ಲಾಕ್‌ಡೌನ್ ಎಫೆಕ್ಟ್‌: ಈ ವರ್ಷ ವಾಹನ ಮಾರಾಟ 25 ಪರ್ಸೆಂಟ್ ಕುಸಿತ ಸಾಧ್ಯತೆ

ಕೊರೊನಾವೈರಸ್ ಲಾಕ್‌ಡೌನ್‌ ಪರಿಣಾಮವು ದೇಶದ ಬಹುತೇಕ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಆಟೋ ಮೊಬೈಲ್ ಕ್ಷೇತ್ರವು ಇದರಿಂದ ಹೊರತಾಗಿಲ್ಲ. ಕಳೆದ ವರ್ಷ ಭಾರೀ ಕುಸಿತ ಕಂಡಿದ್ದ ವಾಹನ ಮಾರಾಟವು ಈ ವರ್ಷ 25 ಪರ್ಸೆಂಟ್ ಕುಸಿತ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Recommended Video

      ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

      ಇಂಡಿಯಾ ರೇಟಿಂಗ್ಸ್‌(ಇಂಡ್-ರಾ) ನಡೆಸಿದ ಸಮೀಕ್ಷೆಯ ಪ್ರಕಾರ, 2019-20ಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ವಾಹನ ಮಾರಾಟ 25 ಪರ್ಸೆಂಟ್ ಇಳಿಕೆ ಕಾಣಲಿದೆ ಎಂದು ಅಂದಾಜಿಸಿದೆ.

      ಆದಾಗ್ಯೂ, ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರದೆ ಇರುವುದರಿಂದ ಟ್ರ್ಯಾಕ್ಟರ್ ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಮಾರಾಟದಲ್ಲಿ ಇಳಿಕೆ ಆಗಲಿದೆ. ಈ ಮೂಲಕ ವಾಹನ ಮಾರಾಟವೂ ಎರಡು ದಶಕದಲ್ಲಿಯೇ ಕನಿಷ್ಟ ಮಟ್ಟಕ್ಕೆ ಇಳಿಯಲಿದೆ.

      Auto Sales May Dip Upto 25 Percent In FY21:Ind-Ra

      ಇನ್ನು ಸ್ವಲ್ಪ ಸಮಾಧಾನಕರ ವಿಚಾರ ಎಂದರೆ ದ್ವಿಚಕ್ರ ವಾಹನ ಮತ್ತು ಕಾರುಗಳ ಮಾರಾಟ ತ್ವರಿತವಾಗಿ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಆದರೆ ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳ ಮಾರಾಟ ಕುಸಿಯಲಿದೆ.

      2020-21ರಲ್ಲಿ ವಾಹನ ಮಾರಾಟ ಇಳಿಕೆ ನಿರೀಕ್ಷೆ:

      ದ್ವಿಚಕ್ರ ವಾಹನ : 20-22 ಪರ್ಸೆಂಟ್

      ಪ್ರಯಾಣಿಕ ವಾಹನ : 22-26 ಪರ್ಸೆಂಟ್

      ಲಘು ವಾಣಿಜ್ಯ ವಾಹನ: 26-30 ಪರ್ಸೆಂಟ್

      ಭಾರೀ ಗಾತ್ರದ ವಾಹನ : 35-45 ಪರ್ಸೆಂಟ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+