Get Updates
Get notified of breaking news, exclusive insights, and must-see stories!

ಬ್ಯಾಂಕ್ ಉದ್ಯೋಗಿಗಳಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಸಿಗಲಿದೆ ವಾರಕ್ಕೆ 2 ದಿನಗಳ ರಜೆ- ಮಾಹಿತಿ, ವರದಿ

ಬ್ಯಾಂಕ್ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್, ಬ್ಯಾಂಕ್ ಯೂನಿಯನ್‌ಗಳ ಬೇಡಿಕೆಯನ್ನು ಪರಿಗಣಿಸುತ್ತಿದೆ. ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನಗಳ ರಜೆ ನೀಡಬೇಕೆಂದು ಬ್ಯಾಂಕ್ ಯೂನಿಯನ್‌ಗಳು ಬೇಡಿಕೆ ಇಟ್ಟಿದ್ದವು.

ಬೆಂಗಳೂರು, ಮಾರ್ಚ್‌ 01: ಬ್ಯಾಂಕ್ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಬ್ಯಾಂಕ್ ಯೂನಿಯನ್‌ಗಳ ಬೇಡಿಕೆಯನ್ನು ಪರಿಗಣಿಸುತ್ತಿದೆ. ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನಗಳ ರಜೆ ನೀಡಬೇಕೆಂದು ಬ್ಯಾಂಕ್ ಯೂನಿಯನ್‌ಗಳು ಬೇಡಿಕೆ ಇಟ್ಟಿದ್ದವು. ವಾರಕ್ಕೆ 5 ದಿನಗಳ ಕೆಲಸದ ಸಮಯವನ್ನು ಪ್ರತಿದಿನ 50 ನಿಮಿಷಗಳಷ್ಟು ಹೆಚ್ಚಿಸಬಹುದು ಎಂದು ವರದಿ ಹೇಳಿದೆ.

ಈ ವಿಚಾರವಾಗಿ, IBA ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಎಂಪ್ಲಾಯೀಸ್ (UFBEs) ನಡುವೆ ಮಾತುಕತೆಗಳು ನಡೆಯುತ್ತಿವೆ. 5 ದಿನಗಳ ಕೆಲಸದ ವಾರಕ್ಕೆ ಸಂಘವು ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

Bank Employees To Get 2 Days Weekly Off Soon, IBA Considering Proposal: Reports

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 25 ರ ಅಡಿಯಲ್ಲಿ ಸರ್ಕಾರವು ಎಲ್ಲಾ ಶನಿವಾರಗಳನ್ನು ರಜೆಯೆಂದು ಸೂಚಿಸಬೇಕಾಗುತ್ತದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜನ್ ಅವರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ. ಪ್ರಸ್ತುತ ಬ್ಯಾಂಕ್ ನೌಕರರು ಪರ್ಯಾಯ ಶನಿವಾರದಂದು ಕೆಲಸ ಮಾಡುತ್ತಾರೆ.

ಉದ್ಯೋಗಿಗಳು ಪ್ರತಿದಿನ ಬೆಳಗ್ಗೆ 9.45 ರಿಂದ ಸಂಜೆ 5.30 ರವರೆಗೆ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

Bank Employees To Get 2 Days Weekly Off Soon, IBA Considering Proposal: Reports

ಮಾರ್ಚ್ 2023 ರಲ್ಲಿ ಬ್ಯಾಂಕ್ ರಜಾದಿನಗಳು

ಮಾರ್ಚ್ 2023 ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ ಉದ್ಯೋಗಿಗಳಿಗೆ ರಜೆ ಇರುತ್ತವೆ. ಭಾನುವಾರ ಸೇರಿದಂತೆ ಒಟ್ಟು 12 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ ಎಂದು ಬ್ಯಾಂಕ್‌ ಗ್ರಾಹಕರು ತಿಳಿಯಿರಿ. ಕೆಲವು ಬ್ಯಾಂಕ್ ರಜಾದಿನಗಳು ದೇಶದಾದ್ಯಂತ ಇರಲಿವೆ. ಇನ್ನು ಕೆಲವು ಸ್ಥಳೀಯ ರಜಾದಿನಗಳಾಗಿವೆ.

ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ. ಕೆಲವು ಬ್ಯಾಂಕುಗಳು ಪ್ರಾದೇಶಿಕ ಹಬ್ಬಗಳು ಮತ್ತು ರಜಾದಿನಗಳನ್ನು ಆಚರಿಸುತ್ತವೆ. ಮಾರ್ಚ್ 2023 ರಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಹೋಳಿ, ಚೈತ್ರ ನವರಾತ್ರಿ, ರಾಮ ನವಮಿ ಸೇರಿದಂತೆ ವಿವಿಧ ಹಬ್ಬಗಳು ಸೇರಿವೆ.

1. ಮಾರ್ಚ್ 03, 2023 - ಐಜ್ವಾಲ್‌ನಲ್ಲಿ ಚಾಪ್ಚಾರ್ ಕೂಟ್
2. ಮಾರ್ಚ್ 05, 2023 - ಭಾನುವಾರದ ರಜೆ
3. ಮಾರ್ಚ್ 07, 2023 - ವಿವಿಧ ನಗರಗಳಲ್ಲಿ ಹೋಳಿ/ಹೋಲಿಕಾ ದಹನ್/ಧುಲೆಂಡಿ/ಡೋಲ್ ಜಾತ್ರೆ/ಯೋಸಾಂಗ್
4. ಮಾರ್ಚ್ 08, 2023 - ಬಹು ನಗರಗಳಲ್ಲಿ ಧುಲೇಟಿ/ಡೋಲ್ ಜಾತ್ರೆ/ಹೋಳಿ
5. ಮಾರ್ಚ್ 09, 2023 - ಪಾಟ್ನಾದಲ್ಲಿ ಹೋಳಿ
6. ಮಾರ್ಚ್ 11, 2023 - ಎರಡನೇ ಶನಿವಾರದ ರಜೆ
7. ಮಾರ್ಚ್ 12, 2023 - ಭಾನುವಾರದ ರಜೆ
8. ಮಾರ್ಚ್ 19, 2023 - ಭಾನುವಾರದ ರಜೆ
9. ಮಾರ್ಚ್ 22, 2023 - ಗುಡಿ ಪಾಡ್ವಾ/ಯುಗಾದಿ/ಬಿಹಾರ ದಿನ/ಮೊದಲ ನವರಾತ್ರಿ/ತೆಲುಗು ಹೊಸ ವರ್ಷ ಅನೇಕ ನಗರಗಳಲ್ಲಿ
10. ಮಾರ್ಚ್ 25, 2023 - ನಾಲ್ಕನೇ ಶನಿವಾರ
11. ಮಾರ್ಚ್ 26, 2023 - ಭಾನುವಾರದ ರಜೆ
12. ಮಾರ್ಚ್ 30, 2023 - ಬಹು ನಗರಗಳಲ್ಲಿ ರಾಮ ನವಮಿ

ನಾರ್ಮಲ್‌ ಹಾಲಿಡೇಗಳು

ಮಾರ್ಚ್ 5, 2023: ಭಾನುವಾರ
ಮಾರ್ಚ್ 11, 2023: ಶನಿವಾರ
ಮಾರ್ಚ್ 12, 2023: ಭಾನುವಾರ
ಮಾರ್ಚ್ 19, 2023: ಭಾನುವಾರ
ಮಾರ್ಚ್ 25, 2023: ಶನಿವಾರ
ಮಾರ್ಚ್ 26, 2023: ಭಾನುವಾರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+