Apple Vision Pro: ಆಗ್ಮೆಂಟೆಡ್ ರಿಯಾಲಿಟಿಗೆ ಲಗ್ಗೆಯಿಟ್ಟ ಆಪಲ್! ವಿಸನ್ ಪ್ರೋ ಹೆಡ್‌ಸೆಟ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?
ಟೆಕ್ ದೈತ್ಯವಾದ Apple Inc. ತನ್ನ ಬಹುನಿರೀಕ್ಷಿತ ಆಪಲ್ ವಿಷನ್ ಪ್ರೊವನ್ನು ಅನಾವರಣಗೊಳಿಸಿದೆ. ಇದು ಅತ್ಯಾಧುನಿಕ ತಂತ್ರಜ್ಣಾನ ಹೊಂದಿರುವ ಉತ್ಪನ್ನವಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವುದಾಗಿ ಆಪಲ್ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.
ವಿಷಯಕ್ಕೆ ಬಂದರೆ ವರ್ಧಿತ ರಿಯಾಲಿಟಿ (AR) ಎಂಬ ಪದವನ್ನು ಕೇಳಿರುತ್ತೀರ, ತಿಳಿಯದಿದ್ದರೇ ಇದೊಂದು ಭೌತಿಕ ಪ್ರಪಂಚವನ್ನು ಡಿಜಿಟಲ್ ಕ್ಷೇತ್ರಕ್ಕೆ ಕನೆಕ್ಟ್ ಮಾಡುವ ಟೆಕ್ನಾಲಜಿಯಾಗಿದೆ. ಈ ಅತ್ಯಾಧುನಿಕ ಟೆಕ್ನಾಲಜಿಯೊಂದಿಗೆ ಆಪಲ್ ಹೊಸ ವಿಷನ್ ಪ್ರೊ ಗಾಗಲ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಅನಾವರಣಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಉದಾಹರಣೆಗೆ ಟೆಲಿಕಾಸ್ಟ್ ಮಾಡಿದ ಕ್ರೀಡಾ ಆಟಗಳಲ್ಲಿ ಸ್ಕೋರ್ ಓವರ್‌ಲೇಗಳನ್ನು ಪ್ರದರ್ಶಿಸಲು ಮತ್ತು 3D ಫೋಟೋಗಳು, ಪಠ್ಯ ಸಂದೇಶಗಳು ಮತ್ತು ಇಮೇಲ್‌ಗಳನ್ನು ಪಾಪ್ ಔಟ್ ಮಾಡಲು AR ತಂತ್ರಜ್ಞಾನವು ಸಹಾಯ ಮಾಡುತ್ತದೆ. ಈ ಅತ್ಯಾಧುನಿಕ ಟೆಕ್ನಾಲಜಿಯೊಂದಿಗೆ ಆಪಲ್ ಹೊಸ ವಿಷನ್ ಪ್ರೊ ಗಾಗಲ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಅನಾವರಣಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದು, ವಿಷನ್ ಪ್ರೊ $ 3,499 (2,89,131 ರೂ.) ಬೆಲೆ ಹೊಂದಿರಲಿದೆ. ಮುಂದಿನ ವರ್ಷದ ಆರಂಭದಲ್ಲಿ ಅಮೆರಿಕಾ ಮಾರುಕಟ್ಟೆಯಲ್ಲಿ ಹೆಡ್‌ಸೆಟ್ ಪ್ರಾರಂಭಗೊಳ್ಳಲಿದೆ, ಮುಂದಿನ ವರ್ಷಗಳಲ್ಲಿ ಇತರ ಪ್ರದೇಶಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷನ್ ಪ್ರೊ ಏಳು ವರ್ಷಗಳ ತೀವ್ರ ಅಭಿವೃದ್ಧಿಯ ನಂತರವೇ ಮಾರಾಟಕ್ಕೆ ತರಲಾಗಿದ್ದು, ಪ್ರಾದೇಶಿಕ ಕಂಪ್ಯೂಟಿಂಗ್‌ನ ಹೊಸ ಯುಗಕ್ಕೆ ಇದು ಭರವಸೆ ನೀಡುತ್ತದೆ ಎಂದು ಕಂಪನಿ ಹೆಳಿಕೊಂಡಿದೆ. ಈ ಡಿಜಿಟಲ್ ಜಗತ್ತನ್ನು ಸರಳವಾಗಿ ಗಮನಿಸುವುದನ್ನು ಬಿಟ್ಟು, ಆಳವಾಗಿ ಸಂವಹನ ಮತ್ತು ತೊಡಗಿಸಿಕೊಳ್ಳುವ ಬದಲಾವಣೆಯನ್ನು ಇದರ ಮೂಲಕ ಪಡೆಯಬಹುದು ಎನ್ನಲಾಗಿದೆ.

ವಿಷನ್ ಪ್ರೊ ಎಂಬುದು AR-ಮೊದಲ ಸಾಧನವಾಗಿದ್ದು, ವರ್ಧಿತ ಮತ್ತು ಪೂರ್ಣ ವರ್ಚುವಲ್ ರಿಯಾಲಿಟಿ ಅನುಭವಗಳ ನಡುವೆ ಪರಿವರ್ತನೆಯ ಸಾಮರ್ಥ್ಯವನ್ನು ಹೊಂದಿದೆ. ಕಣ್ಣಿನ ಟ್ರ್ಯಾಕಿಂಗ್, ಕೈ ಸನ್ನೆಗಳು ಮತ್ತು ವಾಯಿಸ್ ಕಮಾಂಡ್‌ಗಳಿಂದ ನ್ಯಾವಿಗೇಟ್ ಮಾಡಲಾದ ಇಂಟರ್ಫೇಸ್ ಅನ್ನು ಬಳಸುತ್ತದೆ.
AR ಹೆಡ್‌ಸೆಟ್ ನಮ್ಮ ಕಣ್ಣುಗಳ ದೃಷ್ಟಿಯನ್ನು ಬಳಸುತ್ತದೆ, ಅಂದರೆ ಇದನ್ನು ಧರಿಸಿದವರ ಕಣ್ಣುಗಳಿಗೆ ಆಗ್‌ಮೆಂಟೆಡ್ ರಿಯಾಲಿಟಿ ತೋರಿಸುವ ವ್ಯವಸ್ಥೆಯನ್ನು ಹೊಂದಿದೆ. ಸಾಮಾಜಿಕ ಸಂವಹನವನ್ನು ಹಾಗೇ ಇರಿಸಿ ಪೂರ್ಣ ವಿಆರ್ ಮೋಡ್‌ಗೆ ಬದಲಾಯಿಸಿದಾಗ, ಶೈನಿಂಗ್ ಸ್ಕ್ರೀನ್‌ನೊಂದಿಗೆ ಬಳಕೆದಾರರ ಕಣ್ಣುಗಳನ್ನು ಅಸ್ಪಷ್ಟಗೊಳಿಸುತ್ತದೆ, ಈ ಮೂಲಕ ಸಂವಹನಕ್ಕೆ ಅಲಭ್ಯತೆಯನ್ನು ಸೂಚಿಸುತ್ತದೆ. ಇದು ಕೇವಲ ಪೂರ್ಣ ವಿಆರ್ ಮೋಡ್‌ನಲ್ಲಿ ಮಾತ್ರ.












Click it and Unblock the Notifications