2022ರ ಬ್ಯಾಂಕ್ ರಜಾದಿನಗಳು: ಇಲ್ಲಿದೆ ಸಂಪೂರ್ಣ ಪಟ್ಟಿ
ಈಗ ಹೊಸ ವರ್ಷ ಆರಂಭವಾಗಿದೆ. ಈ ಹೊಸ ವರ್ಷದ ಜನವರಿ ತಿಂಗಳಿನಲ್ಲಿಯೇ 16 ದಿನಗಳ ಬ್ಯಾಂಕ್ ರಜೆ ಇದ್ದು ಈ ವರ್ಷದಲ್ಲಿ ಎಷ್ಟು ಬ್ಯಾಂಕ್ ರಜಾದಿನಗಳು ಇದೆ ಎಂಬ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಟ ಮಾಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2022ರ ವಾರ್ಷಿಕ ರಜಾ ದಿನಗಳನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಮಾರ್ಗಸೂಚಿಯಂತೆ ಎಲ್ಲಾ ಬ್ಯಾಂಕುಗಳಲ್ಲಿ ರಜಾ ದಿನಗಳು ಇರಲಿದೆ. ಆರ್‌ಬಿಐ ಮಾರ್ಗಸೂಚಿಯಂತೆ ಈ ವರ್ಷದಲ್ಲಿ ಬ್ಯಾಂಕುಗಳಿಗೆ ಶನಿವಾರ ಹಾಗೂ ಭಾನುವಾರದ ವಾರದ ರಜೆ ಹಾಗೂ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹೊರತುಪಡಿಸಿ ಉಳಿದಂತೆ ಸುಮಾರು 31 ದಿನಗಳ ಕಾಲ ಬ್ಯಾಂಕ್ ರಜೆಗಳು ಇದೆ.
ದೇಶದಲ್ಲಿ ಮೂರು ರಾಷ್ಟ್ರೀಯ ರಜಾದಿನವಾಗಿದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ, ಮಹಾತ್ಮ ಗಾಂಧಿ ಜಯಂತಿಯನ್ನು ಈ ರಾಷ್ಟ್ರೀಯ ರಜಾದಿನಗಳು ಆಗಿದೆ. ಈ ರಜೆಗಳು ಮಾತ್ರವಲ್ಲದೇ ಬ್ಯಾಂಕ್‌ಗಳು ಎಲ್ಲಾ ತಿಂಗಳಲ್ಲಿ ಭಾನುವಾರ ಹಾಗೂ ಎರಡನೇ ಶನಿವಾರ, ನಾಲ್ಕನೇ ಶನಿವಾರ ಬಂದ್ ಆಗಿರಲಿದೆ. 2022ರಲ್ಲಿ ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇರಲಿದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.

ಜನವರಿ 2022
ಜನವರಿ 1: ಹೊಸ ವರ್ಷಾಚರಣೆ
ಜನವರಿ 14: ಮಕರ ಸಂಕ್ರಾಂತಿ ಅಥವಾ ಪೊಂಗಲ್ ಅಥವಾ ಐಮೊಯಿನು ಐರಪ
ಜನವರಿ 15: ಸಂಕ್ರಮಣ, ಉತ್ತರಾಯಣ ಪುಣ್ಯಕಾಲ, ಪೊಂಗಲ್, ತಿರುವಳ್ಳುವರ್ ದಿನ, ಗಾನ್ ಗಾಯಿ, ಮಾಘ್ ಬಿಹು
ಜನವರಿ 26: ಗಣರಾಜ್ಯೋತ್ಸವ
ಫೆಬ್ರವರಿ 2022
ಫೆಬ್ರವರಿ 5: ವಸಂತ ಪಂಚಮಿ
ಮಾರ್ಚ್ 2022
ಮಾರ್ಚ್ 1: ಮಹಾ ಶಿವರಾತ್ರಿ
ಮಾರ್ಚ್ 8: ಹೋಳಿ
ಏಪ್ರಿಲ್ 2022
ಏಪ್ರಿಲ್ 10: ರಾಮ ನವಮಿ
ಏಪ್ರಿಲ್ 13: ಯುಗಾದಿ
ಏಪ್ರಿಲ್ 14: ಡಾ. ಅಂಬೇಡ್ಕರ್ ಜಯಂತಿ, ತಮಿಳು ಹೊಸ ವರ್ಷ, ಮಹಾವೀರ ಜಯಂತಿ, ಬಿಜು ಹಬ್ಬ, ಬೊಹಾಗ್ ಬಿಹು, ಚೈರೊಬಾ, ಬೈಸಾಕಿ
ಏಪ್ರಿಲ್ 15: ಗುಡ್ ಫ್ರೈಡೇ, ವಿಶು, ಬೆಂಗಾಲಿ ಹೊಸ ವರ್ಷ, ಹಿಮಾಚಲ ದಿನ
ಮೇ 2022
ಮೇ 1: ಕಾರ್ಮಿಕರ ದಿನಾಚರಣೆ
ಮೇ 2: ಮಹರ್ಶಿ ಪರಶುರಾಮ ಜಯಂತಿ
ಮೇ 3: ರಂಜಾನ್ ಈದ್(ಈದ್ ಉಲ್ ಫಿತ್ರ್), ಬಸವ ಜಯಂತಿ, ಭಗವಾನ್ ಪರಶುರಾಮ್ ಜಯಂತಿ, ಅಕ್ಷಯ ತೃತೀಯ
ಮೇ 16: ಬುದ್ಧ ಪೂರ್ಣಿಮಾ
ಜೂನ್ 2022
ಜೂನ್ 14: ಸಂತ ಗುರು ಕಬೀರ್ ಜಯಂತಿ
ಜುಲೈ 2022
ಜುಲೈ 10: ಬಕ್ರೀದ್- ಈದ್ ಅಲ್ ಅದಾ
ಆಗಸ್ಟ್ 2022
ಆಗಸ್ಟ್ 9 : ಮೊಹರಂ
ಆಗಸ್ಟ್ 12: ರಕ್ಷಾ ಬಂಧನ
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16: ಪಾರ್ಸಿ ಹೊಸ ವರ್ಷ
ಆಗಸ್ಟ್ 19: ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 31: ಗಣೇಶ ಚತುರ್ಥಿ
ಸೆಪ್ಟೆಂಬರ್ 2022
ಸೆಪ್ಟೆಂಬರ್ 8: ತಿರು ಓಣಂ
ಸೆಪ್ಟೆಂಬರ್ 25: ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2022
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 3: ಮಹಾ ಅಷ್ಟಮಿ
ಅಕ್ಟೋಬರ್ 4: ಮಹಾ ನವಮಿ
ಅಕ್ಟೋಬರ್ 5: ವಿಜಯ ದಶಮಿ
ಅಕ್ಟೋಬರ್ 9: ಈದ್ ಇ ಮಿಲಾದ್
ಅಕ್ಟೋಬರ್ 24: ದೀಪಾವಳಿ
ಅಕ್ಟೋಬರ್ 27: ಬಾಯ್ ದೂಜ್
ನವೆಂಬರ್ 2022
ನವೆಂಬರ್ 8: ಗುರು ನಾನಕ್ ಜಯಂತಿ
ಡಿಸೆಂಬರ್ 2022
ಡಿಸೆಂಬರ್ 25: ಕ್ರಿಸ್ ಮಸ್












Click it and Unblock the Notifications