ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್, ವೊಡಾಫೋನ್
ನವದೆಹಲಿ, ನವೆಂಬರ್ 19: ದೂರಸಂಪರ್ಕ ಸೇವೆಗಳಲ್ಲಿನ ತಾಂತ್ರಿಕ ಸಮಸ್ಯೆಗಳು, ದರ ಬದಲಾವಣೆಗಳಿಂದ ಗೊಂದಲಕ್ಕೊಳಗಾಗಿದ್ದ ಪ್ರಮುಖ ದೂರಸಂಪರ್ಕ ಕಂಪೆನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್, ತಮ್ಮ ಗ್ರಾಹಕರಿಗೆ ಮತ್ತೊಂದು ಆಘಾತ ನೀಡಿವೆ. ಮುಂದಿನ ತಿಂಗಳಿನಿಂದ ತನ್ನ ಸೇವಾ ಶುಲ್ಕಗಳನ್ನು ಹೆಚ್ಚಿಸುತ್ತಿರುವುದಾಗಿ ಈ ಸಂಸ್ಥೆಗಳು ತಿಳಿಸಿವೆ.
ಕೆಲವೇ ವರ್ಷಗಳ ಹಿಂದೆ ಹತ್ತಾರು ದೂರಸಂಪರ್ಕ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್‌ಗಳ ಮೂಲಕ ಕಡಿಮೆ ದರ ಸೇವೆಗಳನ್ನು ಘೋಷಿಸುತ್ತಿದ್ದವು. ಆದರೆ ಈಗ ಬಹುತೇಕ ದೂರಸಂಪರ್ಕ ಕಂಪೆನಿಗಳು ಮುಚ್ಚಿ ಹೋಗಿವೆ ಅಥವಾ ವಿಲೀನಗೊಂಡಿವೆ. ಜಿಯೋ, ಏರ್‌ಟೆಲ್, ವೊಡಾಫೊನ್ ಐಡಿಯಾ ಹಾಗೂ ಸರ್ಕಾರಿ ಸ್ವಾಮ್ಯ ಬಿಎಸ್‌ಎನ್‌ಎಲ್ ಹೊರತುಪಡಿಸಿ ಬೇರೆ ಕಂಪೆನಿಗಳು ಪೈಪೋಟಿಯಲ್ಲಿಲ್ಲ. ಜಿಯೋ ನೀಡಿದ ಆಫರ್‌ಗಳಿಂದ ತತ್ತರಿಸಿರುವ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಭಾರಿ ನಷ್ಟ ಅನುಭವಿಸಿವೆ.
ನಷ್ಟವನ್ನು ಸರಿದೂಗಿಸಲು ದರ ಏರಿಕೆಯ ಅನಿವಾರ್ಯತೆಗೆ ಈ ಕಂಪೆನಿಗಳು ಮುಂದಾಗಿವೆ. ವಿವಿಧ ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದ ಕಂಪೆನಿಗಳು ಅವುಗಳಿಗೆ ಶುಲ್ಕ ವಿಧಿಸಲು ಮುಂದಾಗಿವೆ ಹಾಗೂ ಇತರೆ ಸೇವಾ ಶುಲ್ಕಗಳ ಮೇಲೆಯೂ ಹೆಚ್ಚುವರಿ ಹೊರೆ ನೀಡಿವೆ.

ಸೇವೆಗಳ ಮೇಲೆ ಬೆಲೆ ಹೆಚ್ಚಳ
ಡಿಸೆಂಬರ್ 1ರಿಂದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳ ಸೇವೆಗಳ ದರ ಏರಿಕೆಯಾಗಲಿದೆ. ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಎರಡೂ ಗ್ರಾಹಕರಿಗೆ ಈ ದರ ಹೆಚ್ಚಳದ ಬಿಸಿ ತಟ್ಟಲಿದೆ. ಸೇವೆಗಳ ಮೇಲೆ ಸ್ವಲ್ಪ ಮಟ್ಟಿನ ಹೆಚ್ಚಳ ಮಾಡುವುದಾಗಿ ಸಂಸ್ಥೆಗಳು ತಿಳಿಸಿವೆ. ಜಿಯೋ ಇತರೆ ಸೇವಾದಾರರ ಗ್ರಾಹಕರಿಗೆ ಮಾಡುವ ಕರೆಗಳ ಮೇಲೆ ನಿಮಿಷಕ್ಕೆ ಆರು ಪೈಸೆಗಳ ದರ ವಿಧಿಸುವ ನಿರ್ಧಾರವನ್ನು ಇತ್ತೀಚೆಗೆ ತೆಗೆದುಕೊಂಡಿತ್ತು.

ದರ ಏರಿಕೆ ಅನಿವಾರ್ಯ
'ಏರ್‌ಟೆಲ್ ಡಿಸೆಂಬರ್ ಆರಂಭದಿಂದ ತನ್ನ ವಿವಿಧ ಸೇವಾ ಟಾರಿಫ್‌ಗಳ ಮೇಲಿನ ದರವನ್ನು ಹೆಚ್ಚಿಸಲಿದೆ. ಆದರೂ ಗ್ರಾಹಕರಿಗೆ ಕೈಗೆಟಕುವ ಟಾರಿಫ್‌ಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ. ಕಂಪೆನಿಯು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಅಗತ್ಯವಾದ ಹೆಚ್ಚುನ ಹೂಡಿಕೆ ನಡೆಸಲು ಹಾಗೂ ನಮ್ಮ ಗ್ರಾಹಕರಿಗೆ ಅವಶ್ಯಕವಾಗಿರುವ ಗುಣಮಟ್ಟದ ಸೇವೆಯನ್ನು ನಿಭಾಯಿಸಲು ದರ ಹೆಚ್ಚಳ ಅನಿವಾರ್ಯ' ಎಂದು ಎರ್‌ಟೆಲ್‌ನ ವಕ್ತಾರರು ತಿಳಿಸಿದ್ದಾರೆ.

ನಷ್ಟದಲ್ಲಿವೆ ಕಂಪೆನಿಗಳು
ಕಳೆದ ತ್ರೈಮಾಸಿಕ ಅವಧಿಗಳಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಭಾರಿ ಪ್ರಮಾಣದ ನಷ್ಟ ಅನುಭವಿಸಿವೆ. ಇದರ ಜತೆಗೆ ಈ ಕಂಪೆನಿಗಳು ಬಾಕಿ ಉಳಿಸಿಕೊಂಡಿರುವ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಮೊತ್ತವನ್ನು ಕೂಡ ಸರ್ಕಾರಕ್ಕೆ ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿರುವುದು ಮತ್ತೊಂದು ಹೊಡೆತ ನೀಡಿದೆ. ಈ ಆದೇಶದಂತೆ ಎರಡೂ ಕಂಪೆನಿಗಳು ಸುಮಾರು 80 ಸಾವಿರ ಕೋಟಿ ರೂ. ಬಾಕಿ ಮೊತ್ತವನ್ನು ಪಾವತಿಸಬೇಕಾಗಿದೆ.

ಎಜಿಆರ್ ಪಾವತಿಯ ಹೊರೆ
ಡಿ. 1ರಿಂದ ಅನ್ವಯವಾಗುವಂತೆ ತನ್ನ ಟಾರಿಫ್ ದರದಲ್ಲಿ ಹೆಚ್ಚಳ ಮಾಡಲಾಗುತ್ತದೆ ಎಂದು ವೊಡಾಫೋನ್ ಐಡಿಯಾ ಭಾನುವಾರ ತಿಳಿಸಿತ್ತು. ಫೋನ್ ಕರೆ, ಡೇಟಾ ಹಾಗೂ ಎಸ್‌ಎಂಎಸ್ ಸೇವೆಗಳಲ್ಲಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ವೊಡಾಫೋನ್ ಐಡಿಯಾ ಸುಮಾರು 44,200 ಕೋಟಿ ರೂ ಎಜಿಆರ್ ಪಾವತಿಸಬೇಕಿದೆ. ಹೀಗಾಗಿ ಈ ಹಣವನ್ನು ಹೊಂದಿಸಲು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕಲು ಕಂಪೆನಿ ತೀರ್ಮಾನಿಸಿದೆ. ಸುಪ್ರೀಂಕೋರ್ಟ್ ಆದೇಶ ಬಂದ ಬಳಿಕ ವೊಡಾಫೋನ್‌ನ ಷೇರು ಸಂಪೂರ್ಣ ತಳಕಚ್ಚಿದ್ದು, ಶೂನ್ಯಕ್ಕೆ ಕುಸಿದಿದೆ. ಭಾರತದಲ್ಲಿ ವ್ಯವಹಾರ ಮುಂದುವರಿಸುವುದು ಕಷ್ಟವಾಗಲಿದೆ ಎಂದು ವೊಡಾಫೋನ್ ಸಿಇಒ ಹೇಳಿದ್ದರು.

ದರ ಹೆಚ್ಚಳ ಎಷ್ಟಾಗಲಿದೆ?
ಆದರೆ ಪೋಸ್ಟ್‌ಪೇಯ್ಡ್ ಮತ್ತು ಪ್ರೀಪೇಯ್ಡ್ ಸೇವೆಗಳಲ್ಲಿ ಎಷ್ಟು ದರ ಹೆಚ್ಚಳ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈ ಕಂಪೆನಿಗಳು ನೀಡಿಲ್ಲ. ಏರ್‌ಟೆಲ್ ಮೊಬೈಲ್ ಸೇವಾ ದರ ಹೆಚ್ಚಳ ಮಾತ್ರ ಮಾಡಲಿದೆಯೇ ಅಥವಾ ಬ್ರಾಡ್‌ಬ್ಯಾಂಡ್ ಸೇವೆಗಳಲ್ಲಿಯೂ ದರ ಏರಿಕೆಗೆ ಮುಂದಾಗಲಿದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ











Click it and Unblock the Notifications