ಪ್ರತಿ ತಿಂಗಳಿಗೆ ₹ 2.44 ಕೋಟಿ: ಬೆಂಗಳೂರಿನ ಹೃದಯ ಭಾಗದಲ್ಲಿ ಕಚೇರಿ ಬಾಡಿಗೆ ಪಡೆದ ಆ್ಯಪಲ್ ಕಂಪನಿ- ಮಾಹಿತಿ, ವಿವರ
ಬೆಂಗಳೂರು, ಏಪ್ರಿಲ್ 10: ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ನಿರ್ಮಿಸಿದ ವಾಣಿಜ್ಯ ಕಟ್ಟಡದ ಬಹು ಮಹಡಿಗಳನ್ನು ಹತ್ತು ವರ್ಷಗಳ ಅವಧಿಗೆ ಆ್ಯಪಲ್ ಕಂಪನಿಯು ಲೀಸ್‌ಗೆ ಪಡೆದಿದೆ. ಇದರ ಆರಂಭಿಕ ಮಾಸಿಕ ಶುಲ್ಕ ರೂ. 2.44 ಕೋಟಿ ಆಗಿದೆ.
ಇತ್ತೀಚೆಗೆ ನಿರ್ಮಿಸಲಾದ ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್ ಬೆಂಗಳೂರಿನ ಕಬ್ಬನ್ ರಸ್ತೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಡೇಟಾ ಅನಾಲಿಟಿಕ್ಸ್ ಕಂಪನಿ ಪ್ರಾಪ್‌ಸ್ಟಾಕ್ ನೋಂದಣಿ ದಾಖಲೆಗಳ ಪ್ರಕಾರ, ಐಫೋನ್ ಮತ್ತು ಐಪ್ಯಾಡ್ ತಯಾರಕ ಕಂಪನಿಯಾಗಿರುವ ಆಫಲ್ ಕಚೇರಿ ಕಟ್ಟಡವನ್ನು ಲೀಸ್‌ಗೆ ಪಡೆದಿದೆ.

ಈ ಕಟ್ಟಡದ ಮೂರು ಮಹಡಿಗಳನ್ನು ಬಳಸಲು ಆಫಲ್ ಮುಂದಾಗಿದೆ. ಇದರ ಒಟ್ಟು ಗಾತ್ರ 1 , 16, 888 ಚದರ ಅಡಿಗಳು. ಜುಲೈ 1, 2023 ರಂದು ಬಾಡಿಗೆ ಪಾವತಿಗಳು ಪ್ರಾರಂಭವಾಗುತ್ತವೆ ಎಂದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ವರದಿ ಮಾಡಿದೆ.
ಲಾಕ್-ಇನ್ ಅವಧಿಯು ಎರಡೂ ಪಾರ್ಟಿಗಳಿಗೆ ( ಆಫಲ್ ಮತ್ತು ಪ್ರೆಸ್ಟೀಸ್ ) ಐದು ವರ್ಷಗಳಾಗಿದೆ. ಬಾಡಿಗೆಯು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ 15 ರಷ್ಟು ಹೆಚ್ಚಾಗುತ್ತದೆ. ಈ ವ್ಯವಹಾರವು ಐದು ವರ್ಷಗಳ ಮೂರು ಅವಧಿಗಳಿಗೆ ವಿಸ್ತರಿಸಬಹುದು. ವರದಿಗಳ ಪ್ರಕಾರ, ಈ ಜಾಗವನ್ನು ಜಾಗತಿಕ ಸಾಮರ್ಥ್ಯಗಳ ಕೇಂದ್ರವಾಗಿ ಬಳಸಿಕೊಳ್ಳಲು ಆಫಲ್ ಉದ್ದೇಶಿಸಿದೆ.

ಗಮನಾರ್ಹವಾಗಿ, ಗುತ್ತಿಗೆ ಒಪ್ಪಂದವು ಕಟ್ಟಡದಲ್ಲಿ ಬೇರೆ ಯಾವುದೇ ಪ್ರತಿಸ್ಪರ್ಧಿಗಳಿಗೆ ಜಾಗವನ್ನು ನೀಡುವುದಿಲ್ಲ ಎಂಬ ಷರತ್ತು ಒಳಗೊಂಡಿದೆ. ಪ್ರಮುಖವಾಗಿ, Alpabeta, Microsoft, Samsung, Xiaomi, Amazon, Huawei, Netflix, Facebook, Spotify, Baidu ಮತ್ತು Tencent ಗೆ ಗುತ್ತಿಗೆ ನೀಡಲಾಗುವುದಿಲ್ಲವೆಂದು ಗುತ್ತಿಗೆ ಒಪ್ಪಂದದಲ್ಲಿ ತಿಳಿಸಲಾಗಿದೆ.
2025 ರ ವೇಳೆಗೆ, ಭಾರತದಲ್ಲಿ ನಾಲ್ಕು ಐಫೋನ್ ಗಳಲ್ಲಿ ಒಂದನ್ನು ತಯಾರಿಸಲು ಆಪಲ್ ಯೋಜಿಸುತ್ತಿದೆ ಎಂದು ಜೆಪಿ ಮೋರ್ಗಾನ್ ಕಳೆದ ವರ್ಷದ ವರದಿಯಲ್ಲಿ ತಿಳಿಸಿತ್ತು.
ಐಪ್ಯಾಡ್‌ಗಳು, ಆಪಲ್ ವಾಚ್‌ಗಳು, ಏರ್‌ಪಾಡ್‌ಗಳು ಮತ್ತು ಮ್ಯಾಕ್‌ಗಳಂತಹ ಇತರ ಎಲ್ಲಾ ಉತ್ಪನ್ನಗಳ ಕಾಲು ಭಾಗದ ಉತ್ಪಾದನೆಯನ್ನು ಸಹ ಇಲ್ಲಿಯೇ ತಯಾರಿಸಲಾಗುವುದು ಎಂದು ತಿಳಿದುಬಂದಿದೆ.

ಭಾರತದಿಂದ ತನ್ನ ಉತ್ಪಾದನೆಯನ್ನು ಪ್ರಸ್ತುತ 5-7 ಪ್ರತಿಶತದಿಂದ 25 ಪ್ರತಿಶತಕ್ಕೆ ವಿಸ್ತರಿಸಲು ಆಫಲ್ ಯೋಜಿಸಿದೆ.
Apple Inc. ಅಮೆರಿಕದಲ್ಲಿನ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೇರಿಕನ್ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ.
2022ರಲ್ಲಿ US$ 394.3 ಶತಕೋಟಿ ಆದಾಯದೊಂದಿಗೆ ಆಪಲ್ ಆದಾಯದ ಮೂಲಕ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ. ಮಾರ್ಚ್ 2023 ರ ಹೊತ್ತಿಗೆ, ಮಾರುಕಟ್ಟೆ ಬಂಡವಾಳೀಕರಣದ ಮೂಲಕ Apple ವಿಶ್ವದ ಅತಿದೊಡ್ಡ ಕಂಪನಿಯಾಗಿದೆ.
ಜೂನ್ 2022 ರ ಹೊತ್ತಿಗೆ, ಆಪಲ್ ಯುನಿಟ್ ಮಾರಾಟದ ಮೂಲಕ ನಾಲ್ಕನೇ-ಅತಿದೊಡ್ಡ ವೈಯಕ್ತಿಕ ಕಂಪ್ಯೂಟರ್ ಮಾರಾಟಗಾರ ಮತ್ತು ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕವಾಗಿದೆ.
ಕಂಪನಿಯ ವೆಬ್ ಸೈಟ್‌ನಲ್ಲಿನ ಕಿರು ಸೂಚನೆಯ ಪ್ರಕಾರ, ಆಪಲ್ ಭಾರತದಲ್ಲಿ ತನ್ನ ಮೊದಲ ಚಿಲ್ಲರೆ ಅಂಗಡಿಯನ್ನು ಮುಂಬೈನಲ್ಲಿ ತೆರೆಯಲಿದೆ. 'ಭಾರತದಲ್ಲಿ ನಮ್ಮ ಮೊದಲ ಮಳಿಗೆಗೆ ನಿಮ್ಮನ್ನು ಸ್ವಾಗತಿಸಲು ನಾವು ತಯಾರಾಗುತ್ತಿದ್ದೇವೆ. ಹೊಸ ಸ್ಟೋರ್ ಶೀಘ್ರದಲ್ಲೇ ಬರಲಿದೆ' ಎಂದು ಅದು ಮಾಹಿತಿ ನೀಡಿದೆ.












Click it and Unblock the Notifications