 05; ಅಕ್ರಮ ಹಣ ವರ್ಗಾವಣೆ ಶಂಕೆಯ ಆಧಾರದ ಮೇಲೆ ವಿವೋ ಮೊಬೈಲ್ ಉತ್ಪಾದಕ ಕಂಪನಿ ಹಾಗೂ ಅದಕ್ಕೆ ಪರೋಕ್ಷವಾಗಿ ಸಂಬಂಧಪಟ್ಟ ಕಂಪನಿಗಳ ಮೇಲೆ ಮೇಲೆ ಇಡಿ ದಾಳಿ ನಡೆದಿದೆ. ದೇಶದ 44 ಪ್ರದೇಶಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಮಂಗಳವಾರ ಇಡಿ ಅಧಿಕಾರಿಗಳು ಚೀನಾದ ಮೊಬೈಲ್ ಉತ್ಪಾದಕ ಕಂಪನಿ ವಿವೋಗೆ ಸೇರಿದ 44 ಪ್ರದೇಶಗಳ ಮೇಲೆ ದಾಳಿ ಮಾಡಿದ್ದಾರೆ. ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ದಾಳಿ ನಡೆಸಿದ್ದರು.

ಆದಾಯ ತೆರಿಗೆ ಇಲಾಖೆ ದಾಳಿಯ ವರದಿ ಬಳಿಕ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಕಲಿ ಷೇರುದಾರರನ್ನು ತೋರಿಸಿ ಹಣದ ವಿದೇಶಿ ವಿನಿಮಯ ಮಾಡಲಾಗಿದೆ ಎಂಬ ಶಂಕೆ ಇದೆ.

ED Raid Against Chinese Phone Maker Vivo

ಜಾರಿ ನಿರ್ದೇಶನಾಲಯದ ಎಲ್ಲೆಲ್ಲಿ ದಾಳಿ ಮಾಡಿದೆ, ದಾಳಿಯ ನಿಖರವಾದ ಕಾರಣದ ಬಗ್ಗೆ ವಿವೋ ಕಂಪನಿ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 44 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ದಾಖಲೆಗಳ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿವೋ ಸೇರಿದಂತೆ ಚೀನಾದ ಸ್ಮಾರ್ಟ್‌ ಫೋನ್ ತಯಾರಿಕಾ ಕಂಪನಿಗಳ ಕಚೇರಿ, ಕಂಪನಿಯ ಅಂಗ ಸಂಸ್ಥೆಗಳ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಆಗ ಸುಮಾರು 500 ಕೋಟಿ ರೂ. ಆದಾಯಕ್ಕೆ ಸರಿಯಾದ ದಾಖಲೆ ಲಭ್ಯವಾಗಿರಲಿಲ್ಲ ಎಂಬ ಮಾಹಿತಿ ಇದೆ. ಇದೇ ಮಾಹಿತಿಯ ಆಧಾರದ ಮೇಲೆ ಈಗ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+