ಇಂಟರ್ನೆಟ್ ಟೆಲಿಫೋನಿ ಸೇವೆ ಆರಂಭಿಸಿದ ಬಿಎಸ್ಎನ್ಎಲ್
ಬೆಂಗಳೂರು, ಜುಲೈ 12: ದೇಶದ ಮೊಟ್ಟ ಮೊದಲ ಇಂಟರ್ನೆಟ್ ಟೆಲಿಫೋನಿ ಆರಂಭಿಸಿರುದಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಬುಧವಾರದಂದು ಘೋಷಿಸಿದೆ.
ಬಿಎಸ್ಎನ್ಎಲ್ ನ ವಿಂಗ್ಸ್ ಅಪ್ಲಿಕೇಷನ್ ಬಳಸಿ, ಯಾವುದೇ ಟೆಲಿಫೋನ್ ಸಂಖ್ಯೆಗೆ ಕರೆ ಮಾಡಬಹುದು. ಜುಲೈ 25ರಿಂದ ಈ ಹೊಸ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ.
ವಾರ್ಷಿಕವಾಗಿ 1,099 ರು ಪಾವತಿಸಿ, ಇಂಟರ್ನೆಟ್ ಅಥವಾ ವೈಫೈ ಇದ್ದವರು ಇಂಟರ್ನೆಟ್ ಟೆಲಿಫೋನಿ ಸೇವೆ ಬಳಸಬಹುದಾಗಿದೆ. ವಾಯ್ಸ್ ಕಾಲ್ ಕೂಡಾ ಮಾಡಬಹುದು.

ಮೊಬೈಲ್ ಅಪ್ಲಿಕೇಷನ್ ಹಾಗೂ ನಿಮ್ಮ ಬಿಎಸ್ಎನ್ಎಲ್ ಸಿಮ್ ವುಳ್ಳ ಮೊಬೈಲ್ ಸಂಖ್ಯೆಯನ್ನು ಜೋಡಿಸಬೇಕಾಗುತ್ತದೆ. ಆದರೆ, ವಿಂಗ್ಸ್ ಅಪ್ಲಿಕೇಷನ್ಸ್ ಬಳಕೆದಾರರು ಅದರಲ್ಲೂ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಗ್ರಾಹಕರು ಒಳಬರುವ ಕರೆಗಳನ್ನು ಆಪ್ ಮೂಲಕ ಸ್ವೀಕರಿಸಬಹುದು ಎಂದು ಬಿಎಸ್ಎನ್ಎಲ್ ಚೇರ್ಮನ್ ಅನುಪಮ್ ಶ್ರೀವಾಸ್ತವ ಹೇಳಿದರು.












Click it and Unblock the Notifications