ಬೆಂಗಳೂರಿನ ಟಾಪ್ 50 ಬ್ರಾಂಡ್ ಗಳಲ್ಲಿ ಬ್ರಿಗೇಡ್ ಗ್ರೂಪ್

ಬೆಂಗಳೂರು, ಜು.12: ಬೆಂಗಳೂರು ನಗರದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಬ್ರಿಗೇಡ್ ಗ್ರೂಪ್ ಬೆಂಗಳೂರಿನ ಮೊದಲ 50 ಹಾಟ್ ಬ್ರಾಂಡ್ ಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಬ್ರಾಂಡ್ ಸಮಾವೇಶದಲ್ಲಿ ಹಾಟ್ 50 ಕಂಪನಿಗಳ ಹೆಸರನ್ನು ಘೋಷಿಸಲಾಯಿತು.

ರಿಯಲ್ ಎಸ್ಟೇಟ್ ಉದ್ಯಮದಲ್ಲೇ ಇದೇ ಮೊದಲ ಬಾರಿಗೆ ಇಂತಹ ಹೆಗ್ಗಳಿಕೆ ಬಂದಿರುವುದು. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ, ಸ್ನೇಹಮಯಿ ವ್ಯವಹಾರ ಮೊದಲ್ಗೊಂಡು ಮತ್ತಿತರೆ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ.

Brigade Group
ಜೆಡಬ್ಲ್ಯೂಟಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ರಾಜೇಶ್ ಗಂಗಸ್ವಾಮಿ, ಹ್ಯಾಪಿ ಕ್ರಿಯೇಟಿವ್ ಸೈನ್ಸಸ್ ಸಿಇಒ ಕಾರ್ತಿಕ್ ಅಯ್ಯರ್, ಬಿಜಿನೆಸ್ ಹಬ್ ಗ್ರೂಪ್ ಮುಖ್ಯಸ್ಥ ಮತ್ತು ಸಂಸ್ಥಾಪಕ ಕ್ಸೇವಿಯರ್ ಪ್ರಭು, ಸ್ಯಾಪ್ ಮಾರುಕಟ್ಟೆ ಮುಖ್ಯಸ್ಥ ರಾಜೇಶ್ ಕುಮಾರ್, ಏಸರ್ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಎಸ್. ರಾಜೇಂದ್ರನ್ ಮತ್ತು ಲೆನೊವಾದ ಮಾರುಕಟ್ಟೆ ನಿರ್ದೇಶಕರಾದ ಭಾಸ್ಕರ್ ಚೌಧರಿ ಅವರು ಈ ಆಯ್ಕೆ ಪ್ರಕ್ರಿಯೆ ಸಮಿತಿಯಲ್ಲಿದ್ದರು.

ಈ ಮಾನ್ಯತೆ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಎಂ.ಆರ್.ಜಯರಾಂ, ಯಾವುದೇ ಒಂದು ಬ್ರಾಂಡ್ ಗೆ ಹೆಸರು ಬರಬೇಕೆಂದರೆ ಆ ಕಂಪನಿ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರಬೇಕಾಗುತ್ತದೆ. ಈ ವಿಚಾರಕ್ಕೆ ಬ್ರಿಗೇಡ್ ಗ್ರೂಪ್ ಹೆಚ್ಚಿನ ಒತ್ತು ಕೊಟ್ಟಿದ್ದರಿಂದಲೇ ಈ ಮನ್ನಣೆ ಸಿಗಲು ಕಾರಣ ಎಂದಿದ್ದಾರೆ. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+