ಹೊಸ ಪ್ರೀಪೇಯ್ಡ್ ಯೋಜನೆ ಹೊರ ತಂದ ಏರ್ಟೆಲ್!

ಬೆಂಗಳೂರು, ಜುಲೈ 24: ಭಾರ್ತಿ ಏರ್ ಟೆಲ್ ಸಂಸ್ಥೆ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸದೊಂದು ಯೋಜನೆಯನ್ನು ಪರಿಚಯಿಸುತ್ತಿದೆ 299 ರುಪಾಯಿಗಳ ಈ ಯೋಜನೆಯು 45 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಉಚಿತ ವಾಯ್ಸ್ ಕಾಲ್ ಹಾಗೂ 100 ಎಸ್ಎಂಎಸ್ ನೀಡಲಿದೆ.

ಏರ್ ಟೆಲ್ ನ 229 ಹಾಗೂ 249 ರು ಯೋಜನೆ ಕೂಡಾ ಹೆಚ್ಚುವರಿ ಡೇಟಾ ನೀಡಲಿದೆ. 229 ಯೋಜನೆ ದೆಹಲಿ- ಎನ್ ಸಿಆರ್ ಭಾಗಕ್ಕೆ ಮಾತ್ರ ಸದ್ಯಕ್ಕೆ ಸೀಮಿತವಾಗಿದೆ. ದಿನಕ್ಕೆ 100 ಎಸ್ಎಂಎಸ್ ಹಾಗೂ 1.4 ಜಿಬಿ ಪ್ರತಿದಿನ ಸಿಗಲಿದೆ.

Airtels Rs 299, Rs 229 and Rs 249 plans offer more data

249ರು ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯ, 100 ಎಸ್ಎಂಎಸ್ ಪ್ರತಿದಿನ ಹಾಗೂ 2 ಜಿಬಿ ಪ್ರತಿದಿನ ಡೇಟಾ ಸಿಗಲಿದ್ದು, ಎರಡು ಯೋಜನೆಗಳು 1 ತಿಂಗಳ ವ್ಯಾಲಿಡಿಟಿ ಹೊಂದಿವೆ.

ಮೂರು ತಿಂಗಳ ಅವಧಿಯ ಯೋಜನೆ ಬೇಕಾದರೆ 495 ರು ಹಾಗೂ 559 ರು ಯೋಜನೆ ತೆಗೆದುಕೊಳ್ಳಬಹುದು. 495 ರುಪಾಯಿ ಯೋಜನೆ 84 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, 100 ಎಸ್ಎಂಎಸ್ ಪ್ರತಿದಿನ, 1.4 ಜಿಬಿ ಪ್ರತಿದಿನ ಸಿಗಲಿದೆ. 559 ಯೋಜನೆ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇನ್ನು ಏರ್ಟೆಲ್ 1, 199 ರೂಪಾಯಿ ಪ್ಲಾನ್ ನಲ್ಲಿಯೂ ಬದಲಾವಣೆ ಮಾಡಿದೆ. 90 ಜಿಬಿ ಡೇಟಾ ಬದಲಿಗೆ 120 ಜಿಬಿ ಡೇಟಾ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+