ಮೇ 10ರಂದು ಡಿಜಿಟಲ್ ಕರೆನ್ಸಿ ಬಿಟ್ ಕಾಯಿನ್ ಮೌಲ್ಯ ಎಷ್ಟು?
ಬೆಂಗಳೂರು, ಮೇ 10: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್, ಇಥೆರಿಯಂ ನಡುವೆ ಪೈಪೋಟಿ ಮುಂದುವರೆದಿದ್ದು, ಕಳೆದ ಒಂದು ವಾರದಲ್ಲಿ ಇಥೆರಿಯಂ ಉತ್ತಮ ವಹಿವಾಟು ನಡೆಸಿದೆ. ಇದಲ್ಲದೆ, ಡೋಜ್ ಕಾಯಿನ್ ಸೇರಿದಂತೆ ಹಲವು ಕರೆನ್ಸಿಗಳ ಮೌಲ್ಯ ಸ್ಥಿರವಾಗಿದ್ದು, ಕೆಲವು ಉತ್ತಮ ಮೌಲ್ಯ ಪಡೆದುಕೊಳ್ಳುತ್ತಿವೆ. ಆದರೆ, ಕೊರೊನಾ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಮಾಡಲು ಭಾರತೀಯ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ.
ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2.4 ಟ್ರಿಲಿಯನ್‌ಗೆ ಏರಿಕೆಯಾಗಿದೆ. ಈ ನಡುವೆ ಬಿಟ್ ಕಾಯಿನ್ ಈ ಹಿಂದಿನ $61,222 ಮೌಲ್ಯ ದಾಖಲೆ ಮುರಿದು ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು.
ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಒಟ್ಟಾರೆ 2,474,821,013,978 ಟ್ರಿಲಿಯನ್ ಡಾಲರ್ ದಾಟಿದೆ. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ.

ಮೇ 10ರಂದು ಈ ಸಮಯ(10:30)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $57,580.06
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,081,324,236,839
ಒಂದು ಬಿಟ್ ಕಾಯಿನ್ ಬೆಲೆ = 42,35,353.10ರು
(1 USD=73.40 ರುಪಾಯಿ)
ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 0.11ರಷ್ಟು ಕುಸಿತ ಕಂಡಿದೆ. ಈ ವಾರ ಶೇ 0.06ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 5.88ರಷ್ಟು ಏರಿಕೆ ಕಂಡು 4,161.33ಡಾಲರ್ ಮೌಲ್ಯ ಪಡೆದಿದೆ. ಈ ವಾರದಲ್ಲಿ 28.54% ಏರಿಕೆಯಾಗಿ ಒಟ್ಟಾರೆ $484,657,688,764 ಮೌಲ್ಯ ಹೊಂದಿದೆ.
ಅತಿ ಹೆಚ್ಚು ಮೌಲ್ಯವೃದ್ಧಿ: ಇಥೆರಿಯಂ ಕ್ಲಾಸಿಕ್ ಕಳೆದ ವಾರದಲ್ಲಿ 137.66% ಏರಿಕೆ ಕಂಡು 13,868,658,243 ಡಾಲರ್ ಮೌಲ್ಯಕ್ಕೇರಿದೆ.
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications