ದಕ್ಷಿಣ ಆಫ್ರಿಕಾಕ್ಕೆ ಲಗ್ಗೆ ಇಟ್ಟ ಅಮ್ಮೆಂಬಳ ಪೈಗಳ ಬ್ಯಾಂಕ್

ಜೋಹಾನ್ಸ್ ಬರ್ಗ್, ಮೇ.21: ಕರ್ನಾಟಕದ ಅಮ್ಮೆಂಬಳ ಸುಬ್ಬರಾವ್ ಪೈಗಳು ಸ್ಥಾಪಿಸಿದ ಕೆನರಾ ಬ್ಯಾಂಕ್ ಈಗ ದಕ್ಷಿಣ ಆಫ್ರಿಕಾದಲ್ಲಿ ತನ್ನ ಪ್ರಥಮ ಬ್ರ್ಯಾಂಚ್ ಆರಂಭಿಸಿದೆ. ಜಾಗತಿಕ ವಿಸ್ತರಣೆ ಯೋಜನೆಯ ಅಂಗವಾಗಿ ಜೋಹಾನ್ಸ್ ಬರ್ಗ್ ನಲ್ಲಿ ಹೊಸ ಶಾಖೆ ಆರಂಭಗೊಂಡಿದೆ. ಭಾರತದಲ್ಲಿ ಸುಮಾರು 4,750 ಶಾಖೆಗಳನ್ನು ಹೊಂದಿದ್ದು, ಲಂಡನ್, ಹಾಂಕಾಂಗ್, ಶಾಂಘೈ, ಬಹರೇನ್ ಹಾಗೂ ಮಾಸ್ಕೋ ನಗರಗಳಲ್ಲೂ ಬ್ರ್ಯಾಂಚ್ ಹೊಂದಿದೆ.

ಕಳೆದ ವರ್ಷದಲ್ಲೆ ಸುಮಾರು 1,027 ಶಾಖೆಗಳನ್ನು ಆರಂಭಿಸಿದ್ದ ಕೆನರಾ ಬ್ಯಾಂಕ್ ಇನ್ನೂ 1,200 ಶಾಖೆಗಳನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದೆ ಎಂದು ಕೆನರಾ ಬ್ಯಾಂಕಿನ ಚೇರ್ಮನ್, ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ದುಬೆ ಹೇಳಿದ್ದಾರೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕೆನರಾ ಬ್ಯಾಂಕಿನ ವಿಸ್ತರಣೆ ಯೋಜನೆ ಜಾರಿಯಲ್ಲಿದೆ, ಜೋಹಾನ್ಸ್ ಬರ್ಗ್ ನಂತರ ಡರ್ಬನ್, ಕೇಪ್ ಟೌನ್, ಪ್ರಿಟೋರಿಯಾ ನಗರಗಳಲ್ಲಿ ಕೆನರಾ ಬ್ಯಾಂಕ್ ಶಾಖೆಗಳನ್ನು ಕಾಣಬಹುದಾಗಿದೆ.

Canara Bank enters South Africa; opens branch in Johannesburg

ಭಾರತೀಯ ಮೂಲದ ವ್ಯಕ್ತಿಗಳು, ಎನ್ನಾರೈಗಳಲ್ಲದೆ ಸ್ಥಳೀಯರಿಗೂ ಬ್ಯಾಂಕಿನಿಂದ ವಿಶೇಷ ಸೌಲಭ್ಯ ಒದಗಿಸಲಾಗುತ್ತದೆ. ಲಂಡನ್ ಹಾಗೂ ಹಾಂಕಾಂಗ್ ನಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಸಾಗರೋತ್ತರ ವಿಭಾಗದಲ್ಲಿ ಕಳೆದ ವರ್ಷ ಉತ್ತಮ ವಹಿವಾಟು ನಡೆಸಿದ್ದು ಶೇ 2 ರಿಂದ ಶೇ 6 ರಷ್ಟು ಏರಿಕೆ ಕಂಡಿದೆ. ಈ ಪ್ರಮಾಣವನ್ನು ಶೇ 10ಕ್ಕೆ ಏರಿಸುವ ಇರಾದೆ ಇದೆ ಎಂದರು.

ದಕ್ಷಿಣ ಆಫ್ರಿಕಾದ ನಂತರ ತಾಂಜಾನಿಯಾ, ಮೊಝಾಂಬಿಕ್, ಜರ್ಮನಿ, ಮೆಕ್ಸಿಕೋ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಗಳಲ್ಲಿ ಕೆನರಾ ಬ್ಯಾಂಕ್ ಶಾಖೆ ಆರಂಭಿಸುವ ಯೋಜನೆ ಇದೆ ಎಂದು ದುಬೆ ಹೇಳಿದರು. ಕೆನರಾ ಬ್ಯಾಂಕ್ ಸಲ್ಲಿಸಿರುವ ವಿಸ್ತರಣಾ ಯೋಜನೆ ಪೈಕಿ 20 ಪ್ರಸ್ತಾವನೆಗಳಿಗೆ ಆರ್ ಬಿಐ ಸಮ್ಮಿಸಿದೆ. ನ್ಯೂಯಾರ್ಕ್ ನಲ್ಲಿ ಮುಂದಿನ ಬ್ರ್ಯಾಂಚ್ ಆರಂಭಿಸಲಾಗುತ್ತದೆ ಎಂದಿದ್ದಾರೆ.

1906ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಕೆನರಾ ಬ್ಯಾಂಕ್ 4,750 ಶಾಖೆಗಳು, 6,312 ಎಟಿಎಂಗಳು, 102 ವಿಶೇಷ ಇ ಲಾಂಜ್ ಗಳನ್ನು ಹೊಂದಿದೆ. ಇ ಪಾಸ್ ಬುಕ್, ಆಂಡ್ರಾಯ್ಡ್ ಫೋನ್ ಗಳಲ್ಲಿ ಬ್ಯಾಂಕ್ ಅಪ್ಲಿಕೇಷನ್ ನೀಡುತ್ತಿದೆ. ಐಎಸ್ ಒ ಪ್ರಮಾಣ ಪತ್ರ ಹೊಂದಿರುವ ಕೆನರಾಬ್ಯಾಂಕ್ ರೈತರಿಗೂ ಕ್ರ್ರೆಡಿಟ್ ಕಾರ್ಡ್ ನೀಡುತ್ತಿದ್ದು, ಆನ್ ಲೈನ್ ಸೇವಿಂಗ್ಸ್ ಬ್ಯಾಂಕ್ ಹಾಗೂ ಪಿಪಿಎಫ್ ಖಾತೆ ವ್ಯವಸ್ಥೆಯನ್ನು ಕಲ್ಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+