ಬಿಎಸ್ ಎನ್‍ಎಲ್ ನಿಂದ ಗ್ರಾಹಕರಿಗೆ 3 ಬಂಪರ್ ಆಫರ್!
ರಿಲಯನ್ಸ್ ಜಿಯೋಗೆ ಸ್ಪರ್ಧೆ ನೀಡಲು ಈಗ ಬಿಎಸ್ ಎನ್‍ಎಲ್ ಕಡಿಮೆ ಬೆಲೆಗೆ 3ಜಿ ಡೇಟಾ ನೀಡುವ ಪ್ರಮುಖ ಮೂರು ಪ್ಲಾನ್ ಬಿಡುಗಡೆ ಮಾಡಿದೆ.
ನವದೆಹಲಿ, ಏಪ್ರಿಲ್ 23 : ಮೊಬೈಲ್ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಟೆಲಿಕಾಂ ಕಂಪನಿಗಳು ಬೆಲೆ ಸಮರದಲ್ಲಿ ನಾನಾ ಆಫರ್ ಗಳನ್ನು ನೀಡುತ್ತಿವೆ. ಅದರಂತೆ ಬಿಎಸ್ ಎನ್‌ಎಲ್ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಪ್ರಮುಖ ಮೂರು ಕೊಡುಗೆಗಳನ್ನು ಹೊತ್ತು ತಂದಿದೆ.
ಬಿಎಸ್ ಎನ್‌ಎಲ್ ಸಂಸ್ಥೆಯು 333 ರು., 349 ಮತ್ತು 395 ರು ದರದಲ್ಲಿ ಮೂರು ಹೊಸ ಕೊಡುಗೆಗಳನ್ನು ಘೋಷಿಸಿದೆ. ಜಿಯೋ ಮಾರುಕಟ್ಟೆ ಪ್ರವೇಶದಿಂದ ಕರೆ ಮತ್ತು ಡೇಟಾಕ್ಕೆ ಸಂಬಂಧಿಸಿದಂತೆ ಸೇವಾದಾತ ಸಂಸ್ಥೆಗಳ ಮಧ್ಯೆ ದರ ಸಮರ ಆರಂಭವಾಗಿದ್ದರಿಂದ ಬಿಎಸ್ ಎನ್‌ಎಲ್ ಈ ಮೂರು ಪ್ರಮುಖ ಆಫರ್ ಗಳನ್ನು ನೀಡಲು ಮುಂದಾಗಿದೆ.

349 ರು. ಪ್ಲಾನ್ : 'ದಿಲ್ ಖೋಲ್ ಕೆ ಬೋಲ್' ಕೊಡುಗೆಯಲ್ಲಿ 349 ರು. ಪಾವತಿಸಿದರೆ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು ಮತ್ತು ಪ್ರತಿ ದಿನ 3ಜಿ ವೇಗದಲ್ಲಿ 2ಜಿಬಿ ಡೇಟಾ ಸಿಗಲಿದೆ (ಪ್ರತಿ ಸೆಕೆಂಡ್‌ಗೆ 80ಕಿಲೊ ಬೈಟ್‌ನಂತೆ).
333 ರು. ಪ್ಲಾನ್: 'ಟ್ರಿಪಲ್ ಏಸ್' ಕೊಡುಗೆಯಲ್ಲಿ 333ಕ್ಕೆ 90 ದಿನಗಳ ಅವಧಿ ಇದ್ದು, 3 ಜಿಬಿವರೆಗೆ 3ಜಿ ವೇಗದಲ್ಲಿ ಅನಿಯಮಿತ ಡೇಟಾ ಸಿಗಲಿದೆ.
395 ಪ್ಲಾನ್: 'ನೇಲೆ ಪೆ ದೇಲಾ' ಕೊಡುಗೆಯಲ್ಲಿ 395 ಪಾವತಿಸಿದರೆ ಬಿಎಸ್ ಎನ್‌ಎಲ್ ನೆಟ್‌ವರ್ಕ್‌ಗೆ 3,000 ನಿಮಿಷಗಳ ಕರೆ ಮತ್ತು ಬೇರೆ ನೆಟ್‌ವರ್ಕ್‌ಗಳಿಗೆ 1,800 ನಿಮಿಷದ ಕರೆ ಸೌಲಭ್ಯವಿದೆ. '3ಜಿ ' ವೇಗದಲ್ಲಿ ಪ್ರತಿ ದಿನ 2ಜಿಬಿ ಡೇಟಾ ಬಳಸಬಹುದು. ಅವಧಿ 71 ದಿನ.












Click it and Unblock the Notifications