20ರ ವಯಸ್ಸಿನಲ್ಲಿ 10,000 ಹೂಡಿಕೆ; 2026ಕ್ಕೆ 1.5 ಕೋಟಿ! ಈ ಇನ್ವೆಸ್ಟ್‌ಮೆಂಟ್‌ ಟ್ರಿಕ್‌ ಏನು?

ನಾವು ಉದ್ಯೋಗದಿಂದ ವೇತನ ಗಳಿಸುತ್ತೇವೆ. ವ್ಯಾಪಾರದಿಂದ ಆದಾಯ ಪಡೆಯುತ್ತೇವೆ. ಆದರೆ, ಹೀಗೆ ಪಡೆದ ಹಣವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸುವುದು,ಬೆಳೆಸುವುದು ಹೇಗೆ ಎನ್ನುವುದು ಎಲ್ಲರಿಗೂ ತಿಳಿದಿರುವುದಿಲ್ಲ. 26 ವರ್ಷದ ಕರಣ್ ವಾಲಿಯಾ ಅವರ ಕಥೆ ಕೂಡಾ ಇದೆ. ಆದರೆ, ಕೇವಲ 20 ವರ್ಷ ವಯಸ್ಸಿನಲ್ಲಿ 10,000ದಿಂದ ಅಂದರೆ ಸಣ್ಣ ಮೊತ್ತದೊಂದಿಗೆ ಹೂಡಿಕೆ ಆರಂಭಿಸಿದರು. ಇವತ್ತು ಅಂದರೆ ಆರು ವರ್ಷಗಳ ನಂತರ, ಈ ಸಣ್ಣ ಹೂಡಿಕೆ ದೊಡ್ಡ ಬೆಟ್ಟವಾಗಿ ಬೆಳೆದಿದೆ. ಅವರ 10 ಸಾವಿರ ಹೂಡಿಕೆ ಬಂಡವಾಳ ಇಂದು 1.5 ಕೋಟಿವರೆಗೆ ಬೆಳೆದಿದೆ.

ಇತ್ತೀಚೆಗೆ, ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೂಡಿಕೆ ಜರ್ನಿ ಹೇಗಿತ್ತು ಎನ್ನುವುದನ್ನು ಕರಣ್ ಶೇರ್‌ ಮಾಡಿದ್ದಾರೆ. ಅವರು ಇನ್‌ವೆಸ್ಟ್‌ ಮಾಡುವುದಕ್ಕೆ ಶುರು ಮಾಡಿದಾಗ ಅವರಿಗೂ ಷೇರು ಮಾರುಕಟ್ಟೆ ಅಥವಾ ಹೂಡಿಕೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಬರ ಬರುತ್ತಾ ಹಣದುಬ್ಬರದ ಪ್ರಭಾವ ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರಿತುಕೊಂಡರು. ಜೊತೆಗೆ ಸರಿಯಾದ ಸ್ಥಳಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಹಣವನ್ನು ಹೇಗೆ ಒಟ್ಟು ಮಾಡಬಹುದು ಎಂಬುದನ್ನು ಅರ್ಥಮಾಡಿಕೊಂಡರು.

easy investment trick How To Build one Crore Portfolio in 6 Year here is easy investment trick

ಬ್ಯಾಂಕ್ ಖಾತೆಗಳಲ್ಲಿ ಇಟ್ಟ ಹಣ ಎಷ್ಟು ಲಾಭ ಕೊಡುವುದು ?

ಕರಣ್ ವಾಲಿಯಾ ಹೇಳುವಂತೆ ಕೇವಲ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ ಉಳಿಸಿದರೆ ಸಾಲದು. ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಮರಿ ಹಾಕುವುದಿಲ್ಲ. ಖಾತೆಯಲ್ಲಿ ಎಷ್ಟು ಇಟ್ಟಿರುತ್ತೇವೆಯೋ ಅಷ್ಟೇ ಹಣ ವರ್ಷದ ಕೊನೆಗೂ ಇರುವುದು. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗುತ್ತಲೇ ಹೋಗುವುದು. ಬೆಲೆಗಳು ಹೆಚ್ಚಾದಂತೆ, ಅದೇ ಪ್ರಮಾಣದ ಹಣದಿಂದ ಹೆಚ್ಚು ವಸ್ತುಗಳನ್ನು ಖರೀದಿಸುವುದು ಸಾಧ್ಯವಿಲ್ಲ.

ಹಾಗಾಗಿ ಹಣದುಬ್ಬರ ದರಕ್ಕಿಂತ ವೇಗವಾಗಿ ತನ್ನ ಹಣವನ್ನು ಬೆಳೆಸುವ ಸರಳ ಗುರಿಯೊಂದಿಗೆ FD, ಡೈರೆಕ್ಟ್‌ ಇಕ್ವಿಟಿ ಮತ್ತು ಮ್ಯೂಚುವಲ್ ಫಂಡ್‌ಗಳಂತಹ ವಿಭಿನ್ನ ಹೂಡಿಕೆ ಆಯ್ಕೆಗಳಲ್ಲಿ ಕರಣ್‌ ಹಣ ಹೂಡಲು ಶುರು ಮಾಡುತ್ತಾರೆ.

ಮ್ಯೂಚುವಲ್ ಫಂಡ್‌ಗಳಿಂದ ಆರಂಭಿಸುವುದು ಸುಲಭ

ಕರಣ್ ಅವರ ಇಂದಿನ ಬಂಡವಾಳ ಹೂಡಿಕೆ ತುಂಬಾ ದೊಡ್ಡದಾಗಿದೆ. ಇದರಲ್ಲಿ ಡೈರೆಕ್ಟ್‌ ಇಕ್ವಿಟಿ ಮತ್ತು ಗ್ಲೋಬಲ್‌ ಎಕ್ಸ್‌ಪೋಶರ್‌ ಸೇರಿವೆ. ಆದರೆ, ಮೊದಲ ಬಾರಿಗೆ ಹೂಡಿಕೆ ಮಾಡುವವರು ಆರಂಭದಲ್ಲಿಯೇ ಕಠಿಣ ತಂತ್ರಗಳನ್ನು ಅನುಸರಿಸಬಾರದು ಎನ್ನುವ ಸಲಹೆಯನ್ನೂ ನೀಡುತ್ತಾರೆ. ಯಾವ ಷೇರು ಆಯ್ಕೆ ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡಲು ಸಂಶೋಧನೆ, ಸಮಯ ಮತ್ತು ಅನುಭವ ಇರಲೇಬೇಕು ಎನ್ನುತ್ತಾರೆ.

ಒಬ್ಬ ಸ್ನೇಹಿತ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಕರಣ್‌ಗೆ ತಿಳಿಸಿದಾಗ ಷೇರು ಮಾರುಕಟ್ಟೆಯನ್ನು ಪ್ರವೇಶಿಸಲು ಇದೇ ಸುಲಭ ಮಾರ್ಗ ಎನ್ನುವುದನ್ನು ಅರಿತುಕೊಂಡರು. ಬೇರೆ ಬೇರೆ ಕಂಪನಿಗಳಲ್ಲಿ ಹೂಡಿಕೆದಾರರ ಹಣವನ್ನು ನಿರ್ವಹಿಸುವ ಫಂಡ್‌ ಮ್ಯಾನೇಜರ್‌ ಉತ್ತಮ ಆರಂಭಿಕ ವೇದಿಕೆಯನ್ನು ಒದಗಿಸಿದರು.

ಪ್ರೈವೆಟ್‌ ಇಕ್ಷಿಟಿ ಮತ್ತು ಹೂಡಿಕೆ ಬ್ಯಾಂಕಿಂಗ್ ಲಾಭ

ಕರಣ್ ವಾಲಿಯಾ ಪ್ರೈವೆಟ್‌ ಇಕ್ಷಿಟಿ ಮತ್ತು ಹೂಡಿಕೆ ಬ್ಯಾಂಕಿಂಗ್‌ನಲ್ಲಿನ ತಮ್ಮ ವೃತ್ತಿಪರ ಅನುಭವದ ಮೂಲಕ ಅಡ್ವಾನ್ಸ್ಡ್‌ ಕೌಶಲ್ಯಗಳನ್ನು ಕಲಿತರು. ಆದರೆ, ಅವರ ಮೂಲ ಉದ್ದೇಶವೇ ಹಣವನ್ನು ಪರಿಣಾಮಕಾರಿಯಾಗಿ ಹೂಡಿಕೆ ಮಾಡುವುದು ಮತ್ತು ದೀರ್ಘಾವಧಿಯ ಬೆಳವಣಿಗೆಯ ಮೇಲೆ ಹೇಗೆ ಕೇಂದ್ರೀಕರಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದಾಗಿತ್ತು.

ಹೊಸ ಹೂಡಿಕೆದಾರರಿಗೆ ಕರಣ್ ಅವರ ಸರಳ ಸಲಹೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ತಮ್ಮ ಪೋಸ್ಟ್‌ನಲ್ಲಿ, 26 ವರ್ಷದ ಕರಣ್ ಹೊಸ ಹೂಡಿಕೆದಾರರಿಗೆ ಕೇವಲ ಮೂರು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡುತ್ತಾರೆ:

ಸಣ್ಣದಾಗಿ ಪ್ರಾರಂಭಿಸಿ: ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. 1,000ದಿಂದ ಹೂಡಿಕೆ ಶುರು ಮಾಡುತ್ತಿರೋ ಅಥವಾ 10,000 ರೂ. ಮೂಲಕ ಹೂಡಿಕೆ ಮಾಡುತ್ತೀರೋ ಎನ್ನುವುದು ಇಲ್ಲಿ ಮುಖ್ಯ ಆಗುವುದೇ ಇಲ್ಲ.

ಇಂದೇ ಪ್ರಾರಂಭಿಸಿ: ಹೂಡಿಕೆಯನ್ನು ಆದಷ್ಟು ಬೇಗ ಆರಂಭಿಸಬೇಕು. ಸಣ್ಣ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ ಕಂಪೌಂಡ್‌ ಪ್ರಯೋಜನಗಳು ಹೆಚ್ಚಾಗಿರುತ್ತವೆ.

ದೀರ್ಘಾವಧಿ: ಹೂಡಿಕೆ ಮಾಡಿದ ಮೇಲೆ ಮಾರುಕಟ್ಟೆಯಲ್ಲಿ ತುಂಬಾ ಕಾಲದವರೆಗೆ ಉಳಿಯಬೇಕು. ತಾಳ್ಮೆ ಬಹಳ ಮುಖ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+