ಮಾರ್ಚ್ 13ರಂದು ಬಿಟ್ ಕಾಯಿನ್ ಮೌಲ್ಯದಲ್ಲಿ ಏರಿಕೆ

ಬೆಂಗಳೂರು, ಮಾರ್ಚ್ 13: ಜಾಗತಿಕ ಮಾರುಕಟ್ಟೆಯಲ್ಲಿ ಬಿಟ್‌ಕಾಯಿನ್ ಮೌಲ್ಯ ಶನಿವಾರ ಮತ್ತಷ್ಟು ಹೆಚ್ಚಾಗಿದೆ. ಪ್ರಮುಖ ವ್ಯಾಪಾರ ಪ್ಲಾಟ್‌ಫಾರ್ಮ್‌ ಒಂದಕ್ಕೆ ಸಂಬಂಧಿಸಿದಂತೆ ಕ್ರಿಪ್ಟೋಕರೆನ್ಸಿಯ ಕುರಿತಾದ ನೇತ್ಯಾತ್ಮಕ ಅಭಿಪ್ರಾಯ ಹೆಚ್ಚಾಗಿದ್ದರ ನಡುವೆಯೂ ದರದಲ್ಲಿ ಏರಿಕೆಯಾಗಿದೆ.

ಶನಿವಾರ ಮಧ್ಯಾಹ್ನದ ವೇಳೆ ಬಿಟ್ ಕಾಯಿನ್ ಮೌಲ್ಯದಲ್ಲಿ ಹಿಂದಿನ ದಿನಕ್ಕಿಂತ ಸುಮಾರು ಶೇ 0.80ರಷ್ಟು ಏರಿಕೆಯಾಗಿದೆ. ಶುಕ್ರವಾರ 56,000 ಅಮೆರಿಕನ್ ಡಾಲರ್‌ಗಿಂತ ಅಧಿಕವಿದ್ದ ಬಿಟ್‌ಕಾಯಿನ್ ದರ, ಶನಿವಾರ 57,175ಕ್ಕೆ ಏರಿಕೆ ಕಂಡಿದೆ. ಶನಿವಾರ ಬೆಳಿಗ್ಗೆ 56,726 ಡಾಲರ್‌ನೊಂದಿಗೆ ತೆರೆದುಕೊಂಡಿತ್ತು.

ಜಗತ್ತಿನ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ ಬೈನಾನ್ಸ್ ಹೋಲ್ಡಿಂಗ್ ಲಿ. ತನಿಖೆಗೆ ಒಳಗಾಗಿರುವ ನಡುವೆಯೂ ಬಿಟ್ ಕಾಯಿನ್ ಮೌಲ್ಯ ಇಳಿಕೆಯಾಗಿಲ್ಲ. ವಿನಿಮಯದಲ್ಲಿ ಉತ್ಪನ್ನಗಳ ವ್ಯಾಪಾರ ಮಾಡುವ ಮೂಲಕ ಅಮೆರಿಕದ ನಿವಾಸಿಗಳು ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಕಮೋಡಿಟಿ ಫ್ಯೂಚರ್ಸ್ ಟ್ರೇಡಿಂಗ್ ಕಮಿಷನ್ ತನಿಖೆ ನಡೆಸುತ್ತಿದೆ.

Bitcoin Rate Rises On March 13, Check The Latest Price Here

ಈ ರೀತಿಯ ಸೆಕ್ಯುರಿಟಿಗಳ ವ್ಯಾಪಾರ ನಡೆಸಲು ಬೈನಾನ್ಸ್ ಸಿಟಿಎಫ್‌ಸಿನಲ್ಲ ನೋಂದಣಿ ಮಾಡಿಕೊಂಡಿಲ್ಲ. ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಲು ಅಮೆರಿಕದ ಜನರಿಗೆ ಕ್ರಿಪ್ಟೊಕರೆನ್ಸಿ ವಿನಿಮಯ ಅವಕಾಶ ನೀಡಿತ್ತು ಎಂಬ ಆರೋಪ ಕೇಳಿಬಂದಿದೆ.

ಕಳೆದ 24 ಗಂಟೆಗಳಲ್ಲಿ 55,116.26 ಡಾಲರ್‌ಗೆ ಇಳಿಕೆ ಕಂಡಿದ್ದ ಬಿಟ್‌ಕಾಯಿನ್ ಮೌಲ್ಯ, 57,734.09 ಗರಿಷ್ಠ ದರವನ್ನು ಕೂಡ ಕಂಡಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+