Get Updates
Get notified of breaking news, exclusive insights, and must-see stories!

ಎಸ್ಸಾರ್ ಸ್ಟೀಲ್ ಖರೀದಿಗೆ 42 ಸಾವಿರ ಕೋಟಿ ಪಾವತಿ ಮಾಡುವುದಾಗಿ ಹೇಳಿದ ಅರ್ಸೆಲರ್ ಮಿತ್ತಲ್

ಋಣ ಭಾರದಲ್ಲಿ ಮುಳುಗಿರುವ ಎಸ್ಸಾರ್ ಸ್ಟೀಲ್ ಖರೀದಿಗಾಗಿ 42 ಸಾವಿರ ಕೋಟಿ ಪಾವತಿ ಮಾಡುವುದಾಗಿ, ಅದರಲ್ಲಿ ಕನಿಷ್ಠ ಖಾತ್ರಿ 2500 ಸಾವಿರ ಕೋಟಿ ರುಪಾಯಿಯನ್ನು ವರ್ಕಿಂಗ್ ಕ್ಯಾಪಿಟಲ್ ನೀಡುವುದಾಗಿ ಜಾಗತಿಕ ಮಟ್ಟದ ಉಕ್ಕು ತಯಾರಿಕೆಯಲ್ಲಿ ದೈತ್ಯ ಕಂಪೆನಿ ಅರ್ಸೆಲರ್ ಮಿತ್ತಲ್ ನಿಂದ ನ್ಯಾಷನಲ್ ಕಂಪೆನಿ ಲಾ ಅಪೆಲೆಟ್ ಟ್ರಿಬ್ಯುನಲ್ ಗೆ(NCLAT) ತಿಳಿಸಲಾಗಿದೆ.

ಎಸ್ಸಾರ್ ಸ್ಟೀಲ್ ಕಂಪೆನಿಯ ದಿವಾಳಿ ಪ್ರಕ್ರಿಯೆಯಲ್ಲಿ ಇಂಥದ್ದೊಂದು ಪ್ರಸ್ತಾವ ಇಡಲಾಗಿದೆ. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅರ್ಸೆಲರ್ ಮಿತ್ತಲ್ ಪರವಾಗಿ ವಕೀಲಿಕೆ ವಹಿಸಿದ್ದು, ಎಸ್ಸಾರ್ ಸ್ಟೀಲ್ ನ ಈ ಹಿಂದಿನ ಪ್ರವರ್ತಕರ ವಿರುದ್ಧ ಆರೋಪ ಮಾಡಿದ್ದು, ದಿವಾಳಿ ಆಗಿರುವ ಕಂಪೆನಿಯ ಪ್ರಕ್ರಿಯೆಗಳಿಗೆ ಅಡ್ಡಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಾಳ್ವೆ ಪ್ರಕಾರ, ಲಕ್ಷ್ಮೀ ಮಿತ್ತಲ್ ಕಂಪೆನಿಯ ಎನ್ ಪಿಎಗಳ ಆರೋಪದ ಬಗ್ಗೆ ಈಗಾಗಲೇ ಮಿತ್ತಲ್ ಸಹೋದರ ವ್ಯವಹರಿಸುತ್ತಿದ್ದಾರೆ ಮತ್ತು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಾಳ್ವೆ ಅವರು ಮುಂದುವರಿದು, NCLAT ಹಾಗೂ ಸಾಲ ನೀಡಿರುವವರು ಎಸ್ಸಾರ್ ಸ್ಟೀಲ್ ನ ಸಾಲಗಾರರ ಮಧ್ಯೆ ಹಂಚಿಕೆ ಆಗಬೇಕಾದ ಹಣದ ಬಗ್ಗೆ ನಿರ್ಧಾರ ಆಗಬೇಕಿದೆ.

ArcelorMittal to pay 42 thousand crore for Essar Steel takeover

ಆರ್ಥಿಕ ಹಾಗೂ ಕಾರ್ಯ ನಿರ್ವಹಣೆ ಸಾಲಗಾರರ ಮಧ್ಯೆ ಹಣವು ಸಮಾನವಾಗಿ ಹಂಚಿಕೆ ಆಗಬೇಕು ಎಂದಿದ್ದಾರೆ. ಎಸ್ಸಾರ್ ಸ್ಟೀಲ್ ನ ದಿವಾಳಿ ಪ್ರಕರಣದ ಮುಂದುವರಿದ ವಿಚಾರಣೆಯನ್ನು NCLAT ಮೇ 21ರಂದು ಆಲಿಸಲಿದೆ.

ಅರ್ಸೆಲರ್ ಮಿತ್ತಲ್ ನ ಅಧ್ಯಕ್ಷ ಹಾಗೂ ಸಿಇಒ ಎಲ್.ಎನ್.ಮಿತ್ತಲ್ ಕೆಲವು ಪ್ರಮುಖ ಅಂಶಗಳನ್ನು ಮುಚ್ಚಿಟ್ಟಿದ್ದಾರೆ. ಇಲ್ಲದಿದ್ದರೆ ಅವರಿಗೆ ಎಸ್ಸಾರ್ ಸ್ಟೀಲ್ ಖರೀದಿಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಆರೋಪ ಮಾಡಲಾಗಿದೆ. ಈಗ ಎಸ್ಸಾರ್ ಸ್ಟೀಲ್ ಖರೀದಿ ಮಾಡುವುದರಿಂದ ಅರ್ಸೆಲರ್ ಮಿತ್ತಲ್ ಅನ್ನು ಅನರ್ಹಗೊಳಿಸಬೇಕು ಎಂದು ಕೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+