ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಒಡೆತನದ ಜಾಗ್ವಾರ್ ಕಂಪನಿಯಲ್ಲಿ 1000 ಉದ್ಯೋಗ ಕಡಿತಕ್ಕೆ ಪ್ಲ್ಯಾನ್

|
Google Oneindia Kannada News

ಕೊರೊನಾವೈರಸ್ ಲಾಕ್‌ಡೌನ್ ಬಳಿಕ ನೂರಾರು ಕಂಪನಿಗಳು ತಮ್ಮ ನಷ್ಟವನ್ನು ತಗ್ಗಿಸಲು ಉದ್ಯೋಗ ಕಡಿತದ ಮಾರ್ಗವನ್ನು ಹುಡುಕಿಕೊಂಡಿವೆ. ಹೀಗಾಗಿಯೇ ವಿಶ್ವದಲ್ಲಿ ಈಗಾಗಲೇ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ನಿರುದ್ಯೋಗಿಗಳಾಗಿದ್ದಾರೆ. ಇದೀಗ ಟಾಟಾ ಮೋಟಾರ್ಸ್‌ ಒಡೆತನದ ಜಾಗ್ವಾರ್‌ಲ್ಯಾಂಡ್‌ ರೋವರ್‌(JLR‌) ಕೂಡ ಉದ್ಯೋಗ ಕಡಿತದ ಯೋಜನೆ ಮಾಡಿಕೊಂಡಿದೆ.

Recommended Video

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ‌ ಮಾಡೋರಿಗೆ ಈಗ ಒಳ್ಳೆ ಟೈಮ್ | Pre-owned Cars | Oneindia Kannada

ಕೊರೊನಾವೈರಸ್ ತಂದಿಟ್ಟಿರುವ ಬಿಕ್ಕಟ್ಟಿನಿಂದಾಗಿ ಬೇಡಿಕೆ ಭಾರೀ ಪ್ರಮಾಣದಲ್ಲಿ ಬಿದ್ದು ಹೋಗಿದೆ. ಹೀಗಾಗಿ ಆದಾಯ ತೀವ್ರವಾಗಿ ಕುಸಿದಿದ್ದು, ಸುಮಾರು 1,000 ಗುತ್ತಿಗೆ ಆಧಾರದ ಏಜೆನ್ಸಿ ಉದ್ಯೋಗಗಳನ್ನು ಕಡಿತಗೊಳಿಸಲು ಯೋಜನೆ ರೂಪಿಸಿದೆ.

 ಲಾಕ್‌ಡೌನ್ ಎಫೆಕ್ಟ್: ಮೇ ತಿಂಗಳಿನಲ್ಲಿ ವಾಹನ ಮಾರಾಟ 90% ಇಳಿಕೆ ಲಾಕ್‌ಡೌನ್ ಎಫೆಕ್ಟ್: ಮೇ ತಿಂಗಳಿನಲ್ಲಿ ವಾಹನ ಮಾರಾಟ 90% ಇಳಿಕೆ

ಲಾಕ್‌ಡೌನ್ ಜಾರಿಯಾದಗಿನಿಂದ ಮಾರಾಟ ಪ್ರಮಾಣದಲ್ಲಿ 30.9 ಪರ್ಸೆಂಟ್‌ರಷ್ಟು ಕುಸಿತ ಕಂಡುಬಂದಿದ್ದು, ಕಂಪನಿಯು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈ ನಿಟ್ಟಿನಲ್ಲಿ ಬ್ರಿಟನ್‌ನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಜೆಎಲ್‌ಆರ್‌ ಮುಂಬರುವ ತಿಂಗಳುಗಳಲ್ಲಿ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ (ಏಜೆನ್ಸಿ) ನೌಕರರ ಪ್ರಮಾಣವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಕಂಪನಿ ಮೂಲಗಳು ತಿಳಿಸಿದೆ.

Coronavirus Impact:Tata Motors Owned JLR Plans Over 1000 Job Cuts

ಇನ್ನು ಈ ಕುರಿತು ಸಂಸ್ಥೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದು, ಕಾರ್ಯದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಸುಸ್ಥಿರ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಮತ್ತು ವ್ಯವಹಾರದ ದೀರ್ಘ‌ಕಾಲಿಕ ಯಶಸ್ಸು ಕಾಪಾಡುವ ಮೂಲಕ ಕಾರ್ಯದಕ್ಷತೆಯನ್ನು ಮತ್ತಷ್ಟು ಸಾಧಿಸಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ. ಬ್ರಿಟನ್ ‌​ನಲ್ಲಿರುವ ಎಲ್ಲ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಕಡಿತಗೊಳಿಸುವ ಸಾಧ್ಯತೆ ಇದ್ದು, ಈ ಪ್ರಕ್ರಿಯೆಯು ಜುಲೈ ಕೊನೆಯಲ್ಲಿ ಪ್ರಾರಂಭವಾಗಿ ವರ್ಷದುದ್ದಕ್ಕೂ ಇರಲಿದೆ ಎಂದು ಹೇಳಿದೆ.

English summary
Tata Motors owned Jaguar Land Rover (JLR) is planning to cut over 1,000 contract-agency jobs amid the ongoing COVID-19 pandemic pressures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X