ಏರ್ಟೆಲ್ ಪ್ರೀಪೇಯ್ಡ್ ಕಾಂಬೋ ಪ್ಯಾಕ್ 35 ರು ನಿಂದ ಆರಂಭ

Recommended Video

      ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಯೋಜನೆಯನ್ನ ಘೋಷಿಸಿದ ಏರ್ಟೆಲ್ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 05: ಜಿಯೋ ವಿರುದ್ಧ ದರ ಸಮರಕ್ಕಿಳಿದಿರುವ ಏರ್ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಕಡಿಮೆ ದರದ ಕಾಂಬೋ ಪ್ಯಾಕ್ ಗಳನ್ನು ಪರಿಚಯಿಸುತ್ತಿದೆ.

      35 ರೂಪಾಯಿ, 65 ರೂಪಾಯಿ, 95 ರೂಪಾಯಿ ರೀಚಾರ್ಜ್ ಮಾಡಬಹುದಾಗಿದ್ದು, ಈ ಯೋಜನೆಗಳ ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯಕ್ಕೆ ಈ ಹೊಸ ಯೋಜನೆ ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಮೊದಲಿಗೆ ಜಾರಿಗೆ ಬರಲಿದೆ.

      ಹೊಸ ಪ್ರೀಪೇಯ್ಡ್ ಯೋಜನೆ ಹೊರ ತಂದ ಏರ್ಟೆಲ್!

      ನಂತರ ದೇಶದಾದ್ಯಂತ ಈ ಯೋಜನೆ ಲಭ್ಯವಾಗಲಿದೆ. ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಈ ಪ್ಲಾನ್ ಶುರು ಮಾಡಲಾಗಿದೆ. ಒಂದೇ ಪ್ಲಾನ್ ನಲ್ಲಿ ಕರೆ ಸೌಲಭ್ಯ, ಡೇಟಾ, ಅಗತ್ಯ ವ್ಯಾಲಿಡಿಟಿ, ಕಡಿಮೆ ವೆಚ್ಚದ ನಿರ್ವಹಣೆ ಎಲ್ಲಾ ಬೇಡಿಕೆಗಳಿಗೆ ತಕ್ಕಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಏರ್ಟೆಲ್ ಹೇಳಿದೆ.

      ಇದಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 199, 399, 448 ಹಾಗೂ 509 ರೀಚಾರ್ಜ್ ಪ್ಯಾಕ್ ಗಳನ್ನು ಏರ್ಟ್ ಟೆಲ್ ಹೊಂದಿದೆ. ಬಹುತೇಕ ಎಲ್ಲವೂ 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಉಚಿತ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ , ದಿನಕ್ಕೆ 1.48 ಜಿಬಿ ಡೇಟಾ ಸಿಗಲಿದೆ. 399 ರು, 448 ರು ಹಾಗೂ 509 ರು ಯೋಜನೆಯಲ್ಲಿ 70, 82 ಹಾಗೂ 90 ದಿನಗಳ ವ್ಯಾಲಿಡಿಟಿ ಸಿಗಲಿದೆ.

      ಏರ್ಟೆಲ್ ಪ್ರೀಪೇಯ್ಡ್ 35 ರು ರೀಚಾರ್ಜ್

      ಏರ್ಟೆಲ್ ಪ್ರೀಪೇಯ್ಡ್ 35 ರು ರೀಚಾರ್ಜ್

      ಏರ್ಟೆಲ್ ನ 35 ರೂಪಾಯಿ ಪ್ಲಾನ್ ನಲ್ಲಿ 26.66 ರೂಪಾಯಿ ಟಾಕ್ ಟೈಂ ಸಿಗಲಿದೆ. ಒಂದು ಸೆಕೆಂಡ್ ಗೆ ಒಂದು ಪೈಸೆಯಂತೆ ಲ್ಯಾಂಡ್ ಲೈನ್ ಹಾಗೂ ಎಸ್.ಟಿ.ಡಿ. ಕರೆ ಲಭ್ಯವಾಗಲಿದೆ. 100 ಎಂಬಿ 3ಜಿ ಇಂಟರ್ನೆಟ್ ಡೇಟಾ ಗ್ರಾಹಕರಿಗೆ ಸಿಗಲಿದ್ದು, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

      ಏರ್ಟೆಲ್ ಪ್ರೀಪೇಯ್ಡ್ 65 ರು ರೀಚಾರ್ಜ್

      ಏರ್ಟೆಲ್ ಪ್ರೀಪೇಯ್ಡ್ 65 ರು ರೀಚಾರ್ಜ್

      65 ರುಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ 65 ರೂಪಾಯಿ ಟಾಕ್ ಟೈಂ ಸಿಗಲಿದೆ. ಪ್ರತಿ ಒಂದು ಸೆಕೆಂಡ್ ಗೆ ಒಂದು ಪೈಸೆಯಂತೆ ಎಸ್ಟಿಡಿ ಕರೆ ಸಿಗಲಿದೆ. 200 ಎಂಬಿ 3ಜಿ/4ಜಿ ಇಂಟರ್ನೆಟ್ ಡೇಟಾ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ ಕೂಡಾ 28 ದಿನಗಳು

      ಏರ್ಟೆಲ್ ಪ್ರೀಪೇಯ್ಡ್ 95 ರು ರೀಚಾರ್ಜ್

      ಏರ್ಟೆಲ್ ಪ್ರೀಪೇಯ್ಡ್ 95 ರು ರೀಚಾರ್ಜ್

      28 ದಿನಗಳ ವ್ಯಾಲಿಡಿಟಿ ಹೊಂದಿರುವ 95 ರುಪಾಯಿ ಪ್ರೀಪೇಯ್ಡ್ ರೀಚಾರ್ಜ್ ಪ್ಯಾಕ್ ನಲ್ಲಿ 95 ರು ಗಳ ಫುಲ್ ಟಾಕ್ ಟೈಮ್, ಪ್ರತಿ ಒಂದು ಸೆಕೆಂಡ್ ಗೆ ಒಂದು ಪೈಸೆಯಂತೆ ಎಸ್ಟಿಡಿ ಕರೆ ಸಿಗಲಿದೆ. 500 ಎಂಬಿ 3ಜಿ/4ಜಿ ಇಂಟರ್ನೆಟ್ ಡೇಟಾ ಪಡೆಯಬಹುದು.

      ಏರ್ ಟೆಲ್ ನ 47ರುಪಾಯಿ ಯೋಜನೆ

      ಏರ್ ಟೆಲ್ ನ 47ರುಪಾಯಿ ಯೋಜನೆ

      ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದೆ. 150 ನಿಮಿಷಗಳ ಸ್ಥಳೀಯ, ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕಾಲ್ಸ್ ಲಭ್ಯವಿದೆ. 50 ಎಸ್ ಎಂ ಎಸ್(ಸ್ಥಳೀಯ ಪ್ಲಸ್ ಎಸ್ಟಿಡಿ) ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಸಿಗಲಿದೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+