ಆನ್ ಲೈನ್ ಮೂಲಕ ತಿರುನೆಲ್ವೇಲಿ ಹಲ್ವಾ ಖರೀದಿಸಿ
ಬೆಂಗಳೂರು, ಮಾ. 14: ಆನ್ ಲೈನ್ ಮುಖಾಂತರ ಬಟ್ಟೆ, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಖರೀದಿಸುತ್ತಿದ್ದವರು ಇನ್ನು ಮುಂದೆ ಆನ್ ಲೈನ್ ನಲ್ಲೇ ಬಾಯಿ ಸಿಹಿ ಮಾಡಿಕೊಳ್ಳಬಹುದು.
ಅಪ್ಪಟ ತಿರುನೆಲ್ವೇಲಿ ಹಲ್ವಾ ವನ್ನು ಈಗ ಆನ್ ಲೈನ್ ಮೂಲಕವೂ ಆರ್ಡರ್ ಮಾಡಬಹುದು. ಶತಮಾನಗಳಿಂದ ಪ್ರಸಿದ್ಧಿ ಪಡೆದಿರುವ 'ತಿರುನೆಲ್ವೇಲಿ ಹಲ್ವಾ' ಆಧುನಿಕತೆಗೆ ಒಗ್ಗಿಕೊಂಡು ಆನ್ ಲೈನ್ ಪ್ರಪಂಚಕ್ಕೂ ಕಾಲಿಟ್ಟಿದೆ.[149 ರೂಪಾಯಿಗೆ ವೆಬ್ ತಾಣದ ಮಾಲೀಕತ್ವ!]

ಚೆನ್ನೈ ನ ಎಸ್ ಆರ್ ಎಂ ವಿವಿಯ ಆರು ಜನ ವಿದ್ಯಾರ್ಥಿಗಳು ತಮ್ಮ ಇ ಕಾಮರ್ಸ್ ಧ್ಯೇಯದಡಿ ಆನ್ ಲೈನ್ ಮುಖಾಂತರ ಹಲ್ವಾ ಮಾರಾಟ ಮಾಡಲು ತೊಡಗಿದ್ದಾರೆ. ಟ್ರೇಡಿಷನಲ್ ಟೇಸ್ಟ್ ಆಫ್ ಸೌತ್ ಇಂಡಿಯಾ ಎಂಬ ಟ್ಯಾಗ್ ಲೈನ್ ಅಡಿ ಆರು ತಿಂಗಳ ಹಿಂದೆ ಆರಂಭವಾದ ಹಲ್ವಾ ಕಡಾಯಿ ಇದೀಗ ದೇಶಾದ್ಯಂತ ವ್ಯಾಪಿಸಲಿದೆ.
15 ಸಾವಿರ ರೂಪಾಯಿಗಳ ಹೂಡಿಕೆಯಲ್ಲಿ ಮೋಸಿಸ್ ಧರ್ಮಪಾಲನ್ ಎಂಬುವರು ಆನ್ ಲೈನ್ ಚಿಂತನೆಯನ್ನು ಆರಂಭಿಸಿದ್ದು ಯಶಸ್ವಿಯಾಗಿದೆ. ದುಬೈ, ಸಿಂಗಪುರ್, ಮಲೇಷಿಯಾ ಮತ್ತು ಯುಕೆಗೂ ಯೋಜನೆ ವಿಸ್ತರಿಸುವ ಆಲೋಚನೆಯಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲೂ ಹಲ್ವಾ ಕಡಾಯಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಈಗಾಗಲೇ 81 ಸಾವಿರಕ್ಕೂ ಅಧಿಕ ಜನರು ಪೇಜ್ ಲೈಕ್ ಮಾಡಿದ್ದಾರೆ.
ಆನ್ ಲೈನ್ ಮೂಲಕ ಆರ್ಡರ್ ಮಾಡಿ












Click it and Unblock the Notifications