ಏರ್ ಟೆಲ್ 399ರುಗಳಿಗೆ ನೀಡಲಿದೆ ಹೆಚ್ಚುವರಿ ಡೇಟಾ!

ಬೆಂಗಳೂರು, ಆಗಸ್ಟ್ 09: ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ 399ರು ಯೋಜನೆಯನ್ನು ಪರಿಷ್ಕರಿಸಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.

ಪರಿಷ್ಕೃತ ಯೋಜನೆಯಂತೆ 399 ರೂಪಾಯಿ ಪೋಸ್ಟ್ ಪೇಯ್ಡ್ ನಲ್ಲಿ ಗ್ರಾಹಕರಿಗೆ ಹೆಚ್ಚುವರಿ 20 ಜಿಬಿ ಡೇಟಾ ಸಿಗಲಿದೆ. ಜತೆಗೆ 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ.

ಏರ್ಟೆಲ್ ನ ಜನಪ್ರಿಯ 399 ರು ಯೋಜನೆಯ ಮೂಲಕ ವರ್ಷವಿಡಿ 20 ಜಿಬಿ ಹೆಚ್ಚುವರಿ ಡೇಟಾ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ವರ್ಷಕ್ಕೆ 240 ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ. ವೋಡಾಫೋನ್ 40 ಜಿಬಿ ಹಾಗೂ ಜಿಯೋ ಯೋಜನೆಗಳಿಗೆ ಪೈಪೋಟಿ ನೀಡಲು ಏರ್ಟೆಲ್ ಈ ಬದಲಾವಣೆ ತಂದಿದೆ.

Airtel revamps Rs 399 postpaid plan, get more data per month

ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕಾಲ್ ನೀಡ್ತಿದೆ. ಇದರ ಜೊತೆ ಏರ್ಟೆಲ್ ವಿಂಕ್ ಮ್ಯೂಸಿಕ್ ಚಂದಾದಾರತ್ವ, ಅಮೆಜಾನ್ ಪ್ರೈಮ್, ಏರ್ ಟೆಲ್ ಟಿವಿ, ಹ್ಯಾಂಡ್ ಸೆಟ್ ಸುರಕ್ಷತೆ, ಆಡ್ ಆನ್ ಕನೆಕ್ಷನ್ ಉಚಿತವಾಗಿ ಸಿಗಲಿದೆ.

ಏರ್ಟೆಲ್ ವೆಬ್ಸೈಟ್ ಅಥವಾ ಮೈ ಏರ್ಟೆಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಗ್ರಾಹಕರು ರಿಚಾರ್ಜ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+