ವಾಣಿಜ್ಯ ವಾಹನಗಳ ತಯಾರಕರಿಗೆ 6,000 ಕೋಟಿ ನಷ್ಟ ಸಾಧ್ಯತೆ: ಕ್ರಿಸಿಲ್
ನವದೆಹಲಿ, ಆಗಸ್ಟ್ 20: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್‌ಡೌನ್‌ದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಣಿಜ್ಯ ವಾಹನ ತಯಾರಕರಿಗೆ ಸುಮಾರು 6,000 ಕೋಟಿ ನಿವ್ವಳ ನಷ್ಟ ಅಥವಾ ಒಟ್ಟಾರೆ ಮಾರಾಟದಲ್ಲಿ ಶೇಕಡಾ 30ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ 31,636 ವಾಣಿಜ್ಯ ವಾಹನಗಳ ಮಾರಾಟವಾಗಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇಕಡಾ 85ರಷ್ಟು ಇಳಿಕೆಯಾಗಿದೆ ಎಂದು ಹೇಳಲಾಗಿದೆ.
ಕೈಗಾರಿಕಾ ಚಟುವಟಿಕೆಯ ತೀವ್ರ ಕುಸಿತವು ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳ (ಎಂಎಚ್‌ಸಿವಿ) ಮಾರಾಟವನ್ನು ಕಠಿಣವಾಗಿಸಿದೆ. ಇದು ಉದ್ಯಮದ ಆದಾಯದ ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ.

ವಾಹನ ಸರಕುಗಳ ಪ್ರಮಾಣದ ಬಗ್ಗೆ ಹೊಸ ನಿಯಮ ಹಾಗೂ ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ 2019-20ರಲ್ಲಿ ಮಾರಾಟ ಪ್ರಮಾಣ ಶೇ. 29ರಷ್ಟು ಇಳಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಮತ್ತು ಖಾಸಗಿ ಬಳಕೆಗೆ ಬೇಡಿಕೆ ಇರುವುದರಿಂದ ಲಘು ವಾಣಿಜ್ಯ ವಾಹನಗಳ ಮಾರಾಟ ಸ್ವಲ್ಪ ಉತ್ತಮವಾಗಿದೆ.












Click it and Unblock the Notifications