ತ್ವರೆ ಮಾಡಿ, ಏರ್ ಇಂಡಿಯಾದಲ್ಲಿ 706 ರು ನೀಡಿ ಪ್ರಯಾಣಿಸಿ!

Posted By:
Subscribe to Oneindia Kannada

ನವದೆಹಲಿ, ಜೂನ್ 18 : ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಮುಂಗಾರು ಋತುವಿಗೆ 'ಸಾವನ್ ಸ್ಪೆಷಲ್' ಎಂಬ ಹೊಸ ಆಫರ್ ನೀಡುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಕಂಪನಿಯನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ಮಾತುಕತೆ ನಡೆಯುತ್ತಿದೆ. ಇನ್ನೊಂದೆಡೆ ಆಫರ್ ಗಳನ್ನು ನೀಡಲಾಗುತ್ತಿದೆ.

ಈ ರಿಯಾಯಿತಿ ದರದ ಕೊಡುಗೆಯಂತೆ ವಿಮಾನ ಪ್ರಯಾಣ ದರಗಳು ಕನಿಷ್ಟ 706 ರು ನಿಂದ ಆರಂಭವಾಗುತ್ತವೆ. ಟಿಕೆಟ್ ಮಾರಾಟ ಜೂನ್ 21ರ ವರೆಗೆ ಇರುತ್ತದೆ.

Air India 'Saavan Special' Offers Travel with Tickets Starting Rs. 706

ಜುಲೈ 1ರಿಂದ ಸೆಪ್ಟೆಂಬರ್ 20ರ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಬಹುದು. ಈ ವಿಶೇಷ ರಿಯಾಯಿತಿ ದರದ ಪ್ರಯಾಣವು ಆಯ್ದ ಕೆಲವು ದೇಶಿಯ ಮಾರ್ಗಗಳಿಗೆ ಮಾತ್ರ ಅನ್ವಯವಾಗುತ್ತದೆ.

ಏರ್ ಇಂಡಿಯಾದ ಸಾವನ್ ಸ್ಪೆಷಲ್ ಗೆ ಪೈಪೋಟಿ ನೀಡಲು ಸ್ಪೈಸ್ ಜೆಟ್ (ಸಮ್ಮರ್ ಸೇಲ್) ಟಿಕೆಟ್ ಬೆಲೆ 799 ರು (ತೆರಿಗೆ ಸೇರಿದಂತೆ), ಇಂಡಿಗೋ ಏರ್ 899 ರು, ಗೋ ಏರ್ 899 ರು, ವಿಸ್ತಾರ 849ರು ಕನಿಷ್ಟ ಪ್ರಯಾಣ ದರ ನಿಗದಿ ಮಾಡಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ದೇಶಿ ವಿಮಾನಯಾನ ಕ್ಷೇತ್ರದಲ್ಲಿ ಪ್ರಯಾಣಿಕರ ಸಂಖ್ಯೆ ಶೇ 17.71ರಷ್ಟು ಏರಿಕೆ ಕಂಡಿದ್ದು, ಜನವರಿ -ಏಪ್ರಿಲ್ 2017 ಅವಧಿಯಲ್ಲಿ ಸುಮಾರು 364 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air India has announced new monsoon sale offering tickets as low as Rs. 706 on select domestic routes. Air India's "Saavan Special" sale is open till June 21 for travel period between July 1 and September 20.
Please Wait while comments are loading...