ಏರ್ ಏಷ್ಯಾದಿಂದ 999ರು ಗೆ ವಿಮಾನಯಾನ ಕೊಡುಗೆ
ನವದೆಹಲಿ, ಜನವರಿ 08: ಅತ್ಯಂತ ಕಡಿಮೆ ಬೆಲೆಗೆ ವಿಮಾನ ಪ್ರಯಾಣ ಟಿಕೆಟ್ ಗಳನ್ನು ನೀಡಲು ಏರ್ ಏಷ್ಯಾ ಮುಂದಾಗಿದೆ. 999 ರುಪಾಯಿಯಿಂದ ಈ ಹಬ್ಬದ ಸೀಸನ್ ಆಫರ್ ಶುರುವಾಗಲಿದೆ.
ಜನವರಿ 07, 2019ರಿಂದ ಜನವರಿ 20ರೊಳಗೆ ಟಿಕೆಟ್ ಗಳನ್ನು ಉಕ್ ಮಾಡಬಹುದಾಗಿದೆ ಎಂದು ಏರ್ ಏಷ್ಯಾ ಪ್ರಕಟಿಸಿದೆ. ದೇಶಿ ಪ್ರಯಾಣ ದರಗಳು 999 ರುಪಾಯಿನಿಂದ ಆರಂಭವಾದರೆ, ಅಂತಾರಾಷ್ಟ್ರೀಯ ಪ್ರಯಾಣ ಟಿಕೆಟ್ ಗಳು 2,999 ರು ನಿಂದ ಶುರುವಾಗಲಿದೆ. ಏರ್ ಏಷ್ಯಾ ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ನಿಂದ ಬುಕ್ ಮಾಡಿದ ಎಲ್ಲಾ ಎಲ್ಲಾ ಟಿಕೆಟ್ ಗಳಿಗೂ ಈ ಆಫರ್ ಲಭ್ಯವಾಗಲಿದೆ.
ಏಷ್ಯಾ, ಆಸ್ಟ್ರೇಲಿಯಾದ 130 ತಾಣಗಳಿಗೆ ಸಂಪರ್ಕಿಸುವ ಕೊಡುಗೆ ಇದಾಗಿದೆ. ಕೌಲಲಂಪುರ, ಬ್ಯಾಂಕಾಂಕ್, ಕ್ರಾಬಿ, ಸಿಡ್ನಿ, ಆಕ್ಲೆಂಡ್, ಮೆಲ್ಬೋರ್ನ್, ಸಿಂಗಪುರ ಹಾಗೂ ಬಾಲಿಗೆ ಈ ಕೊಡುಗೆ ಲಭ್ಯವಿದೆ.

ಭಾರತದಲ್ಲಿ ಸುಮಾರು 19 ತಾಣಗಳಿಗೆ ಭೇಟಿ ನೀಡಬಹುದು. ಬೆಂಗಳೂರು, ನವದೆಹಲಿ, ಕೋಲ್ಕತಾ, ಮುಂಬೈ, ಕೊಚ್ಚಿ, ಗೋವಾ, ಜೈಪುರ, ಚಂಡೀಗಡ, ಪುಣೆ, ಗುವಾಹಟಿ, ಇಂಫಾಲ, ವಿಶಾಖಪಟ್ಟಣಂ, ಶ್ರೀನಗರ, ಹೈದರಾಬಾದ್, ರಾಂಚಿ, ಭುವನೇಶ್ವರ, ಇಂದೋರ್ ಹಾಗು ಚೆನ್ನೈಗೆ ಕೊಡುಗೆ ಲಭ್ಯವಿರಲಿದೆ.
ಏರ್ ಏಷ್ಯಾ ಸಮೂಹದ ಏರ್ ಏಷ್ಯಾ ಇಂಡಿಯಾ, ಏರ್ ಏಷ್ಯಾ ಬೆರ್ಹಾಡ್, ಥಾಯ್ ಏರ್ ಏಷ್ಯಾಗಳಿಗೂ ಈ ಕೊಡುಗೆ ಲಭ್ಯವಿದೆ.
ಇದಲ್ಲದೆ, ಏರ್ ಏಷ್ಯಾ ವಿಮಾನ ಟಿಕೆಟ್ ಗಳು ಮುಂಬೈ ಹಾಗೂ ಬೆಂಗಳೂರು 1,599 ರು ಗಳಿಗೆ ನೇರ ವಿಮಾನ ಲಭ್ಯವಿದೆ. ಜನವರಿ 15ರಿಂದ ಈ ಸೌಲಭ್ಯ ಆರಂಭವಾಗಲಿದೆ.












Click it and Unblock the Notifications