ಮಾನವ ಸಂಬಂಧದ ಕತೆ ಹೇಳುವ ಬ್ರಿಟಿಷ್‌ ಏರ್‌ವೇಸ್ ವಿಡಿಯೋ

Subscribe to Oneindia Kannada

ಬೆಂಗಳೂರು, ಮಾರ್ಚ್, 16: ಇದೊಂದು ವಿಡಿಯೋ ಮಾನವ ಸಂಬಂಧಗಳ ಮೌಲ್ಯವನ್ನು ಸಾರಿ ಹೇಳುತ್ತದೆ. ಮಗನನನ್ನು ಇಂಗ್ಲೆಂಡ್ ನಲ್ಲಿ ಭೇಟಿ ಮಾಡಿ ಭಾರತಕ್ಕೆ ಹಿಂದಿರುಗುತ್ತಿದ್ದ ಹಿರಿಯ ಜೀವವನ್ನು ಸಾಂತ್ವನ ಮಾಡುವ ಪರಿ ಎಂಥವರನ್ನು ಒಂದು ಕ್ಷಣ ಮೂಢರನ್ನಾಗಿಸುತ್ತದೆ.

ಗಗನ ಸಖಿ ಮತ್ತು ಹಿರಿಯ ಜೀವದ ನಡುವಿನ ಬಾಂಧವ್ಯದ ಬದುಕನ್ನು ನೋಡಿಯೇ ಸವಿಯಬೇಕು. ವಿಮಾನದ ಸಿಬ್ಬಂದಿ ತಮ್ಮ ಪ್ರಯಾಣಿಕರನ್ನು ಕಾಣುವ ಬಗೆ, ಗಟ್ಟಿಗೊಳ್ಳುವ ಬಾಂಧವ್ಯ ಎಲ್ಲವೂ ಇಲ್ಲಿ ಕಾಣಸಿಗುತ್ತದೆ.[ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ]

1924ರಿಂದ ಭಾರತನ್ನು ಪ್ರೀತಿಸುತ್ತಲೇ ಬಂದಿರುವ ಬ್ರಿಟಿಷ್ ಏರ್ ವೇಸ್ ನ ಸಂಬಂಧಗಳ ಒಟ್ಟು ಮೌಲ್ಯ ಈ ವಿಡಿಯೋದಲ್ಲಿದೆ. ವಿಮಾನ ಪ್ರಯಾಣ ಇಲ್ಲಿ ಕೇವಲ ಪ್ರಯಾಣವಲ್ಲ. ಮನುಷ್ಯರ ನಡುವಿನ ಸಂಬಂಧ ಸೇತು ಎಂದು ವಿಡಿಯೋ ಹೇಳುತ್ತದೆ.

ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ವಿಡಿಯೋವನ್ನು ನೋಡಲೇಬೇಕು. ಮಗನನನ್ನು ನೋಡಿಕೊಂಡು ಹೈದರಾಬಾದಿಗೆ ಹಿಂದಿರುಗುತ್ತಿದ್ದ ತಾಯಿಯನ್ನು ಗಗನಸಖಿ ಆರೈಕೆ ಮಾಡುವ ಪರಿಯ ಪರಿಣಾಮ ಪ್ರಯಾಣದ ಅಂತ್ಯದಲ್ಲಿ ಆಕೆಗೆ ಮಗಳಾಗಿ ಬದಲಾಗುತ್ತಾಳೆ.[ಪ್ಲೂಟೋನ ಚಂದ್ರ ಚಾರೋನ್​ನಲ್ಲಿ ಸಾಗರ ಕಂಡ ನಾಸಾ]

ಗಗನ ಸಖಿ ಹೆಲೆನಾ ಮತ್ತು ಭಾರತದ ಹಿರಿಯ ಜೀವ ತಾಯಿ ಮಗಳಂತೆ ಕಣ್ಣಲ್ಲೆ ಮಾತನಾಡಿಕೊಳ್ಳುತ್ತಾರೆ. ಮಗನನ್ನು ಇಂಗ್ಲೆಂಡಿನಲ್ಲೇ ಬಿಟ್ಟು ಬಂದ ನೋವು ವಿಮಾನ ಇಳಿಯುವ ವೇಳೆಗೆ ತಾಯಿಯಿಂದ ದೂರವಾಗಿರುತ್ತದೆ.

ಧನ್ಯವಾದ ಎಂಬ ಒಂದೇ ಪದದಿಂದ ಸಂಬಂಧ ಅಂತ್ಯವಾಗಲ್ಲ. ನಿಲ್ದಾಣದಲ್ಲಿ ಇಳಿಯುವ ವೇಳೆ ತಾಯಿ ತಮ್ಮ ಮನೆಗೆ ಬರುವಂತೆ ಹೆಲೆನಾಗೆ ಕೋರಿಕೊಳ್ಳುತ್ತಾರೆ. ಅಂತೆಯೇ ಹೆಲೆನಾ ಸಹ ಹಿರಿಯ ಜೀವದ ಮನೆಗೆ ಹೋಗುತ್ತಾರೆ. ಅಲ್ಲಿ ಆಕೆಗೆ ಸಕಲ ಆದರ-ಆಥಿತ್ಯಗಳು ದೊರೆಯುತ್ತವೆ.

ಕೊನೆಯಲ್ಲಿ ಹಿರಿಯ ಜೀವ ಕರವಸ್ತ್ರವೊಂದನ್ನು ಹೆಲೆನಾ ಕೈಗೆ ನೀಡುವಾಗ ನಿಮ್ಮ ಕಣ್ಣಲ್ಲೂ ನೀರು ಬರದೇ ಇರಲು ಸಾಧ್ಯವಿಲ್ಲ. ಇದೊಂದು ಚಿಕ್ಕ ವಿಡಿಯೋ ಬ್ರಿಟಿಷ್ ಏರ್ ವೇಸ್ ನ ಸೇವಾ ಮನೋಭಾವವನ್ನು, ಭಾರತೀಯರ ಅತಿಥಿ ಸತ್ಕಾರದ ಗುಣವನ್ನು, ತಾಯಿ-ಮಗಳ ಬಾಂಧವ್ಯವನ್ನು ನಮ್ಮ ಮುಂದೆ ಕಟ್ಟಿಕೊಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
‘British Airways' - that has launched their campaign called 'Fuelled By Love' - achieves this with its new commercial. Their new advertisement will quite clearly never outlive its usefulness nor will its inspirational message ever lose its importance. This video video shows Human relationship, love and emotio
Please Wait while comments are loading...