ಹೊಸ ಗ್ರಾಹಕರನ್ನು ಸೆಳೆಯಲು ಏರ್ ಟೆಲ್ ನಿಂದ 5 ಯೋಜನೆ

ಬೆಂಗಳೂರು, ನವೆಂಬರ್ 07: ಟೆಲಿಕಾಂ ಕ್ಷೇತ್ರದ ಎರಡನೇ ಅತಿದೊಡ್ಡ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಇತ್ತೀಚೆಗೆ 6 ಹೊಸ ಎಂಟ್ರಿ ಲೆವಲ್ ಪ್ಲ್ಯಾನ್ ಘೋಷಿಸಿತ್ತು. ಈಗ 5 ಹೊಸ ಯೋಜನೆಗಳನು ಪ್ರಕಟಿಸಿದ್ದು, ಹೊಸ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಹೊಸ ಆಫರ್ ಲಭ್ಯವಾಗಿದೆ.

ಹೊಸ ಯೋಜನೆ ಪ್ರಕಟಿಸಿ ಜಿಯೋ, ವೋಡಾಫೋನ್ ಜತೆ ನೇರ ಪೈಪೋಟಿಗಿಳಿದಿದೆ. ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಏರ್ಟೆಲ್ ಹೊಸ 195 ರು ಗಳ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ.

25 ದಿನಗಳ ವ್ಯಾಲಿಡಿಟಿ ಹೊಂದಿದೆ. ಏರ್ಟೆಲ್ ವಿಶೇಷ ಯೋಜನೆ 25 ರೂಪಾಯಿಯಿಂದ ಶುರುವಾಗಲಿದ್ದು, 245 ರೂಪಾಯಿಯವರೆಗೆ ಇದೆ. ಈ ಎಲ್ಲ ಯೋಜನೆಯಲ್ಲಿ ಟಾಕ್ ಟೈಮ್ ಜೊತೆ ಡೇಟಾ ಗ್ರಾಹಕರಿಗೆ ಸಿಗಲಿದೆ.

ಇದಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 199, 399, 448 ಹಾಗೂ 509 ರೀಚಾರ್ಜ್ ಪ್ಯಾಕ್ ಗಳನ್ನು ಏರ್ ಟೆಲ್ ಹೊಂದಿದೆ. ಬಹುತೇಕ ಎಲ್ಲವೂ 28 ದಿನಗಳ ವ್ಯಾಲಿಡಿಟಿ ಹೊಂದಿವೆ.

ಉಚಿತ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ , ದಿನಕ್ಕೆ 1.48 ಜಿಬಿ ಡೇಟಾ ಸಿಗಲಿದೆ. 399 ರು, 448 ರು ಹಾಗೂ 509 ರು ಯೋಜನೆಯಲ್ಲಿ 70, 82 ಹಾಗೂ 90 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 178 ರು

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 178 ರು

ಮೊದಲ ಬಾರಿಯ ರೀಚಾರ್ಚ್ ಯೋಜನೆ 178ರು ಪ್ರೀಪೇಯ್ಡ್ ಯೋಜನೆಯಾಗಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. 1ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 229 ರು

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 229 ರು

ಮೊದಲ ಬಾರಿಯ ರೀಚಾರ್ಚ್ 178ರು ಪ್ರೀಪೇಯ್ಡ್ ಯೋಜನೆಯಂತೆ 229ರು ಯೋಜನೆಯೂ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಆದರೆ, ಡೇಟಾ ಹೆಚ್ಚುವರಿಯಾಗಿ ಪಡೆಯಬಹುದು. 1.4 ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 344 ರು

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 344 ರು

ಮೊದಲ ಬಾರಿಯ ರೀಚಾರ್ಚ್ ಯೋಜನೆ 178ರು ಹಾಗೂ 229ರು ಪ್ರೀಪೇಯ್ಡ್ ಯೋಜನೆಯಂತೆ 344ರು ಯೋಜನೆ ಕೂಡಾ, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಆದರೆ, ಹೆಚ್ಚುವರಿ ಡೇಟಾ ಸಿಗಲಿದ್ದು, 2ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 559 ಹಾಗೂ 495 ರು

ಏರ್ ಟೆಲ್ ಪ್ರೀಪೇಯ್ಡ್ ಎಫ್ ಆರ್ ಸಿ 559 ಹಾಗೂ 495 ರು

ಮೊದಲ ಬಾರಿಯ ರೀಚಾರ್ಚ್ ಯೋಜನೆ 178, 229 ಹಾಗೂ 334ರು ಪ್ರೀಪೇಯ್ಡ್ ಯೋಜನೆಗಿಂತ ಅಧಿಕ ಅವಧಿ ವ್ಯಾಲಿಡಿಟಿ ಹಾಗೂ ಕಡಿಮೆ ಡೇಟಾ ಈ ಎರಡು ಯೋಜನೆಗಳಲ್ಲಿ ಸಿಗಲಿದೆ.

559 ರು ಯೋಜನೆ 90 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, 495 ರು ಯೋಜನೆ 84ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. 1.4 ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+