Bank Holidays : ಗ್ರಾಹಕರೇ ಗಮನಿಸಿ, ಈ ವಾರ ಮೂರು ದಿನ ಬ್ಯಾಂಕ್ ರಜೆ: ವಿವರಗಳು ಇಲ್ಲಿವೆ

ನವದೆಹಲಿ, ನ.07: ಬ್ಯಾಂಕ್ ಗ್ರಾಹಕರೇ ಬ್ಯಾಂಕಿನ ಕೆಲಸಗಳಿದ್ದರೇ ಆದಷ್ಟು ಬೇಗ ಮುಗಿಸಿಕೊಳ್ಳಿ. ಏಕೆಂದರೆ ನವೆಂಬರ್ ತಿಂಗಳಲ್ಲಿ ಹಲವು ದಿನಗಳು ಬ್ಯಾಂಕ್‌ಗೆ ರಜೆಯಿದೆ. ಈ ಒಂದು ವಾರದಲ್ಲೇ ಮೂರು ದಿನ ಬ್ಯಾಂಕ್ ಬಂದ್ ಆಗಲಿದೆ. ರಜೆಯ ವಿವರಗಳು ಇಲ್ಲಿವೆ ನೋಡಿ.

ನವೆಂಬರ್ 8 ರಂದು ಗುರುನಾನಕ್ ಜಯಂತಿ ಅಥವಾ ಗುರುಪುರಬ್ ಇರುವುದರಿಂದ ರಜೆಯಿದೆ. ಮಂಗಳವಾರ ಗುರುನಾನಕ್ ಅವರ 553 ನೇ ಜನ್ಮದಿನ ಆಚರಿಸಲಾಗುತ್ತದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ನೀಡಲಾಗುತ್ತದೆ. ಗುರುನಾನಕ್ ಜಯಂತಿ ಆಚರಿಸುವ ರಾಜ್ಯಗಳಲ್ಲಿ ರಜೆ ನೀಡಲಾಗುತ್ತದೆ, ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ತೆರದಿರುತ್ತವೆ.

ಗುರುನಾನಕ್ ಜಯಂತಿಯಂದು ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ, ರಾಂಚಿ, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ರಜೆ ಘೋಷಿಸಿವೆ.

ಗುರುನಾನಕ್ ಜಯಂತಿಯನ್ನು ಹೊರತುಪಡಿಸಿ, ಈ ವಾರ ನವೆಂಬರ್ 12 ಮತ್ತು 13 ರಂದು ಬ್ಯಾಂಕುಗಳಿಗೆ ರಜೆಯಿದೆ. ಕನಕದಾಸ ಜಯಂತಿ/ವಂಗಲ ಉತ್ಸವದ ನಿಮಿತ್ತ ನವೆಂಬರ್ 11 ರಂದು ಬೆಂಗಳೂರು, ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ನವೆಂಬರ್ 11ರಂದು ಕನಕದಾಸ ಜಯಂತಿ ಮತ್ತು ವಂಗಲ ಉತ್ಸವ ಇದೆ. ಈ ಹಿನ್ನೆಲೆ ಕರ್ನಾಟಕ ಮತ್ತು ಸಿಕ್ಕಿಂನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.

ನವೆಂಬರ್ 12 ರಂದು ಎರಡನೇ ಶನಿವಾರ ಹೀಗಾಗಿ ಕೆಲವು ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗುತ್ತದೆ.

ನವೆಂಬರ್ 13 ರಂದು ಭಾನುವಾರ ವಾರದ ರಜೆ. ಹೀಗಾಗಿ ರಾಜ್ಯದಲ್ಲಿ ಈ ವಾರ ನವೆಂಬರ್ 11, 12 ಮತ್ತು 13 ಈ ಮೂರು ದಿನ ಬ್ಯಾಂಕುಗಳು ಬಂದ್ ಇರುತ್ತವೆ. ಬ್ಯಾಂಕ್‌ನಲ್ಲಿ ಕೆಲಸ ಇರುವವರು ಸೋಮವಾರದಿಂದ ಗುರುವಾರದೊಳಗೆ ಮುಗಿಸಿಕೊಳ್ಳುವುದು ಉತ್ತಮ.

Bank Will Remain Closed For Three Days This Week

ಈ ನವೆಂಬರ್ ತಿಂಗಳಿನಲ್ಲಿ ಒಟ್ಟು 10 ದಿನ ಬ್ಯಾಂಕ್ ರಜೆಗಳಿವೆ. ಇದರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ, ಹಾಗೆಯೇ ತಿಂಗಳ ಪ್ರತಿ ಭಾನುವಾರವೂ ಸೇರಿದೆ.

ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಳ್ಳುವುದು ಅಥವಾ ಗ್ರಾಹಕರು ತಮ್ಮ ತಮ್ಮ ರಾಜ್ಯಗಳಲ್ಲಿ ಇರುವ ರಜಾದಿನದ ದಿನಾಂಕವನ್ನು ಪರಿಶೀಲಿಸಿಕೊಂಡು ಕೆಲಸ ಮಾಡಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನ ಮತ್ತು ಬ್ಯಾಂಕ್‌ಗಳ ಖಾತೆ ಪರೀಶಿಲನೆ ಎಂದು ವರ್ಗಿಕರಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ತಿಂಗಳು ಬ್ಯಾಂಕ್ ರಜೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಟ್ಟಿಯನ್ನು ಪರಿಶೀಲಿಸಬಹುದು.

ಇನ್ನು, ಈ ರಜೆಗಳು ಬ್ಯಾಂಕ್​ಗೆ ಹೋಗಿಯೇ ಮಾಡಬೇಕಾದ ಕೆಲಸಗಳಿಗೆ ಮಾತ್ರ ಸಂಬಂಧಿಸಿರುತ್ತವೆ. ಏಕೆಂದರೆ ಡಿಜಿಟಲ್ ಯುಗದಲ್ಲಿ ಎಲ್ಲಾ ಕೆಲಸಗಳು ನೆಟ್‌ ಬ್ಯಾಂಕಿಂಗ್, ಎಟಿಎಂಗಳ ಮೂಲಕವೇ ನಡೆಯುತ್ತಿದೆ. ಆದರೂ, ಕೆಲವೊಮ್ಮೆ ಖುದ್ದು ಬ್ಯಾಂಕ್‌ಗೆ ಹೋಗುವ ಅವಶ್ಯಕತೆಯಿರುತ್ತದೆ. ಹೀಗಾಗಿ ಅಂತಹ ಕೆಲಸವಿರುವವರು ಆದಷ್ಟು ಬೇಗ ರಜೆ ದಿನಗಳನ್ನು ಗಮನಿಸಿಕೊಂಡು ಬ್ಯಾಂಕ್‌ಗಳಿಗೆ ತೆರಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+