ಟಾಟಾ ಸನ್ಸ್‌ಗೆ ತನ್ನ 32.67% ಪಾಲನ್ನು ಮಾರಾಟ ಮಾಡಲಿರುವ ಏರ್‌ಏಷ್ಯಾ ಗ್ರೂಪ್

ಕೌಲಲಾಂಪುರ್, ಡಿಸೆಂಬರ್ 29: ಮಲೇಷಿಯಾದ ಬಜೆಟ್ ವಿಮಾನಯಾನ ಸಂಸ್ಥೆ ಏರ್‌ಏಷ್ಯಾ ಗ್ರೂಪ್ ಬಿಎಚ್‌ಡಿ, ತನ್ನ ಭಾರತೀಯ ಕಾರ್ಯಾಚರಣೆಯಲ್ಲಿ ಶೇಕಡಾ 32.67ರಷ್ಟು ಪಾಲನ್ನು ಟಾಟಾ ಸನ್ಸ್‌ಗೆ 37.7 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ಯೋಜಿಸಿದೆ ಎಂದು ಮಂಗಳವಾರ (ಡಿಸೆಂಬರ್ 29) ಪ್ರಕಟಿಸಿದೆ.

ಈ ಹಿಂದೆ ಟಾಟಾ ಸನ್ಸ್‌ನ ಜಂಟಿ ಸಹಭಾಗಿತ್ವದೊಂದಿಗೆ ಭಾರತದಲ್ಲಿ ಶೇಕಡಾ 49ರಷ್ಟು ಒಡೆತನವನ್ನು ಹೊಂದಿರುವ ಏರ್‌ಲೈನ್ಸ್, ಕೋವಿಡ್ -19 ಸಾಂಕ್ರಾಮಿಕ ಪರಿಣಾಮದ ಮಧ್ಯೆ ಕಂಪನಿಯು ತನ್ನ ಪ್ರಮುಖ ಆಗ್ನೇಯ ಏಷ್ಯಾದ ಮಾರುಕಟ್ಟೆಗಳ ಚೇತರಿಕೆಯತ್ತ ಗಮನಹರಿಸಲು ಮುಂದಾಗಿದೆ.

"ಮುಂದಿನ ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಈ ವ್ಯವಹಾರವು ಏರ್ ಏಷ್ಯಾ ಮತ್ತು ಅದರ ಷೇರುದಾರರ ಹಿತದೃಷ್ಟಿಯಿಂದ ಸರ್ವಾನುಮತದಿಂದ ಆಯ್ಕೆಯಾಗಿದೆ" ಎಂದು ಅದು ಹೇಳಿದೆ.

AirAsia To Sell 32.67% Stake In Its Indian Operations To Tata Sons

ಸಾಂಕ್ರಾಮಿಕ ರೋಗದ ಮಧ್ಯೆ ಹೆಚ್ಚಿನ ಸವಾಲಿನ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಏರ್‌ಏಷ್ಯಾ ಜಪಾನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಎರಡು ತಿಂಗಳ ನಂತರ ಈ ಪ್ರಕಟಣೆ ಬಂದಿದೆ.

ಟಾಟಾ ಸನ್ಸ್ ಶೀಘ್ರದಲ್ಲೇ ಏರ್‌ಏಷ್ಯಾ ಇಂಡಿಯಾದಲ್ಲಿ ಶೇ 83.67 ರಷ್ಟು ಪಾಲನ್ನು ಪಡೆದುಕೊಳ್ಳಲಿದೆ. ಶೀಘ್ರದಲ್ಲೇ ಒಪ್ಪಂದವನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇನ್ನು ಇತ್ತೀಚೆಗಷ್ಟೇ ಸುಮಾರು 60,000 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ ಹೊತ್ತುಕೊಂಡಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಖರೀದಿಸಲು ಟಾಟಾ ಸಮೂಹ ಮನಸ್ಸು ಮಾಡಿದೆ ಎಂದು ವರದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+