ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕುಗಳಿಗೆ ಸರಣಿ ರಜೆ, ಗ್ರಾಹಕರಿಗೆ ಆಗಲಿದೆಯೆ ಸಜೆ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 14: ಮಾರ್ಚ್ ತಿಂಗಳ ಅಂತ್ಯಕ್ಕೆ ಬ್ಯಾಂಕುಗಳಿಗೆ ಸರಣಿ ರಜೆ ಸಿಗುತ್ತಿದೆ. ಹಬ್ಬ ಹರಿದಿನಗಳಿಗೆ ತಯಾರಾಗುತ್ತಿರುವ ಜನ ಸಾಮಾನ್ಯರು ಈಗ ಬ್ಯಾಂಕುಗಳ ರಜೆಯನ್ನು ಎದುರಿಸಲು ಸಿದ್ಧರಾಗಬೇಕಿದೆ. ದೇಶದ ಹಲವೆಡೆ ಮಾರ್ಚ್ 23ರಿಂದ ಮಾರ್ಚ್ 27ರ ತನಕ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಗುಡ್ ಫ್ರೈಡೇ ದಿನದಂದು ಮಾತ್ರ ರಜೆ ಇದೆ.

ಕರ್ನಾಟಕದಲ್ಲಿ ಗುರುವಾರ(ಮಾರ್ಚ್ 24) ರಜೆ ಇಲ್ಲ, ಶುಕ್ರವಾರ (ಮಾರ್ಚ್ 25) ಗುಡ್ ಫ್ರೈಡೇ ರಜೆ, ಮಾರ್ಚ್ 26 ಶನಿವಾರ (ನಾಲ್ಕನೇ ಶನಿವಾರ) ರಜೆ ಹಾಗೂ ಭಾನುವಾರ ಕೂಡಾ ರಜೆ., ಹೀಗಾಗಿ ಮೂರು ದಿನ ರಜೆ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲೂ ಇರುತ್ತದೆ.

ಉತ್ತರ ಭಾರತದಲ್ಲಿ ಗುಡ್ ಫ್ರೈಡೇ ಜೊತೆಗೆ ಹೋಳಿ ಹಬ್ಬದ ಸಂಭ್ರಮಾಚರಣೆಗಾಗಿ ವಿವಿಧ ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದೆ. ಕನಿಷ್ಠ ನಾಲ್ಕು ರಜೆ ಇದ್ದೇ ಇದೆ. ಈ ಸಮಯದಲ್ಲಿ ಎಟಿಎಂ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಗೆ ಮೊರೆ ಹೋಗದೆ ವಿಧಿ ಇಲ್ಲ.[2016ರ ದೇಶದ ಎಲ್ಲಾ ಬ್ಯಾಂಕುಗಳ ರಜೆ ಪಟ್ಟಿ ಇಲ್ಲಿದೆ]

Plan your banking works in advance! Services may be affected due to long holiday next

ಮಾರ್ಚ್ 23ರಂದು ಉತ್ತರಪ್ರದೇಶದ ಬ್ಯಾಂಕುಗಳಿಗೆ ಮಾತ್ರ ರಜೆ. ಮಾರ್ಚ್ 24ರಂದು ದೇಶದ ವಿವಿಧೆಡೆ ಹೋಳಿ ರಜೆ, ಮಾರ್ಚ್ 25ರಂದು ಗುಡ್ ಫ್ರೈಡೇ(ಎಲ್ಲಾ ರಾಜ್ಯಗಳಿಗೂ ಅನ್ವಯ), ರಜೆಗಳ ಪಟ್ಟಿಗೆ ನಿಲ್ಲುವುದಿಲ್ಲ. ಮಾರ್ಚ್ 26ರಂದು ಶನಿವಾರ (ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಇರುತ್ತದೆ) ರಜೆ, ಮಾರ್ಚ್ 27ರಂದು ಭಾನುವಾರದ ರಜೆ ಬೇರೆ ಸೇರಿದೆ.

ಉತ್ತರಪ್ರದೇಶ ಬಿಟ್ಟರೆ ಜಾರ್ಖಂಡ್ ಕೂಡಾ ಐದು ದಿನಗಳ ರಜೆ ಅನುಭವಿಸಲಿದೆ. ಗುಜರಾತ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 25ರಂದು ಮಾತ್ರ ರಜೆ ಇದೆ. ಬಿಹಾರದಲ್ಲಿ ಮಾರ್ಚ್ 22ರಂದು 'ಬಿಹಾರ್ ದಿವಸ್' ಇರುವುದರಿಂದ ಮತ್ತೊಂದು ದಿನ ರಜೆ ಸಿಗಲಿದೆ. ಹೀಗಾಗಿ ಬಹುತೇಕ ದೇಶದ ಹಲವೆಡೆ ಸೋಮವಾರ ಹಾಗೂ ಮಂಗಳವಾರ ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ. ಗ್ರಾಹಕರು ಈ ವೇಳಾಪಟ್ಟಿಗೆ ತಕ್ಕಂತೆ ತಮ್ಮ ಯೋಜನೆ ಹಾಕಿಕೊಂಡರೆ ಒಳ್ಳೆಯದು.

English summary
Back to back festive holidays in the coming week may affect bank services throughout the country. There will holiday from March 23 to 27 on account of Holi, Good Friday in next week. These are followed by Saturday and Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X