ಗ್ರಾಹಕರೆ ಎಚ್ಚರ ! ದೇಶದೆಲ್ಲೆಡೆ ಬ್ಯಾಂಕುಗಳಿಗೆ ಸರಣಿ ರಜೆ
Recommended Video

ಏಪ್ರಿಲ್ 28ರಿಂದ ಮೇ 1ರವರೆಗೆ ಸರಣಿ ಬ್ಯಾಂಕ್ ರಜೆ | Oneindia kannada
ಬೆಂಗಳೂರು, ಏಪ್ರಿಲ್ 27: ದೇಶದಾದ್ಯಂತ ಬ್ಯಾಂಕ್ ಸಿಬ್ಬಂದಿಗಳಿಗೆ 4 ದಿನಗಳ ಸರಣಿ ರಜೆ ನಾಳೆಯಿಂದ ಮೇ 2ರ ತನಕ ಸಿಗಲಿದೆ. ಗ್ರಾಹಕರು ಈ ದಿನವೇ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆಗೆ ಎಟಿಎಂನಲ್ಲೂ ಹಣ ಸಿಗಲಿಲ್ಲ ಎಂದು ದೂರುವುದು ತಪ್ಪುತ್ತದೆ.
ಚೆಕ್ ಕ್ಲಿಯರೆನ್ಸ್, ನಗದು ಜಮೆಗೆ ತೊಂದರೆಯಾಗಬಹುದು. ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಉಂಟಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಸಾಲು ಸಾಲು ರಜೆ ಜತೆಗೆ ಬ್ಯಾಂಕ್ ಸಿಬ್ಬಂದಿ ರಜೆ ಹಾಕಿದ್ದರೆ, ಪರಿಸ್ಥಿತಿ ಕಷ್ಟವಾಗುತ್ತದೆ.

ಬ್ಯಾಂಕ್ ರಜೆ ಯಾವಾಗ?:
ಏಪ್ರಿಲ್ 28 : ನಾಲ್ಕನೇ ಶನಿವಾರ (ಬ್ಯಾಂಕ್ ವಹಿವಾಟು ಇರುವುದಿಲ್ಲ)
ಏಪ್ರಿಲ್ 29 : ಭಾನುವಾರ
ಏಪ್ರಿಲ್ 30: ಸೋಮವಾರ (ಬುದ್ಧ ಪೂರ್ಣಿಮಾ)
ಮೇ 1 : ಕಾರ್ಮಿಕರ ದಿನಾಚರಣೆ
ಮೇಲ್ಕಂಡ ರಜೆ ದಿನಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರ ನಡೆಸುವಂತೆ ಕೋರಲಾಗಿದೆ.












Click it and Unblock the Notifications