ಏಪ್ರಿಲ್ 20ರಿಂದ ಇ ಕಾಮರ್ಸ್ ವೆಬ್ ತಾಣಗಳು ಓಪನ್

ನವದೆಹಲಿ, ಏಪ್ರಿಲ್ 16: ಕೊರೊನಾವೈರಸ್ ನಿಂದಾಗಿ ಲಾಕ್ಡೌನ್ ಎರಡನೇ ಅವಧಿಗೆ ವಿಸ್ತರಣೆಯಾಗಿದೆ. ಈ ನಡುವೆ ಏಪ್ರಿಲ್ 20ರ ನಂತರ ಹಲವು ಸೇವಾ ಸಂಸ್ಥೆಗಳಿಗೆ ವಿನಾಯತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯವು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಸೇವಾ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.

Recommended Video

      ಮನೆಯಲ್ಲಿದ್ದುಕೊಂಡೇ ತೇಜಸ್ವಿ ಸೂರ್ಯ ಏನ್ ಮಾಡಿದ್ದಾರೆ ನೋಡಿ

      ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ ಎಂದು ಕರ್ನಾಟಕದಲ್ಲಿ ಪೊಲೀಸರು ಸೂಚಿಸಿದ್ದಾರೆ. ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

      ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

      E-commerce website to be back in business from April 20

      ಆದೇಶದಲ್ಲಿ ಸೂಚಿಸಿದಂತೆ, ದಿನಸಿ, ಡೆಲವರಿ ಬಾಯ್ಸ್, ಟೆಲಿಕಾಂ, ವೈದ್ಯಕೀಯ, ಡೇಟಾ ಸೆಂಟರ್, ಬ್ಯಾಂಕ್, ವಿಮೆ, ಕೆಲವು ಸೆಕ್ಯುರಿಟಿ ಏಜೆನ್ಸಿ ಕಾರ್ಯ ನಿರ್ವಹಿಸಲು ಅನುಮತಿ ಇದ್ದು ,ಎಲ್ಲರಿಗೂ ಪಾಸ್ ಅಗತ್ಯವಿದೆ.

      ಈಗ ಆನ್ ಲೈನ್ ನಲ್ಲಿ ಇ ಪಾಸ್ ವಿತರಣೆ ಆರಂಭವಾಗಿದೆ. ಇದಲ್ಲದೆ ಎಮರ್ಜೆನ್ಸಿ ಪಾಸ್ ಪಡೆದುಕೊಳ್ಳಬಹುದು. ಇದು ದೇಶದೆಲ್ಲೆಡೆ ಲಾಕ್ಡೌನ್ ಅವಧಿಯಲ್ಲಿ ಚಾಲನೆಯಲ್ಲಿದೆ. ಆದರೆ, ಏಪ್ರಿಲ್ 20ರ ನಂತರ ಇ ಕಾಮರ್ಸ್ ವೆಬ್ ತಾಣಗಳ ಸೇವೆ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಆನ್ ಲೈನ್ ಶಾಪಿಂಗ್ ತಾಣಗಳದ ಅಮೆಜಾನ್, ಫ್ಲಿಪ್ ಕಾರ್ಟ್ ಮುಂತಾದ ತಾಣಗಳ ಸೇವೆ ಲಭ್ಯವಿರುವುದಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+