ಹೊಸ ಕಾನೂನು: ಮಾಧ್ಯಮ ಸಂಸ್ಥೆಗಳಿಗೆ ಗೂಗಲ್, ಫೇಸ್‌ಬುಕ್ ಹಣ ನೀಡಬೇಕು
ಸಿಡ್ನಿ, ಫೆಬ್ರವರಿ 25: ಸ್ಥಳೀಯ ಸುದ್ದಿ ವಿಷಯಗಳಿಗೆ ಜಾಗತಿಕ ಡಿಜಿಟಲ್ ದಿಗ್ಗಜ ಸಂಸ್ಥೆಗಳು ಹಣ ಪಾವತಿ ಮಾಡುವಂತಹ ಮಹತ್ವದ ಕಾನೂನನ್ನು ಆಸ್ಟ್ರೇಲಿಯಾ ಸಂಸತ್ತು ಅಂಗೀಕರಿಸಿದೆ. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ಸರ್ಕಾರ ತರಲು ಉದ್ದೇಶಿಸಿದ್ದ ಈ ಕಾನೂನಿನ ವಿರುದ್ಧ ಫೇಸ್‌ಬುಕ್ ಮತ್ತು ಗೂಗಲ್ ಸಂಸ್ಥೆಗಳು ಕೊನೆಯವರೆಗೂ ತೀವ್ರ ಹೋರಾಟ ನಡೆಸಿದ್ದವು. ತಾಂತ್ರಿಕ ದಿಗ್ಗಜ ಸಂಸ್ಥೆಗಳು ಸುದ್ದಿಗಳನ್ನು ಹಂಚಿಕೊಳ್ಳಲು ಸ್ಥಳೀಯ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಲು ಒಪ್ಪಿಕೊಳ್ಳಬೇಕಿದೆ.
ಹೊಸ ಕಾನೂನಿನ ಪ್ರಕಾರ ಗೂಗಲ್ ಹಾಗೂ ಫೇಸ್‌ಬುಕ್ ಸಂಸ್ಥೆಗಳು ಸ್ಥಳೀಯ ವಿಷಯಗಳನ್ನು ಪಡೆದುಕೊಳ್ಳಲು ಲಕ್ಷಾಂತರ ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡಬೇಕಾಗಲಿದೆ. ಇದು ಜಗತ್ತಿನಾದ್ಯಂತ ಇತರೆ ದೇಶಗಳಿಗೂ ಮಾದರಿ ಕ್ರಮವಾಗುವ ಸಾಧ್ಯತೆ ಇರುವುದರಿಂದ ಸರ್ಕಾರಗಳು ಹಾಗೂ ತಾಂತ್ರಿಕ ಸಂಸ್ಥೆಗಳ ನಡುವೆ ತೀವ್ರ ಸಂಘರ್ಷ ಏರ್ಪಸುವ ಸಾಧ್ಯತೆ ಇದೆ. ಮುಂದೆ ಓದಿ.

ಗೂಗಲ್ ಮತ್ತು ಫೇಸ್‌ಬುಕ್
ತನ್ನ 'ಶೋಕೇಸ್' ಉತ್ಪನ್ನದಲ್ಲಿ ಗೋಚರವಾಗುವ ಸುದ್ದಿ ವಿಚಾರಗಳಿಗೆ ಗೂಗಲ್ ಹಣ ಪಾವತಿಸಬೇಕಾಗಲಿದೆ. ಹಾಗೆಯೇ ಫೇಸ್‌ಬುಕ್ ತನ್ನ 'ನ್ಯೂಸ್' ವಿಭಾಗದಲ್ಲಿ ಪ್ರಕಟವಾಗುವ ಸುದ್ದಿಗಳ ಪೂರೈಕೆದಾರರಿಗೆ ಹಣ ಪಾವತಿಸಬೇಕಾಗಲಿದೆ. ಈ ಕಾನೂನು ಆಸ್ಟ್ರೇಲಿಯಾದಲ್ಲಿ ಕೆಲವು ತಿಂಗಳ ಬಳಿಕ ಜಾರಿಯಾಗುವ ನಿರೀಕ್ಷೆಯಿದೆ.

ಉಚಿತ ಬಳಕೆ ಮೂಲಕ ಲಾಭ
ಆನ್‌ಲೈನ್‌ನಲ್ಲಿ ಜಾಹೀರಾತು ಪ್ರಕಟಿಸುವುದರಲ್ಲಿ ಪ್ರಾಬಲ್ಯ ಮೆರೆಯುವ ತಾಂತ್ರಿಕ ಕಂಪೆನಿಗಳು, ಸಾಂಪ್ರದಾಯಿಕ ಸುದ್ದಿ ಸಂಸ್ಥೆಗಳಿಂದ ಉಚಿತವಾಗಿ ಸುದ್ದಿಗಳನ್ನು ಪಡೆದುಕೊಂಡು ಲಾಭ ಮಾಡಿಕೊಳ್ಳುತ್ತಿವೆ ಎಂದು ಸರ್ಕಾರದ ನಿಯಂತ್ರಕ ಇಲಾಖೆಗಳು ಆರೋಪಿಸಿವೆ. ಈ ಕಾನೂನು ತಮ್ಮ ವಹಿವಾಟಿನ ಮಾದರಿಗೆ ದೊಡ್ಡ ಬೆದರಿಕೆಯಾಗಲಿವೆ ಎಂದು ಆತಂಕಗೊಂಡಿರುವ ಕಂಪೆನಿಗಳು, ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

ಮಾಧ್ಯಮಗಳ ಜತೆ ಒಪ್ಪಂದ ಕಡ್ಡಾಯ
ಕಂಪೆನಿಗಳು ಮಾಧ್ಯಮ ಸಂಸ್ಥೆಗಳ ಜತೆಗೆ ವ್ಯವಹಾರ ನಡೆಸುವುದು ಕಡ್ಡಾಯ ಎಂಬ ನಿಯಮಕ್ಕೆ ಹಾಗೂ ಹಣಕಾಸು ಒಪ್ಪಂದದ ಹೇರಿಕೆಯ ಹಕ್ಕನ್ನು ಆಸ್ಟ್ರೇಲಿಯಾದ ಸ್ವತಂತ್ರ ಸಂಸ್ಥೆಯೊಂದಕ್ಕೆ ನೀಡಿರುವುದು ಹೆಚ್ಚಿನ ವಿರೋಧಕ್ಕೆ ಒಳಗಾಗಿದೆ. ಸರ್ಕಾರದ ತಿದ್ದುಪಡಿ ವೇಳೆ ಈ ನಿಯಮಗಳಲ್ಲಿ ನಾಟಕೀಯ ರೀತಿಯಲ್ಲಿ ಕಡಿತ ಮಾಡಲಾಗಿದೆ.

ಮಾಧ್ಯಮ ಉಳಿಸುವ ಪ್ರಯತ್ನ
ನ್ಯೂಸ್ ಮೀಡಿಯಾ ಆಂಡ್ ಡಿಜಿಟಲ್ ಪ್ಲಾಟ್‌ಫಾರ್ಮ್ಸ್ ಮ್ಯಾಂಡೇಟರಿ ಬಾರ್ಗೈನಿಂಗ್ ಕೋಡ್ ಎಂಬ ಈ ಕಾನೂನು ಆಸ್ಟ್ರೇಲಿಯಾದಲ್ಲಿನ ಸಾರ್ವಜನಿಕ ಹಿತಾಸಕ್ತಿ ಪತ್ರಿಕೋದ್ಯಮದ ಉಳಿವಿಗೆ ನೆರವಾಗುವಂತೆ ಅವರು ಸೃಷ್ಟಿಸುವ ವಿಷಯಗಳಿಗೆ ನ್ಯಾಯೋಚಿತ ರೀತಿಯಲ್ಲಿ ಸಂಭಾವನೆಯನ್ನು ಸೃಷ್ಟಿಸುವಂತೆ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಸಂಬಂಧ ಒಪ್ಪಂದಗಳನ್ನು ಮಾಡಿಕೊಳ್ಳಲು ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಗಳಿಗೆ ಎರಡು ತಿಂಗಳು ಹೆಚ್ಚುವರಿ ಸಮಯ ನೀಡಲಾಗಿದೆ.

ಸಾವಿರಾರು ಉದ್ಯೋಗ ನಷ್ಟ
ಈಗಾಗಲೇ ಗೂಗಲ್ ಸಂಸ್ಥೆಯು ರುಪರ್ಟ್ ಮುರ್ಡೋಕ್ ಅವರ ನ್ಯೂಸ್ ಕಾರ್ಪ್ ಮತ್ತು ನೈನ್ ಎಂಟರ್‌ಟೈನ್‌ಮೆಂಟ್ ಸೇರಿದಂತೆ ವಿವಿಧ ಸ್ಥಳೀಯ ಮಾಧ್ಯಮ ಕಂಪೆನಿಗಳೊಂದಿಗೆ ಲಕ್ಷಾಂತರ ಡಾಲರ್ ಮೊತ್ತದ ಒಪ್ಪಂದಗಳನ್ನು ಮಾಡಿಕೊಂಡಿದೆ. ಡಿಜಿಟಲ್ ಸಂಸ್ಥೆಗಳಿಗೆ ಜಾಹೀರಾತು ಆದಾಯ ಹರಿದುಹೋದ ಕಾರಣ ಆಸ್ಟ್ರೇಲಿಯಾದಲ್ಲಿ ಕಳೆದ ದಶಕದಲ್ಲಿ ಅನೇಕ ಮಾಧ್ಯಮ ಸಂಸ್ಥೆಗಳು ನಷ್ಟದಿಂದ ಮುಚ್ಚಿಹೋಗಿದ್ದು, ಸಾವಿರಾರು ಮಾಧ್ಯಮ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications