Dell Layoffs: ಮತ್ತೆ ಉದ್ಯೋಗಿಗಳನ್ನು ತೆಗೆದುಹಾಕಿದ ಡೆಲ್- ಅನಿಶ್ಚಿತ ಭವಿಷ್ಯದತ್ತ ನೌಕರರು
ಸ್ಯಾನ್ ಫ್ರಾನ್ಸಿಸ್ಕೋ, ಆಗಸ್ಟ್ 08: ಡೆಲ್ ಕಂಪನಿಯು ತನ್ನ ಸೇಲ್ಸ್ ಡಿಪಾರ್ಟ್‌ಮೆಂಟ್‌ನಲ್ಲಿರುವ ನೌಕರರನ್ನು ವಜಾಗಳಿಸಿದೆ ಎಂದು ವರದಿಯಾಗಿದೆ. ಈ ವರ್ಷದ ಆರಂಭದಲ್ಲಿ 6,650 ಉದ್ಯೋಗ ಕಡಿತಗಳನ್ನು ಡೆಲ್ ಘೋಷಿಸಿತ್ತು. ಈಗ ಮಾಡಿರುವ ವಜಾಗಳು ಹಳೆಯ ಉದ್ಯೋಗ ಕಡಿತ ಪ್ರಕ್ರಿಯೆಯ ಭಾಗವಾಗಿದೆಯೇ ಅಥವಾ ಮತ್ತೆ ಹೆಚ್ಚುವರಿಯಾಗಿ ವಜಾಗೊಳಿಸಲಾಗಿದೆಯೇ ಎಂಬುದು ಕಂಪನಿ ದೃಢೀಕರಿಸಿಲ್ಲ.
ಡೆಲ್ ಕಂಪನಿಯು ಹೊಸ ಪಾಲುದಾರರನ್ನು ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸೆಲ್ಸ್ ತಂಡಗಳಲ್ಲಿನ ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಡೆಲ್ ವಕ್ತಾರರು, 'ನಮ್ಮ ಸೆಲ್ಸ್ ಟೀಮ್‌ನ ಕೆಲವು ಸದಸ್ಯರು ಕಂಪನಿಯನ್ನು ತೊರೆಯುತ್ತಿದ್ದಾರೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಾವು ಉದ್ಯೋಗಿಗಳ ಮುಂದಿನ ಭವಿಷ್ಯಕ್ಕಾಗಿ ಆದಷ್ಟು ಸಹಾಯ ಮಾಡುತ್ತೇವೆ. ಈ ವಜಾ ಪ್ರಕ್ರಿಯೆಯಲ್ಲಿ ಬಾಧಿತರಾದವರನ್ನು ನಾವು ಬೆಂಬಲಿಸುತ್ತೇವೆ' ಎಂದು ಡೆಲ್ ವಕ್ತಾರರು ಹೇಳಿದ್ದಾರೆ.
'ನಾವು ಯಾವಾಗಲೂ ಸ್ಪರ್ಧಾತ್ಮಕವಾಗಿ ಉಳಿಯಲು ನಮ್ಮ ವ್ಯವಹಾರವನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ಉತ್ತಮ ನಾವೀನ್ಯತೆ ಹಾಗೂ ಮೌಲ್ಯಯುತ ಸೇವೆ ತಲುಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ವಕ್ತಾರರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ, ಡೆಲ್ ಕಂಪನಿಯ ಕೋ-ಸಿಒಒ ಆಗಿರುವ ಚಕ್ ವಿಟ್ಟನ್ ಅವರು ಹಠಾತ್ತನೆ ರಾಜೀನಾಮೆ ನೀಡಿದ ಎರಡು ವಾರಗಳ ನಂತರ ಹೊಸ ಸುತ್ತಿನ ಉದ್ಯೋಗ ಕಡಿತಗಳು ಪ್ರಕಟಗೊಂಡಿತ್ತು.

ವರದಿಯ ಪ್ರಕಾರ, 6,500 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಈಗಿನ 1,33,000 ಉದ್ಯೋಗಿಗಳಲ್ಲಿ ಸುಮಾರು 5 ಪ್ರತಿಶತದಷ್ಟು ನೌಕರರನ್ನು ಹೊರಹಾಕಲಾಗಿತ್ತು.
2024 ರ ಮೊದಲ ತ್ರೈಮಾಸಿಕದಲ್ಲಿ, ಡೆಲ್ ಕಂಪನಿಯು 20.9 ಶತಕೋಟಿ ಡಾಲರ್ ಆದಾಯವನ್ನು ಗಳಿಸಿದೆ. ಕಳೆದ ಆದಾಯಕ್ಕೆ ಗಳಿಕೆಗೆ ಹೋಲಿಸಿಕೊಂಡರು ಶೇ 20ರಷ್ಟು ಆದಾಯ ಕಡಿಮೆಯಾಗಿದೆ.
'ನಾವು ಸವಾಲಿನ ಆರ್ಥಿಕ ಪರಿಸ್ಥಿತಿಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ನಾವು ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ನಿರ್ವಹಣಾ ವೆಚ್ಚಗಳನ್ನು ಕಡಿಮೆಗೊಳಿಸಿದ್ದೇವೆ' ಎಂದು ವಿಟ್ಟನ್ ಹೇಳಿದ್ದರು.

ಈ ವರ್ಷದ ಆರಂಭದಲ್ಲಿ ಉದ್ಯೋಗ ಕಡಿತಗೊಳಿಸಿದ್ದ ಡೆಲ್
ಡೆಲ್ ಪರ್ಸನಲ್ ಕಂಪ್ಯೂಟರ್‌ಗಳ ಬೆಲೆಗಳು ಕುಸಿಯುತ್ತಿರುವುದರಿಂದ ಕಂಪನಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡೆಲ್ ಕಂಪನಿಯು ಸುಮಾರು 6,650 ಉದ್ಯೋಗಿಗಳನ್ನು ಈ ವರ್ಷದ ಆರಂಭದಲ್ಲಿ ಕೆಲಸದಿಂದ ತೆಗೆದುಹಾಕಿತ್ತು.
ಈ ಕುರಿತು ಪತ್ರ ಬರೆದಿದ್ದ ಸಹ-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೆಫ್ ಕ್ಲಾರ್ಕ್ ಬ್ಲೂಮ್‌ಬರ್ಗ್, 'ಕಂಪನಿಯು ಅನಿಶ್ಚಿತ ಭವಿಷ್ಯದೊಂದಿಗೆ ಹೆಜ್ಜೆಹಾಕುತ್ತಿದೆ. ಮಾರುಕಟ್ಟೆಯ ಕೆಟ್ಟ ಪರಿಸ್ಥಿತಿಗಳು ಕಂಪನಿಯ ಮೇಲೆ ಪರಿಣಾಮ ಬೀರಿದೆ' ಎಂದು ಪತ್ರದಲ್ಲಿ ಬರೆದಿದ್ದಾರೆ.
ಕಂಪನಿಯ ವಕ್ತಾರರ ಪ್ರಕಾರ, 'ಉದ್ಯೋಗ ಕಡಿತವು ಡೆಲ್ ಕಂಪನಿಯ ಜಾಗತಿಕ ಉದ್ಯೋಗಿಗಳ ಸುಮಾರು ಶೇ 5 ರಷ್ಟಿತ್ತು.
ಡೆಲ್ ಮತ್ತು ಇತರ ಹಾರ್ಡ್‌ವೇರ್ ತಯಾರಕರು ಭಾರೀ ಸಂಕಷ್ಟದಲ್ಲಿದ್ದಾರೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ವೈಯಕ್ತಿಕ ಕಂಪ್ಯೂಟರ್ ಸಾಗಣೆಗಳು ತೀವ್ರವಾಗಿ ಕುಸಿದಿವೆ ಎಂದು ಪ್ರಾಥಮಿಕ ಡೇಟಾ ತೋರಿಸುತ್ತದೆ ಎಂದು ಉದ್ಯಮ ವಿಶ್ಲೇಷಕ ಸಂಸ್ಥೆ ಐಡಿಸಿ ಹೇಳಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications