2018ರಲ್ಲಿ ಉದ್ಯೋಗಿಗಳ ವೇತನ ಏರಿಕೆ ಪ್ರಮಾಣ ಎಷ್ಟು?

ನವದೆಹಲಿ, ಫೆಬ್ರವರಿ 28: 2018ನೇ ಸಾಲಿನಲ್ಲಿ ಎಲ್ಲಾ ಕ್ಷೇತ್ರಗಳ ಉದ್ಯೋಗಿಗಳ ಸಂಬಳ ಏರಿಕೆ ಸರಾಸರಿ ಶೇ. 9.4 ರಷ್ಟು ಇರಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಬದಲಾವಣೆ ಕಂಡು ಬರುವುದಿಲ್ಲ ಎಂದು ಎಚ್ಎಆರ್ ಕನ್ಸಲ್ಟೆಂಟ್ ಸಂಸ್ಥೆ ಎವೋನ್ ಇಂಡಿಯಾ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ.

ದೇಶದಲ್ಲಿನ ಸುಮಾರು 20 ಉದ್ಯಮ ವಲಯದ 1000 ಕ್ಕೂ ಅಧಿಕ ಕಂಪನಿಗಳ ಸಮೀಕ್ಷೆ ನಡೆಸಲಾಯಿತು. ದೇಶದಲ್ಲಿನ ಬಹುತೇಕ ಉದ್ಯಮಗಳಲ್ಲಿನ ಉದ್ಯೋಗಿಗಳಿಗೆ ಕಳೆದ ವರ್ಷ ಸರಾಸರಿ ಶೇ. 9.3 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಶೇ. 9.4 ರಷ್ಟು ಏರಿಕೆಯಾಗಲಿದೆ.

ಉದ್ಯಮವಾರು ವೇತನ ಏರಿಕೆಯನ್ನು ಗಮನಿಸಿದಾಗ ವೃತ್ತಿಪರ ಸೇವೆಯ ವೇತನ ಶೇ. 10.6 ರಷ್ಟು ಏರಿಕೆಯಾಗಲಿದೆ. ಕನ್ಸೂಮರ್ ಇಂಟರ್ ನೆಟ್ ಕಂಪನಿಗಳು ಶೇ. 10.4 ರಷ್ಟು, ಗ್ರಾಹಕ ಉತ್ಪನ್ನ ಶೇ. 10.4 ರಷ್ಟು ಹಾಗೂ ವಾಹನ ತಯಾರಿಕೆ ಉದ್ಯಮದ ಉದ್ಯೋಗಿಗಳಿಗೆ ಶೇ. 10.1 ರಷ್ಟು ವೇತನ ಏರಿಕೆಯಾಗಲಿದೆ.

Average salary hike to be 9.4% in 2018 at Indian companies: Aon Hewitt survey

ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದ ಉದ್ಯೋಗಿಗಳಿಗೆ ಶೇ. 15.4 ರಷ್ಟು ವೇತನ ಏರಿಕೆ ಸಾಧ್ಯತೆಯಿದೆ. ಆದರೆ, ತಂತ್ರಜ್ಞಾನ, ಐ.ಟಿ. ಕ್ಷೇತ್ರದಲ್ಲಿ ಸರಾಸರಿ ಶೇ. 9.5 ರಷ್ಟು ವೇತನ ಏರಿಕೆ ನಿರೀಕ್ಷಿಸಬಹುದು.

ಇನ್ನು ರಿಯಲ್ ಎಸ್ಟೇಟ್ ಉದ್ಯಮ, ಮೂಲ ಸೌಕರ್ಯ ಕ್ಷೇತ್ರದಲ್ಲಿ ಶೇ 9.3ರಷ್ಟು ವೇತನ ಏರಿಕೆ ನಿರೀಕ್ಷೆಯಿದೆ. ಸಿಮೆಂಟ್ ಕ್ಷೇತ್ರದಲ್ಲಿ ಶೇ 8.4ರಷ್ಟು ವೇತನ ಏರಿಕೆ ನೀಡಬಹುದಾಗಿದ್ದು, ಅತ್ಯಂತ ಕಡಿಮೆ ಪ್ರಮಾಣ ಹೊಂದಿದೆ ಎಂದು ಸಮೀಕ್ಷೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+