Closing Bell: ಸೆನ್ಸೆಕ್ಸ್ ಹೆಚ್ಚಳ, ನಿಫ್ಟಿ ಕುಸಿತ
ನವದೆಹಲಿ, ಫೆಬ್ರವರಿ 12: ಭಾರತೀಯ ಷೇರುಪೇಟೆ ಶುಕ್ರವಾರ ಸಾಕಷ್ಟು ಏರಿಳಿತಗಳ ನಡುವೆ ಸಮವಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ದಾಖಲಿಸದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕುಸಿತಕ್ಕೆ ಸಾಕ್ಷಿಯಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 12.78 ಪಾಯಿಂಟ್ಸ್ ಅಥವಾ ಶೇಕಡಾ 0.02ರಷ್ಟು ಏರಿಕೆಗೊಂಡು 51,544.30 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 10 ಪಾಯಿಂಟ್ ಅಥವಾ ಶೇಕಡಾ 0.07 ರಷ್ಟು ಇಳಿಕೆಗೊಂಡು 15,163.30 ಪಾಯಿಂಟ್ಸ್‌ಗೆ ತಲುಪಿದೆ. ಇಂದು ಸುಮಾರು 1400 ಷೇರುಗಳು ಏರಿಕೆಗೊಂಡರೆ, 1520 ಷೇರುಗಳು ಕುಸಿದವು, ಮತ್ತು 159 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಐಟಿಸಿ, ಗೇಲ್, ಒಎನ್‌ಜಿಸಿ, ಸನ್ ಫಾರ್ಮಾ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಪ್ರಮುಖ ನಷ್ಟ ಅನುಭವಿಸಿದ ಷೇರುಗಳಾಗಿವೆ, ಇನ್ನು ಅದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್ ಮತ್ತು ವಿಪ್ರೋ ಲಾಭಗಳಿಸಿದ ಷೇರುಗಳಾಗಿವೆ.

ಇಂದು ಬ್ಯಾಂಕ್ ಮತ್ತು ಐಟಿ ಹೊರತುಪಡಿಸಿ ಎಲ್ಲಾ ಇತರ ವಲಯದ ಸೂಚ್ಯಂಕಗಳಾದ ಲೋಹ, ಔಷಧ, ಎಫ್‌ಎಂಸಿಜಿ ಮತ್ತು ಪವರ್ ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಇನ್ನು ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ 11 ಪೈಸೆ ಏರಿಕೆ ಕಂಡು ಪ್ರತಿ ಡಾಲರ್‌ಗೆ 72.75 ರೂಪಾಯಿಗೆ ತಲುಪಿದೆ.












Click it and Unblock the Notifications