ಬಜೆಟ್ 2021: ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಡಿತ?

ನವದೆಹಲಿ, ಜನವರಿ 25: ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಟೆಕ್ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದವು. ಆನಂತರ ವರ್ಕ್ ಫ್ರಂ ಹೋಂ ಕೂಡ ಉದ್ಯೋಗ ವ್ಯವಸ್ಥೆಯ ಒಂದು ಭಾಗವೇ ಆಗುವಷ್ಟರ ಮಟ್ಟಿಗೆ ಕಂಪನಿಗಳು ಪ್ರೇರೇಪಿಸಿದವು.

ಈ ಒಂದು ವರ್ಷದ ಅವಧಿಯಲ್ಲಿ ಹಲವು ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿವೆ. ಭವಿಷ್ಯದಲ್ಲಿಯೂ ಇದು ಮುಂದುವರೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಮಧ್ಯೆ ಮನೆಯಿಂದ ಕೆಲಸ ಮಾಡುವ ನೌಕರರಿಗೆ ಸರ್ಕಾರ ಬಜೆಟ್ ‌ನಲ್ಲಿ ತೆರಿಗೆ ವಿನಾಯಿತಿ ನೀಡಬಹುದೇ ಎಂಬ ನಿರೀಕ್ಷೆ ವ್ಯಕ್ತಗೊಂಡಿದೆ. ಮನೆಯಿಂದ ಕೆಲಸ ಮಾಡುವ ನೌಕರರು ಈ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಸ್ವಲ್ಪ ಪರಿಹಾರ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಸಾಧ್ಯತೆಯನ್ನು ತೆರಿಗೆ ಸಲಹಾ ಸಂಸ್ಥೆ ಪಿಡಬ್ಲುಸಿ ಇಂಡಿಯಾದ ಹಿರಿಯ ಅಧಿಕಾರಿ ರಾಹುಲ್ ಗರ್ಗ್ ವಿವರಿಸಿದ್ದಾರೆ.

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಸದ್ಯಕ್ಕೆ ಬಜೆಟ್ ಪೂರ್ವ ಅಧಿವೇಶನಗಳು ನಡೆಯುತ್ತಿದ್ದು, ವರ್ಕ್ ಫ್ರಂ ಹೋಂನಲ್ಲಿರುವವರಿಗೆ ಈ ಬಾರಿ ತೆರಿಗೆಯಲ್ಲಿ ಕಡಿತ ಸಿಗುವ ಕುರಿತು ಮಾತು ಬಂದಿದೆ.

Budget 2021: Government May Consider Tax Deduction For Working From Home Employees

ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಖರ್ಚು ಹೆಚ್ಚಾಗಿದೆ. ಇಂಟರ್ ನೆಟ್, ಪವರ್ ಬ್ಯಾಕಪ್, ಎಲೆಕ್ಟ್ರಾನಿಕ್ ಉಪಕರಣಗಳಿಗಾಗಿ ನೌಕರರು ಹಣ ಖರ್ಚು ಮಾಡುತ್ತಿದ್ದಾರೆ. ಕೆಲವು ದೊಡ್ಡ ಕಂಪನಿಗಳು ನೌಕರರ ಈ ಸೌಲಭ್ಯಗಳಿಗೆ ಭತ್ಯೆ ನೀಡಿದರೆ, ಬಹುಪಾಲು ಕಂಪನಿಗಳು ನೌಕರರ ಮೇಲೇ ಈ ಖರ್ಚಿನ ಹೊಣೆ ಹೊರಿಸಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ನೀಡಬಹುದು ಎಂಬ ನಿರೀಕ್ಷೆಯಿದೆ.

ಮನೆಯಿಂದ ಕೆಲಸ ಮಾಡುವ ನೌಕರರು ಮಾಡುವ ಖರ್ಚುಗಳ ಆಧಾರದಲ್ಲಿ ಕಡಿತ ಸಿಗಬಹುದೇ ಎಂಬ ಕುರಿತು ಸರ್ಕಾರ ಚಿಂತಿಸಬೇಕೆಂಬ ಸಲಹೆಗಳು ವ್ಯಕ್ತವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+