ಡೆಬಿಟ್ ಕಾರ್ಡಿಗೆ ಭದ್ರತೆ ಇಲ್ಲ, ನಾನೇನು ಮಾಡ್ಬೇಕು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 21: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳ ಗ್ರಾಹಕರು ಆತಂಕದಲ್ಲಿದ್ದಾರೆ. 32 ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡಿಗೆ ಏನೋ ಆಗಿದೆ. ಸುರಕ್ಷತೆ ಇಲ್ಲ, ಮುಂದೇನು ಮಾಡಬೇಕು ಎಂಬ ಆತಂಕ ಸೃಷ್ಟಿಯಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಡೆಬಿಟ್ ಕಾರ್ಡ್ ನ ದೋಷದಿಂದ ಹಣ ಕಳೆದುಕೊಂಡ ಗ್ರಾಹಕರಿಗೆ ಬ್ಯಾಂಕುಗಳು ಯಾವುದೇ ಮೊತ್ತವನ್ನು ನೀಡುವುದಿಲ್ಲ. ಇದುವರೆವಿಗೂ ಈ ರೀತಿ ನಷ್ಟವಾಗಿರುವ ಮೊತ್ತ ಕೂಡಾ ಹೆಚ್ಚಿನ ಪ್ರಮಾಣದ್ದಲ್ಲ. ಇದು ಎಟಿಎಂ ವ್ಯವಹಾರಕ್ಕೆ ಸಂಬಂಧಪಟ್ಟಿರುವ ಸುರಕ್ಷತಾ ಕ್ರಮವಾಗಿರುವುದರಿಂದ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿವೆ. [ಎಚ್ಚರಿಕೆ! 32 ಲಕ್ಷ ಡೆಬಿಟ್ ಕಾರ್ಡ್ ಗಳಿಗೆ ಅಪಾಯ]

ಆರ್ ಬಿಐ ಏನು ಹೇಳುತ್ತೆ: ಎಟಿಎಂ ಸುರಕ್ಷತೆ ಲೋಪದಿಂದ ಗ್ರಾಹಕರ ಹಣಕ್ಕೆ ತೊಂದರೆಯಾದರೆ ಬ್ಯಾಂಕುಗಳೇ ಆ ಮೊತ್ತವನ್ನು ಗ್ರಾಹಕರಿಗೆ ಹಿಂತಿರುಗಿಸಬೇಕು ಎಂಬ ನಿಯಮವಿದೆ.

ಎಸ್ ಬಿಐ ಸುಮಾರು 6 ಲಕ್ಷ ಡೆಬಿಟ್ ಕಾರ್ಡ್ ಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಬ್ಯಾಂಕ್ ಆಫ್ ಬರೋಡಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್, ಆಂಧ್ರ ಬ್ಯಾಂಕ್ ಗಳು ಈಗಾಗಲೇ ತನ್ನ ಗ್ರಾಹಕರ ಬಳಿ ಇದ್ದ ಡೆಬಿಟ್ ಕಾರ್ಡ್ ಗಳನ್ನು ಬದಲಾಯಿಸಿವೆ. (ಒನ್ ಇಂಡಿಯಾ ಸುದ್ದಿ)

ಸುರಕ್ಷಿತ ನಿಯಮಗಳನ್ನು ಮೀರಿದರೆ

ಸುರಕ್ಷಿತ ನಿಯಮಗಳನ್ನು ಮೀರಿದರೆ

ಬ್ಯಾಂಕುಗಳ ನೀಡಿರುವ ಸುರಕ್ಷಿತ ನಿಯಮಗಳನ್ನು ಮೀರಿ ಗ್ರಾಹಕರು ಎಟಿಎಂನಲ್ಲಿ ಡೆಬಿಟ್‌ ಕಾರ್ಡ್‌ಗಳನ್ನು ಬಳಸುತ್ತಿದ್ದಂತೆಯೇ ಅವುಗಳ ಪಿನ್‌ ಇತ್ಯಾದಿ ರಹಸ್ಯ ಮಾಹಿತಿಗಳನ್ನು ಕದಿಯುವ ಮಾಲ್‌ವೇರ್‌ ತಂತ್ರಾಂಶ ತನ್ನಿಂತಾನೇ ಸಕ್ರಿಯವಾಗುವುದನ್ನು ಶಂಕಿಸಲಾಗಿದೆ.

ಎಟಿಎಂ ಪಿನ್ ನಂಬರ್ ಬದಲಾಯಿಸಿ

ಎಟಿಎಂ ಪಿನ್ ನಂಬರ್ ಬದಲಾಯಿಸಿ

ಐಸಿಐಸಿಐ, ಎಚ್ ಡಿ ಎಫ್ ಸಿ ಹಾಗೂ ಯೆಸ್ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಎಟಿಎಂ ಪಿನ್ ನಂಬರ್ ಬದಲಾಯಿಸಲು ಸೂಚಿಸಿವೆ. ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ ಡಿಎಫ್ ಸಿ ಎಟಿಎಂ ನಲ್ಲಿ ಮಾತ್ರ ವ್ಯವಹರಿಸಲು ನಿರ್ದೇಶಿಸಿದೆ.

ಏನು ಮಾಡಬೇಕು? ಯಾವ ಕ್ರಮ ಕೈಗೊಳ್ಳಬೇಕು?

ಏನು ಮಾಡಬೇಕು? ಯಾವ ಕ್ರಮ ಕೈಗೊಳ್ಳಬೇಕು?

* ನಿಮ್ಮ ಬ್ಯಾಂಕ್ ಯಾವುದೇ ಆಗಿರಲಿ ಮೊದಲಿಗೆ ನಿಮ್ಮ ಡೆಬಿಟ್ ಕಾರ್ಡ್ ಪಿನ್ ನಂಬರ್ ಬದಲಾಯಿಸಿಕೊಳ್ಳಿ.
* ಪಿನ್ ನಂಬರ್ ಮಾಹಿತಿಯನ್ನು ಯಾರಿಗೂ ಯಾವುದೇ ಕಾರಣಕ್ಕೂ ನೀಡಬೇಡಿ
* ಬೇರೆ ಬ್ಯಾಂಕುಗಳ ಎಟಿಎಂ ಬಳಕೆಯನ್ನು ಸದ್ಯಕ್ಕೆ ನಿಲ್ಲಿಸಿ.
* ಎಟಿಎಂ ವ್ಯವಹಾರದ ವೇಳೆ ಹಣ ಸಿಗದಿದ್ದರೆ, ತಕ್ಷಣವೇ ಬ್ಯಾಂಕಿಗೆ ಮಾಹಿತಿ ನೀಡಿ.
* ಬ್ಯಾಂಕ್ ಕಳಿಸುವ ಭದ್ರತಾ ಅಲರ್ಟ್ ಗಳಿಗೆ ಚಂದಾದಾರರಾಗಿರಿ
* ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಅಪ್ಡೇಟ್ ಮಾಡಿ.

ಮಾಹಿತಿ ಸೋರಿಕೆ ಬಗ್ಗೆ ಆತಂಕ ಬೇಡ

ಮಾಹಿತಿ ಸೋರಿಕೆ ಬಗ್ಗೆ ಆತಂಕ ಬೇಡ

ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ. ಕೇವಲ ಶೇ 0.5ರಷ್ಟು ಮಾಹಿತಿ ಸೋರಿಕೆಯಾಗಿದೆ. ಮಿಕ್ಕಂತೆ ಬ್ಯಾಂಕುಗಳು ನೀಡುವ ನಿಯಮಗಳನ್ನು ಪಾಲಿಸಿ ವ್ಯವಹಾರ ನಡೆಸಿ ಎಂದು ಹೆಚ್ಚುವರಿ ಕಾರ್ಯದರ್ಶಿ ಜಿಸಿ ಮರ್ಮು ಅವರು ಎಚ್ಚರಿಕೆ ನೀಡಿದ್ದಾರೆ.

ಎಟಿಎಂ ಸಮಸ್ಯೆ ತಿಳಿಗೊಳ್ಳಲಿದೆ

ಎಟಿಎಂ ಸಮಸ್ಯೆ ತಿಳಿಗೊಳ್ಳಲಿದೆ

ಸರಿ ಸುಮಾರು 60 ಕೋಟಿಗೂ ಅಧಿಕ ಡೆಬಿಟ್ ಕಾರ್ಡ್ ಗಳು ಚಾಲನೆಯಲ್ಲಿವೆ. ಆದರೆ, ಈ ಬಾರಿ ಎಲ್ಲಾ ಬಗೆಯ ಕಾರ್ಡ್ ಗಳು ವೀಸಾ, ಮಾಸ್ಟರ್ ಕಾರ್ಡ್, ರುಪೇ ಕಾರ್ಡ್ ಕೂಡಾ ಹಾನಿಗೊಳಗಾಗಿವೆ. ಆದರೆ, ಬ್ಯಾಂಕುಗಳು ತಮ್ಮ ಗ್ರಾಹಕರ ಜತೆ ಸದಾ ಸಂಪರ್ಕದಲ್ಲಿದ್ದು, ಸಮಸ್ಯೆ ತಿಳಿಗೊಳಿಸುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A malware infection has led to over 32 lakh debit cards in India being compromised. Banks will either ask customers to either replace or change the security codes of the debit cards.
Please Wait while comments are loading...