ಕೆಫೆ ಕಾಫಿ ಡೇ ಖರೀದಿ ಮಾತುಕತೆಯಲ್ಲಿ ಕೋಕಾ ಕೋಲಾ

ಬೆಂಗಳೂರು, ಜೂನ್ 27: ಸ್ಟಾರ್ ಬಕ್ಸ್ ಹಾಗೂ ನೆಸ್ಲೆ ಒಪ್ಪಂದ ಸುದ್ದಿಯ ಬೆನ್ನಲ್ಲೇ ಯುಕೆಯ ಅತಿದೊಡ್ಡ ಕಾಫಿ ಕಂಪನಿ ವೈಟ್ ಬ್ರೆಡ್ ಒಡೆತನದ ಕೋಸ್ಟಾ ಕಾಫಿ ಬ್ರ್ಯಾಂಡನ್ನು ಖರೀದಿಸಿರುವ ಸಾಫ್ಟ್ ಡ್ರಿಂಕ್ಸ್ ಕ್ಷೇತ್ರದ ದಿಗ್ಗಜ ಕೋಕಾ ಕೋಲಾ ಈಗ ಜನಪ್ರಿಯ ಕಾಫಿ ಮಳಿಗೆ ಬ್ರ್ಯಾಂಡ್ ಕೆಫೆ ಕಾಫಿ ಡೇ(ಸಿಸಿಡಿ) ಖರೀದಿ ಮಾತುಕತೆಯಲ್ಲಿದೆ.

ಯುಕೆಯಲ್ಲಿ ಸುಮಾರು 2,400 ಕಾಫಿ ಮಳಿಗೆ ಹಾಗೂ 32 ದೇಶಗಳಲ್ಲಿ 1,400ಕ್ಕೂ ಅಧಿಕ ಕೆಫೆಗಳನ್ನು ಕೋಸ್ಟಾ ಕಾಫಿ ಹೊಂದಿದ್ದು, 5.1 ಬಿಲಿಯನ್ ಡಾಲರ್ ನೊಂದಿಗೆ ಕೋಕಾ ಕೋಲಾ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

ಕೋಕಾ ಕೋಲಾದ ಅಟ್ಲಾಂಟಾದ ಕೇಂದ್ರ ಕಚೇರಿಯಲ್ಲಿ ಕೆಫೆ ಕಾಫಿ ಡೇಯಲ್ಲಿನ ಷೇರುಗಳ ಖರೀದಿಗೆ ಮಾತುಕತೆ ಆರಂಭಗೊಂಡಿರುವ ಸುದ್ದಿ ಬಂದಿದೆ. ಏರಿಯೇಟೆಡ್ ತಂಪು ಪಾನೀಯ ಕ್ಷೇತ್ರಕ್ಕೆ ಹೋಲಿಸಿದರೆ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಕೆಫೆ ವ್ಯವಹಾರದಲ್ಲಿ ಪ್ರಗತಿ ಹೊಂದಲು ಕೋಕಾ ಕೋಲಾಗೆ ಈ ಡೀಲ್ ಸಹಕಾರಿಯಾಗಲಿದೆ.

Coca Cola initiated talks to acquire major stake in CCD

ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ. ಭಾರತದಲ್ಲಿ ವಿಸ್ತೃತವಾದ ಕಾಫಿ ಮಳಿಗೆಯನ್ನು ವಿಸ್ತರಿಸುವಲ್ಲಿ ಸಂಸ್ಥೆಯ ಸ್ಥಾಪಕ ವಿಜಿ ಸಿದ್ದಾರ್ಥ ಅವರ ಪಾತ್ರ ದೊಡ್ಡದು. 1996ರಿಂದ ಇಲ್ಲಿ ತನಕ ಹಲವು ಏರಿಳಿತ ಕಂಡಿರುವ ಸ್ವದೇಶಿ ಬ್ರ್ಯಾಂಡ್ ಕೆಫೆ ಕಾಫಿ ಡೇ ಈಗ ಎಂಎನ್ ಸಿ ಕಂಪನಿ ಪಾಲಾಗುವುದೆ ಎಂಬ ಪ್ರಶ್ನೆ ಎದ್ದಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಸಂಸ್ಥೆಯ ವಕ್ತಾರರಿಂದಲೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

ತಂಪು ಪಾನೀಯ, ಕ್ರೀಡಾ ಪಾನೀಯ ಸೇರಿದಂತೆ ಸುಮಾರು 500ಕ್ಕೂ ಅಧಿಕ ಬ್ರ್ಯಾಂಡ್ ಗಳನ್ನು ಕೋಕಾ ಕೋಲಾ ಹೊಂದಿದೆ. 1995ರಲ್ಲಿ ಕೋಸ್ಟಾ ಕಾಫಿ ಖರೀದಿಸಿದ್ದ ವೈಟ್ ಬ್ರೆಡ್ ಸಂಸ್ಥೆ, ಇತ್ತೀಚೆಗೆ ಕೋಸ್ಟಾ ಕಾಫಿ ವಿಸ್ತರಣೆಗಾಗಿ ಹೆಚ್ಚಿನ ಹೂಡಿಕೆಗೆ ಮುಂದಾಗಿತ್ತು. 123 ಮಿಲಿಯನ್ ಪೌಂಡ್ ಆದಾಯವನ್ನು ಗಳಿಸಿತ್ತು. ಕೋಕಾ ಕೋಲಾದ ಪ್ರಮುಖ ಪ್ರತಿಸ್ಪರ್ಧಿ ಪೆಪ್ಸಿ ಕೋ, ಇಸ್ರೇಲಿನ ಡಿಐವೈ ಸೆಟ್ಜರ್ ಕಂಪನಿ ಸೋಡಾ ಸ್ಟ್ರೀಮ್ ಖರೀದಿಗೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+