ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್

ಬೆಂಗಳೂರು, ಆಗಸ್ಟ್ 20: ಇ ರೀಟೈಲರ್ ಫ್ಲಿಪ್ ಕಾರ್ಟ್ ಖರೀದಿಯನ್ನು ವಾಲ್ಮಾರ್ಟ್ ಮುಗಿಸುತ್ತಿದ್ದಂತೆ, ಇತ್ತ ಅಮೆಜಾನ್ ಕೂಡಾ ತನ್ನ ಜಾಲ ವಿಸ್ತರಣೆಗೆ ಮುಂದಾಗಿದೆ. ಕುಮಾರ್ ಮಂಗಳಂ ಬಿರ್ಲಾ ಒಡೆತನದ ಆಹಾರ ಹಾಗೂ ದಿನಸಿ ಸೂಪರ್ ಮಾರ್ಕೆಟ್ ಮಳಿಗೆ 'ಮೋರ್' ಜಾಲವನ್ನು ಖರೀದಿಸಲು ಅಮೆಜಾನ್ ಮುಂದಾಗಿರುವ ಸುದ್ದಿ ಬಂದಿದೆ.

ಗೋಲ್ಡ್ ಮನ್ ಸಾಚ್ಸ್ ಹಾಗೂ ಸಮರ ಕ್ಯಾಪಿಟಲ್ ನೆರವಿನಿಂದ ಅಮೆಜಾನ್ ಈ ಡೀಲ್ ಕುದುರಿಸಲು ಯತ್ನಿಸುತ್ತಿದೆ. ಸರಿ ಸುಮಾರು 4,500 ರಿಂದ 5,000 ಕೋಟಿ ರು ಮೌಲ್ಯದ ಒಪ್ಪಂದ ಇದಾಗಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಕಳೆದ ಸೆಪ್ಟೆಂಬರ್ ನಲ್ಲಿ 180 ಕೋಟಿ ರು ನೀಡಿ, ಶಾಪರ್ಸ್ ಸ್ಟಾಪ್ ನಲ್ಲಿ ತನ್ನ ಹೂಡಿಕೆ ಮಾಡಿದ ಬಳಿಕ ಈಗ ಮೋರ್ ಮೇಲೆ ಕಣ್ಣಿಟ್ಟಿದೆ.

Amazon, Goldman Sachs may acquire Indian supermarket chain More

493 ಸೂಪರ್ ಮಾರ್ಕೆಟ್, 20 ಹೈಪರ್ ಮಾರ್ಕೆಟ್ ಗಳನ್ನು ಹೊಂದಿರುವ, ಮುಖ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರಾಬಲ್ಯ ಉಳ್ಳ ಮೋರ್ ಮಳಿಗೆಯನ್ನು ಅಮೆಜಾನ್ ಖರೀದಿಸಲು ಮುಂದಾಗಿದೆ.

ರಿಲಯನ್ಸ್ ರೀಟೈಲ್, ಫ್ಯೂಚರ್ ಗ್ರೂಪ್ ಹಾಗೂ ಅವಿನ್ಯೂ ಸೂಪರ್ ಮಾರ್ಕೆಟ್ ನ ಡಿ ಮಾರ್ಟ್ ವಿರುದ್ಧ ಅಮೆಜಾನ್ ಪೈಪೋಟಿ ನಡೆಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+