Get Updates
Get notified of breaking news, exclusive insights, and must-see stories!

ದೇಶದೆಲ್ಲೆಡೆ ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆ?

Bank Holidays in November 2021: ನವದೆಹಲಿ, ಅಕ್ಟೋಬರ್ 28: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ನವೆಂಬರ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ನವೆಂಬರ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್ ಮುಗಿದಿದ್ದು, ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು, ವೀಕೆಂಡ್ ಕರ್ಫ್ಯೂ ಕೂಡಾ ಬಹುತೇಕ ಎಲ್ಲೆಡೆ ಹಿಂಪಡೆಯಲಾಗಿದೆ.

ಆದರೆ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಳೆದ ತಿಂಗಳಲ್ಲಿ ಕಡಿಮೆ ರಜೆ ದಿನಗಳಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬದ ದೆಸೆಯಿಂದ ಹೆಚ್ಚಿನ ರಜೆ ಸಿಕ್ಕಿತ್ತು. ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 21 ದಿನಗಳ ರಜೆ ಸಿಕ್ಕರೂ ಕರ್ನಾಟಕ ಎರಡು ದಿನ ಮಾತ್ರ ರಜೆ ಇತ್ತು. ನವೆಂಬರ್ ತಿಂಗಳಲ್ಲೂ ದೀಪಾವಳಿ ರಜೆ ಮಾತ್ರ ಸಿಗಲಿದೆ. ದೇಶದೆಲ್ಲೆಡೆ ಒಟ್ಟಾರೆ, ವೀಕೆಂಡ್ ರಜೆ ಸೇರಿ 17 ದಿನ ರಜೆ ಇರಲಿದೆ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ, ಆರ್‌ಬಿಐ ಕಡ್ಡಾಯ ರಜೆ ದಿನಗಳಲ್ಲೂ ಕೆಲವು ನಿರ್ಬಂಧಿತ ಸೇವೆಗಳು ಲಭ್ಯವಿರಲಿದ್ದು, ಆನ್ ಲೈನ್ ಸೇವೆ ಕೂಡಾ ಹಲವು ಬ್ಯಾಂಕುಗಳು ನೀಡುತ್ತಿವೆ. ಇನ್ನು ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ.

Bank Holidays in November 2021: Banks will be closed for 17 days in this month

ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಗಮನಿಸಿ: ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ರಜೆ ಇರಲಿದೆ. ಮಿಕ್ಕಂತೆ ವಿವಿಧ ರಾಜ್ಯಗಳ ರಜಾ ದಿನಗಳ ಬಗ್ಗೆ ವಿವರ ಮುಂದಿದೆ..

ನವೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ
ದಿನ ದಿನಾಂಕ ರಜಾ ದಿನ ನಗರ
ನವೆಂಬರ್ 1, 2021 ಸೋಮವಾರ ಕನ್ನಡ ರಾಜ್ಯೋತ್ಸವ ಕರ್ನಾಟಕ
ನವೆಂಬರ್ 3, 2021 ಬುಧವಾರ ನರಕ ಚತುರ್ದಶಿ ಕರ್ನಾಟಕ
ನವೆಂಬರ್ 4, 2021 ಗುರುವಾರ ದೀಪಾವಳಿ ಅಮಾವಾಸ್ಯೆ, ಲಕ್ಷ್ಮಿಪೂಜೆ, ಕಾಳಿ ಪೂಜೆ ಹಲವು ರಾಜ್ಯಗಳಲ್ಲಿ(ಕರ್ನಾಟಕದಲ್ಲಿ ರಜೆ ಇಲ್ಲ)
ನವೆಂಬರ್ 5 ಶುಕ್ರವಾರ ಬಲಿ ಪಾಡ್ಯಮಿ, ಗೋವರ್ದನ ಪೂಜೆ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್, ಸಿಕ್ಕಿಂ ಹಾಗೂ ಹಿಮಾಚಲ ಪ್ರದೇಶ
ನವೆಂಬರ್ 6 ಶನಿವಾರ ಲಕ್ಷ್ಮಿ ಪೂಜೆ, ಭಾಯಿ ದೂಜ್ ಸಿಕ್ಕಿಂ, ಮಣಿಪುರ ಹಾಗೂ ಉತ್ತರಪ್ರದೇಶ
ನವೆಂಬರ್ 10 ಬುಧವಾರ ಸೂರ್ಯಪಶ್ತಿ ದಾಲ ಛಾತ್ ಬಿಹಾರ ಹಾಗೂ ಜಾರ್ಖಂಡ್
ನವೆಂಬರ್ 11 ಗುರುವಾರ ಛಾತ್ ಪೂಜೆ ಬಿಹಾರ
ನವೆಂಬರ್ 12 ಶುಕ್ರವಾರ ವಂಗಲಾ ಹಬ್ಬ ಮೇಘಾಲಯ
ನವೆಂಬರ್ 19 ಶುಕ್ರವಾರ ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರೆಡೆ
ನವೆಂಬರ್ 22 ಸೋಮವಾರ ಕನಕದಾಸ ಜಯಂತಿ ಕರ್ನಾಟಕ
ನವೆಂಬರ್ 23 ಮಂಗಳವಾರ ಸೆಂಗ್ ಕುತ್ಸ್ ನೆಮ್ ಮೇಘಾಲಯ

ಇದಲ್ಲದೆ, ಹಬ್ಬ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ರಜೆ ಮೇಲೆ ಹೋಗುವ ಸಂದರ್ಭ ಒದಗಬಹುದು. ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ. ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ.

Recommended Video

      Facebook ನ ಇನ್ಮೇಲೆ ಏನಂತ ಕರಿಬೇಕು ಗೊತ್ತಾ? | Oneindia Kannada

      ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್. ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ.

      ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+