ಏರ್ಟೆಲ್, ವೊಡಾಫೋನ್, ಜಿಯೋ ಬಳಿಕ ಈಗ ಬಿಎಸ್‌ಎನ್‌ಎಲ್ ಶಾಕ್
ನವದೆಹಲಿ, ನವೆಂಬರ್ 22: ಡಿಸೆಂಬರ್ ತಿಂಗಳಿನಿಂದ ಮೊಬೈಲ್ ಫೋನ್ ಬಳಕೆದಾರರು ತಮ್ಮ ದೂರಸಂಪರ್ಕ ಸೇವೆಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವುದು ಅನಿವಾರ್ಯ. ಇಷ್ಟು ದಿನ ದರ ಇಳಿಕೆಯ ಸಮರ ನಡೆಸಿದ್ದ ದೂರಸಂಪರ್ಕ ಕಂಪೆನಿಗಳು, ಈಗ ಏಕಾಏಕಿ ದರ ಏರಿಕೆಗೆ ಜಿದ್ದಿಗೆ ಬಿದ್ದಿದ್ದಾರೆ.
ಖಾಸಗಿ ದೂರಸಂಪರ್ಕ ಕಂಪೆನಿಗಳು ಮಾತ್ರವಲ್ಲದೆ, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡ ತನ್ನ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ಮುಟ್ಟಿಸಲು ಮುಂದಾಗಿದೆ. ಹೀಗಾಗಿ ದೇಶದ ಎಲ್ಲ ನೆಟ್‌ವರ್ಕ್ ಸೇವಾದಾರರ ಗ್ರಾಹಕರೂ ಡಿ.1ರಿಂದ ತಮ್ಮ ಮೊಬೈಲ್ ಸೇವೆಗಳಿಗೆ ಹೆಚ್ಚಿನ ಹಣ ತರಬೇಕಾಗುವುದು ಅನಿವಾರ್ಯ.
ಡಿ.1ರಿಂದ ಅನ್ವಯವಾಗುವಂತೆ ತನ್ನ ಮೊಬೈಲ್ ಟಾರಿಫ್‌ಗಳ ದರ ಏರಿಕೆ ಮಾಡುವುದಾಗಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಪ್ರಕಟಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಸೇವೆಗಳ ಮೇಲೆ ದರ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದವು. ಅದರ ಬೆನ್ನಲ್ಲೇ ಒಂದು ಕಾಲದಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡಿದ್ದ ರಿಲಯನ್ಸ್ ಜಿಯೋ ಸಹ ಮುಂದಿನ ತಿಂಗಳ ಆರಂಭದಿಂದ ಸೇವಾ ದರ ಹೆಚ್ಚಿಸುವುದಾಗಿ ತಿಳಿಸಿತ್ತು.

ಬಿಎಸ್ಎನ್ಎಲ್ ದರ ಏರಿಕೆ
ಬಿಎಸ್‌ಎನ್ಎಲ್ ತನ್ನ ಈಗಿನ ಧ್ವನಿ ಮತ್ತು ಡೇಟಾ ಟಾರಿಫ್‌ಗಳ ಪರಾಮರ್ಶೆ ಮಾಡುತ್ತಿದೆ. ತನ್ನ ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಹಾಗೂ ಡೇಟಾ ಸೇವೆಗಳ ವಿವಿಧ ಟಾರಿಫ್‌ಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂಬ ಪರಿಶೀಲನೆ ನಡೆಸುತ್ತಿದೆ. ಈ ನಾಲ್ಕೂ ದೂರಸಂಪರ್ಕ ಕಂಪೆನಿಗಳು ಎಷ್ಟು ದರ ಹೆಚ್ಚಳ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ.

ಎಂಟಿಎನ್ಎಲ್-ಬಿಎಸ್ಎನ್ಎಲ್ ವಿಲೀನ
ನಷ್ಟದಲ್ಲಿರುವ ಎಂಟಿಎನ್‌ಎಲ್ಅನ್ನು ಬಿಎಸ್‌ಎನ್‌ಎಲ್ ಜತೆ ವಿಲೀನಗೊಳಿಸಲು ಇತ್ತೀಚೆಗಷ್ಟೇ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ಅಲ್ಲದೆ, ಸರ್ಕಾರವು ಸುದೀರ್ಘ ಕಾಲದಿಂದ ಕಾಯುತ್ತಿದ್ದ ಕಂಪೆನಿಗಳಿಗೆ 4ಜಿ ತರಂಗಾಂತರ ಹಂಚಿಕೆ ಮಾಡುವ ವಿಚಾರಕ್ಕೆ ಕೂಡ ಅನುಮತಿ ನೀಡಿತ್ತು. ಎಂಟಿಎನ್‌ಎಲ್-ಬಿಎಸ್ಎನ್ಎಲ್ ಸುಧಾರಣೆಗಾಗಿ ಸರ್ಕಾರವು ಎರಡೂ ಕಂಪೆನಿಗಳ ಸುಮಾರು 38,000 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ನಗದಾಗಿ ಪರಿವರ್ತಿಸಿ 29,937 ಕೋಟಿ ರೂ. ಹೂಡಿಕೆಗೆ ಚಿಂತನೆ ನಡೆಸಿದೆ. ಎರಡೂ ಕಂಪೆನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು 15,000 ಕೋಟಿ ರೂ. ಸಾವರಿನ್ ಬಾಂಡ್ ಎತ್ತಲಿವೆ.

ಖಾಸಗಿ ಕಂಪೆನಿಗಳಿಂದ ದರ ಹೆಚ್ಚಳ
ನಷ್ಟದಲ್ಲಿರುವ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಡಿ.1ರಿಂದ ಟಾರಿಫ್ ದರಗಳಲ್ಲಿ ಏರಿಕೆ ಮಾಡುವುದಾಗಿ ತಿಳಿಸಿದ್ದವು. ಎರಡು ದಿನಗಳ ಬಳಿಕ ಜಿಯೋ ಕೂಡ ದರ ಏರಿಕೆಯ ಪ್ರಕಟಣೆ ಮಾಡಿತ್ತು. ಈ ಮೂರೂ ಕಂಪೆನಿಗಳು 92 ಸಾವಿರ ಕೋಟಿ ರೂ. ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಉಳಿಸಿಕೊಂಡಿದ್ದು, ಸೀಮಿತ ಅವಧಿಯ ಒಳಗೆ ಸರ್ಕಾರಕ್ಕೆ ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೀಗಾಗಿ ಈ ಕಂಪೆನಿಗಳಿಗೆ ಅಧಿಕ ಹೊರೆಯಾಗಿದ್ದು, ಇದಕ್ಕಾಗಿ ದರ ಏರಿಕೆಗೆ ಮುಂದಾಗಿವೆ.

ಬಳಕೆದಾರರ ಸಂಖ್ಯೆ ಇಳಿಕೆ-ಏರಿಕೆ
ಬೆಲೆ ಏರಿಕೆಯ ನಡುವೆಯೇ ಸಂಸ್ಥೆಗಳು ಇನ್ನಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ. ಏರ್‌ಟೆಲ್ 23.8 ಲಕ್ಷ ಮತ್ತು ವೊಡಾಫೋನ್ ಐಡಿಯಾ 25.7 ಲಕ್ಷ ಬಳಕೆದಾರರನ್ನು ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಕಳೆದುಕೊಂಡಿವೆ. ಆದರೆ ಜಿಯೋ ಮತ್ತು ಬಿಎಸ್‌ಎನ್‌ಎಲ್‌ನತ್ತ ಗ್ರಾಹಕರು ಹೆಚ್ಚು ಒಲವು ತೋರಿಸಿದ್ದಾರೆ. ಜಿಯೋ ಸೆಪ್ಟೆಂಬರ್ ತಿಂಗಳಲ್ಲಿ 69.83 ಲಕ್ಷ ಬಳಕೆದಾರರನ್ನು ಹೊಂದಿದ್ದರೆ, ಬಿಎಸ್‌ಎನ್‌ಎಲ್ 7.37 ಲಕ್ಷ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications