ಕೊರೊನಾ ಪರಿಣಾಮ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ FMCG ಮಾರುಕಟ್ಟೆ ಶೇ. 4.9ರಷ್ಟು ಬೆಳವಣಿಗೆ
ನವದೆಹಲಿ, ಡಿಸೆಂಬರ್ 08: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಸರಕುಗಳು ಮಾರುಕಟ್ಟೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಗಮನಾರ್ಹವಾಗಿ ವಿಸ್ತರಣೆಯಾಗಿದೆ.
ಪ್ರಸಕ್ತ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಎಫ್‌ಎಂಸಿಜಿ ಮಾರುಕಟ್ಟೆ ಶೇಕಡಾ 4.9 ರಷ್ಟು ವಿಸ್ತರಿಸಿದ್ದು, ನೈರ್ಮಲ್ಯ ವಿಭಾಗದಲ್ಲಿ ಮತ್ತು ಸ್ನ್ಯಾಕ್ಸ್ ಮಾರಾಟದಲ್ಲಿ ಹೆಚ್ಚಳವಾಗಿದೆ.
ಗ್ರಾಹಕ ಸಂಶೋಧನಾ ಸಂಸ್ಥೆ ಕಾಂತರ್ ವರ್ಲ್ಡ್‌ಪ್ಯಾನೆಲ್ ನಡೆಸಿದ ಅಧ್ಯಯನದ ಪ್ರಕಾರ, ಕೋವಿಡ್-19 ಪೂರ್ವದಲ್ಲಿ ನಗರ ಪ್ರದೇಶಗಳಲ್ಲಿ ಮಾರುಕಟ್ಟೆಯು ಶೇ 5.3 ರ ಬದಲು, ಶೇ 0.8 ರಷ್ಟು ನಿಧಾನವಾಗಿ ಬೆಳೆಯುತ್ತಿತ್ತು. ಕಾಂತರ್‌ನ ವರ್ಲ್ಡ್ ಪ್ಯಾನೆಲ್ ವಿಭಾಗದ ದಕ್ಷಿಣ ಏಷ್ಯಾದ ಎಂಡಿ ಕೆ ರಾಮಕೃಷ್ಣನ್ ಮಾತನಾಡಿ, ''ಕೋವಿಡ್ ಉದ್ಯಮವನ್ನು ಸಂಭಾವ್ಯವಾಗಿ ಕಡಿಮೆ ಸಾಧನೆಯಿಂದ ರಕ್ಷಿಸಿದೆ ಎಂದು ತೋರುತ್ತದೆ. ಬೆಳವಣಿಗೆ, ಎರಡನೇ ತ್ರೈಮಾಸಿಕದಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಮತ್ತು ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ಕಂಡುಬರುತ್ತದೆ'' ಎಂದಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಪ್ರಾರಂಭದ ತಿಂಗಳುಗಳಲ್ಲಿ, ಮಾರುಕಟ್ಟೆ ಶೇಕಡಾ 3.9 ಕ್ಕೆ ಏರಿತು. ಮುಂದಿನ ಎರಡು ತಿಂಗಳಲ್ಲಿ ಎಫ್‌ಎಂಸಿಜಿ ವಲಯವು ಶೇ. 4.8 ರಷ್ಟು ಬೆಳವಣಿಗೆಯನ್ನು ಕಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಡೆತಡೆಗಳ ಕಾರಣ ವಿಳಂಬವಾಯಿತು ಎನ್ನಲಾಗಿದೆ.
ಕಚೇರಿಗಳೆಲ್ಲಾ ಭಾಗಶಃ ಪುನಃ ತೆರೆದಿದ್ದರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ಪ್ರಾರಂಭದ ಅವಧಿಯ ನಂತರ ಬೇಡಿಕೆ ಶೇಕಡಾ 5 ಕ್ಕೆ ಏರಿತು. ವರದಿಯ ಪ್ರಕಾರ, ಹೆಚ್ಚಿನ ಬೆಳವಣಿಗೆಯು ಆರಂಭಿಕ ಸಾಂಕ್ರಾಮಿಕ ತಿಂಗಳುಗಳಲ್ಲಿ ಕೇಂದ್ರೀಕೃತವಾಗಿತ್ತು. ಜನರು ಭಯಭೀತರಾಗಿ ಖರೀದಿಸಿದ ಪರಿಣಾಮ ಏರಿಕೆ ಕಂಡಿತು.
ಇನ್ನು ಸ್ನ್ಯಾಕ್ಸ್, ಕ್ಲೀನಿಂಗ್ ವಿಭಾಗದ ಉತ್ಪನ್ನಗಳಲ್ಲಿ ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಬ್ರಾಂಡ್‌ಗಳ ವಸ್ತುಗಳ ಮಾರಾಟವು ಯಶಸ್ವಿಯಾದವು. ಆದರೆ ಸಣ್ಣ ಕಂಪನಿಗಳು ಮಾರಾಟ ಪ್ರಮಾಣವನ್ನು ಕಳೆದುಕೊಂಡಿವೆ ಎಂದು ಕಾಂತರ್ ವರದಿ ಹೇಳಿದೆ.












Click it and Unblock the Notifications