• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 21: ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಮೌಲ್ಯ ಎಷ್ಟಿದೆ?

|

ಬೆಂಗಳೂರು, ಮಾರ್ಚ್21: ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ ಕುಸಿತದ ನಡುವೆಯೂ ಸ್ಥಿರತೆ ಕಾಪಾಡಿಕೊಂಡಿದೆ. ಸತತವಾಗಿ 55 ರಿಂದ58 ಸಾವಿರ ಡಾಲರ್‌ನಂತೆ ವಹಿವಾಟು ನಡೆಸಿದ್ದು, ಹೆಚ್ಚಿನ ಏರಿಳಿತವಾಗಿಲ್ಲ.

ಮಾರ್ಚ್ 21ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:

ಬಿಟ್ ಕಾಯಿನ್ ಬೆಲೆ: $57,362.31

ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,069,666,006,793

ಒಂದು ಬಿಟ್ ಕಾಯಿನ್ ಬೆಲೆ = 41,48,705.49ರು

(1 USD=72.44 ರುಪಾಯಿ)

      ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡುತ್ತೆ !! | Kumaraswamy | Oneindia Kannada

      ಕಳೆದ 24 ಗಂಟೆಗಳಲ್ಲಿ ಶೇ 3.36ಷ್ಟು ಇಳೆಕೆ ಕಂಡಿದೆ. ಈ ವಾರ 4.17% ರಷ್ಟು ಇಳಿಕೆಯಾಗಿತ್ತು. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಎಥೆರೆಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 3.59ರಷ್ಟು ಇಳಿಕೆ ಕಂಡು 1,791.20 ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $206,048,020,062 ಮೌಲ್ಯ ಹೊಂದಿದೆ. ಮತ್ತೊಂದು ಕರೆನ್ಸಿ ಕಾರ್ಡಾನೋ ಕಳೆದ 24 ಗಂಟೆಗಳಲ್ಲಿ ಶೇ 3.06ರಷ್ಟು ಕುಸಿತ ಕಂಡಿದ್ದು, 1.21 ಡಾಲರ್ ಮೌಲ್ಯಹೊಂದಿದ್ದು, ಒಟ್ಟಾರೆ, $38,433,106,085ಮಾರುಕಟ್ಟೆ ಮೌಲ್ಯ ಹೊಂದಿದೆ.

      ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಕಳೆದ ಭಾನುವಾರ (ಮಾರ್ಚ್ 14)ರಂದು 60, 000 ಡಾಲರ್ ಗಡಿ ದಾಟಿತ್ತು. ಅದಕ್ಕೂ ಮುನ್ನ ಶನಿವಾರದಂದು ಶೇ 6.64ರಷ್ಟು ಏರಿಕೆ ಕಂಡು ಮೊದಲ ಬಾರಿಗೆ ದಾಖಲೆಯ $61,073.71 ತಲುಪಿತ್ತು. ನಂತರ ಸ್ವಲ್ಪ ಮಟ್ಟಿನ ಕುಸಿತ ಕಂಡಿತ್ತು.

      ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ ಶೇ 120.2ರಷ್ಟು ಏರಿಕೆ ಕಂಡಿದೆ.

      ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

      English summary
      Bitcoin Rate steady On March 21: Here the details of bitcoin Latest Rate steady after rallying 61, 074 USD for the first time and Market Cap.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X