ವಾಹನ ಷೇರುಗಳು ಭರ್ಜರಿ ಲಾಭ; ಐಷರ್ ಮೋಟಾರ್ಸ್ ರು. 653 ಏರಿಕೆ

ನವದೆಹಲಿ, ಸೆಪ್ಟೆಂಬರ್ 6: ಬ್ಯಾಂಕ್, ಆಟೋ, ಫೈನಾನ್ಷಿಯಲ್ ಸರ್ವೀಸಸ್ ಷೇರುಗಳ ಬಲದೊಂದಿಗೆ ಹಾಗೂ ಅಮೆರಿಕ ಮತ್ತು ಚೀನಾ ಮಧ್ಯೆ ವ್ಯಾಪಾರ ಬಿಕ್ಕಟ್ಟು ಶಮನ ಆಗುವ ಸೂಚನೆ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಏರಿಕೆ ಕಂಡಿದೆ. ಅಮೆರಿಕ ಹಾಗೂ ಚೀನಾ ಮಧ್ಯೆ ವ್ಯಾಪಾರ ಮಾತುಕತೆ ಮತ್ತು ಅಮೆರಿಕದ ಆರ್ಥಿಕತೆ ಅಂಕಿ- ಅಂಶಗಳು ಪ್ರಬಲ ಆಗಿರುವುದರಿಂದ ಆರ್ಥಿಕ ಹಿಂಜರಿತದ ಆತಂಕ ಕಡಿಮೆ ಆಗಿದೆ.

ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಮೇಲೆ ಎಚ್ಚೆತ್ತುಕೊಂಡ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳಿಂದ ಹೂಡಿಕೆದಾರರು ಉತ್ತೇಜಿತಗೊಂಡಂತೆ ಇದ್ದಾರೆ. ಬಿಎಸ್ ಇ ಸೆನ್ಸೆಕ್ಸ್ 337.35 ಅಂಶಗಳ ಏರಿಕೆಯೊಂದಿಗೆ 36,981.77 ಅಂಶ ತಲುಪಿದರೆ, ನಿಫ್ಟಿ 98.3 ಅಂಶ ಏರಿಕೆಯಾಗಿ 10,946.20 ಅಂಶಗಳನ್ನು ತಲುಪಿದೆ.

Auto Sector Shares Shining; Eicher Motors Raised More Than 650 Rupees

ನಿಫ್ಟಿ ಟಾಪ್ ಗೇಯ್ನರ್ಸ್
ಐಷರ್ ಮೋಟಾರ್ಸ್ ಏರಿಕೆ - ರು. 653.05 ದಿನಾಂತ್ಯದ ಬೆಲೆ- ರು. 16,407.25
ಟೆಕ್ ಮಹೀಂದ್ರಾ ಏರಿಕೆ - ರು. 26.30 ದಿನಾಂತ್ಯದ ಬೆಲೆ- ರು. 721.75
ಮಾರುತಿ ಸುಜುಕಿ ಏರಿಕೆ - ರು. 218.30 ದಿನಾಂತ್ಯದ ಬೆಲೆ- ರು. 6,186.95
ಆಕ್ಸಿಸ್ ಬ್ಯಾಂಕ್ ಏರಿಕೆ - ರು. 21.50 ದಿನಾಂತ್ಯದ ಬೆಲೆ- ರು. 671.10
ಟಾಟಾ ಸ್ಟೀಲ್ ಏರಿಕೆ - ರು. 10.25 ದಿನಾಂತ್ಯದ ಬೆಲೆ- ರು. 355.40

ಸೆನ್ಸೆಕ್ಸ್ ಟಾಪ್ ಗೇಯ್ನರ್ಸ್
ಮಾರುತಿ ಸುಜುಕಿ ಏರಿಕೆ - ರು. 215.55 ದಿನಾಂತ್ಯದ ಬೆಲೆ- ರು. 6,185.55
ಆಕ್ಸಿಸ್ ಬ್ಯಾಂಕ್ ಏರಿಕೆ - ರು. 21.75 ದಿನಾಂತ್ಯದ ಬೆಲೆ- ರು. 671
ಟಾಟಾ ಸ್ಟೀಲ್ ಏರಿಕೆ - ರು. 10.30 ದಿನಾಂತ್ಯದ ಬೆಲೆ- ರು. 355.30
ಎನ್ ಟಿಪಿಸಿ ಏರಿಕೆ - ರು. 3.65 ದಿನಾಂತ್ಯದ ಬೆಲೆ- ರು. 127
ಬಜಾಜ್ ಆಟೋ ಏರಿಕೆ - ರು. 80.15 ದಿನಾಂತ್ಯದ ಬೆಲೆ- ರು. 2,839.80

ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ ರು. 39,570 ಇದ್ದರೆ, ಒಂದು ಕೇಜಿ ಬೆಳ್ಳಿಯ ಬೆಲೆ ರು. 52 ಸಾವಿರ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+