ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವಿಮಾನ ಲೀಸ್ ಪಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್

|
Google Oneindia Kannada News

ಬೆಂಗಳೂರು, ಫೆ. 15: ಏರ್ ಇಂಡಿಯಾದ ಶಾಖಾ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ 2016-17 ನೇ ಸಾಲಿಗೆ 8 ಹೊಸ ವಿಮಾನಗಳನ್ನು ಲೀಸ್ ಗೆ ತೆಗೆದುಕೊಳ್ಳಲಿದ್ದು ತನ್ನ ಬಲವನ್ನು 25 ಕ್ಕೆ ಏರಿಸಿಕೊಳ್ಳಲಿದೆ.

ಕೆಲ ಹೊಸ ಮಾರ್ಗಗಳಲ್ಲೂ ಹಾರಾಟ ಆರಂಭವಾಗಲಿದೆ. ಈಗಾಗಲೇ 3 ಲೀಸ್ ಗಳಿಗೆ ಸಹಿ ಹಾಕಿದ್ದು ಇನ್ನು 5 ಲೀಸ್ ಗಳ ಕುರಿತ ಮಾತುಕತೆ ಪ್ರಗತಿಯಲ್ಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಶ್ಯಾಮ್ ಸುಂದರ್ ತಿಳಿಸಿದ್ದಾರೆ.[ಮಂಗಳೂರಿನಿಂದ ಅಬುಧಾಬಿ, ಮಸ್ಕತ್ ಗೆ ನೇರ ವಿಮಾನ]

air india

ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಅನುಮತಿ ನೀಡಿರುವಂತೆ ಇನ್ನು 11 ವಿಮಾನಗಳನ್ನು ಲೀಸ್ ಗೆ ತೆಗೆದುಕೊಂಡು ಒಟ್ಟು ವಿಮಾನಗಳ ಸಂಖ್ಯೆಯನ್ನು 36 ರ್ಖಖೇ ಹೆಚ್ಚಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಎಕಾನಮಿ ಕ್ಲಾಸ್ನ 189 ಸೀಟ್ ಗಳುಳ್ಳ ಬಿ-737 800 ಎನ್ ಜಿ ಮಾದರಿಯ ವಿಮಾನಗಳನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಪರಿಚಯಿಸಲಿದೆ. ಲಕ್ನೋ-ಮಸ್ಕತ್, ಅಮೃತಸರ-ಮಸ್ಕತ್ ಮಾರ್ಗಗಳನ್ನು ಹೊಸದಾಗಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಶ್ಯಾಮ್ ಸುಂದರ್ ತಿಳಿಸಿದ್ದಾರೆ.

English summary
Air India Express will lease eight new aircraft by 2016-17, increasing its fleet to 25 while it adds more destinations. We have already signed three leases and five leases are in the process. We are taking brand new planes from leasing companies," CEO K. Shyam Sundar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X