ನಿರೀಕ್ಷಿತ! ಲೋಕಸಭೆ ಫಲಿತಾಂಶದ ಬಳಿಕ ಪೆಟ್ರೋಲ್, ಡೀಸೆಲ್ ಏರಿಕೆ
ನಿರೀಕ್ಷೆಯಂತೆ ಲೋಕಸಭೆ ಚುನಾವಣೆ 2019ರ ಫಲಿತಾಂಶ ಹೊರ ಬಂದ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಇರಾನ್ ನಿಂದ ಇಂಧನ ಖರೀದಿಗೆ ಅಮೆರಿಕ ನಿರ್ಬಂಧ ಹೇರುವ ಭೀತಿಯಿಂದ, ಇಂಧನ ಆಮದು ಮಾಡಿಕೊಳ್ಳಲು ಭಾರತವು ಬೇರೆ ದೇಶವನ್ನು ಹುಡುಕಬೇಕಾಗಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.
ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಫಲಿತಾಂಶ ನೀಡಿದ್ದು, ಸಾರ್ವಜನಿಕರು ಈಗ ಇಂಧನ ಬೆಲೆ ನಿಯಂತ್ರಣದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಬೆಲೆ 14 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 16 ಪೈಸೆ ಏರಿಕೆಯಾಗಿದೆ.
ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.
ಕಳೆದ ವಾರಾಂತ್ಯದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತು. ಆದರೆ, ಮೇ 20ರ ನಂತರ ಏರಿಕೆಯ ಸೂಚನೆ ಸಿಕ್ಕಿತ್ತು. ಆದರೆ, ಮೇ 23ರ ತನಕ ಒಂದೆರಡು ದಿನ ಮಾತ್ರ ಬೆಲೆ ಏರಿಕೆಯಾಗಿತ್ತು. ಕಚ್ಚಾತೈಲ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ
ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ರು ಪ್ರತಿ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ 3 ರು ಪ್ರತಿ ಲೀಟರ್ ಹಾಗೂ ಡೀಸೆಲ್ 5 ರು ಪ್ರತಿ ಲೀಟರ್ ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ಈ ನಷ್ಟವನ್ನು ಭರಿಸಲು ಈಗ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಬಹುದು

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ
* ಶುಕ್ರವಾರ (ಮೇ 24)ದಂದು ಪೆಟ್ರೋಲ್: 73.72ರು(0.15 ಪೈಸೆ ಇಳಿಕೆ)
* ಗುರುವಾರದಂದು ಪೆಟ್ರೋಲ್ : 73.57 ರು(+0.08ಪೈಸೆ )
* ಬುಧವಾರದಂದು ಪೆಟ್ರೋಲ್ : 73.49ರು
ಡೀಸೆಲ್ ಬೆಲೆ
* ಶುಕ್ರವಾರ(ಮೇ 24)ದಂದು ಡೀಸೆಲ್ : 68.61ರು(0.16 ಪೈಸೆ ಇಳಿಕೆ)
* ಗುರುವಾರದಂದು ಡೀಸೆಲ್: 68.25 ರು(+0.10ಪೈಸೆ)
* ಬುಧವಾರದಂದು ಡೀಸೆಲ್: 68.35ರು
****

ಚೆನ್ನೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಚೆನ್ನೈ ನಗರದಲ್ಲಿ ಪೆಟ್ರೋಲ್ ಬೆಲೆ
* ಶುಕ್ರವಾರ (ಮೇ 24)ದಂದು ಪೆಟ್ರೋಲ್: 74.50ರು(0.14 ಪೈಸೆ ಏರಿಕೆ)
* ಗುರುವಾರದಂದು ಪೆಟ್ರೋಲ್ : 73.96 ರು(+0.09ಪೈಸೆ )
* ಬುಧವಾರದಂದು ಪೆಟ್ರೋಲ್ : 73.87ರು
ಡೀಸೆಲ್ ಬೆಲೆ
* ಶುಕ್ರವಾರ(ಮೇ 24)ದಂದು ಡೀಸೆಲ್ : 70.24ರು(0.16 ಪೈಸೆ ಇಳಿಕೆ)
* ಗುರುವಾರದಂದು ಡೀಸೆಲ್: 70.08 ರು(+0.11ಪೈಸೆ)
* ಬುಧವಾರದಂದು ಡೀಸೆಲ್: 69.97ರು
****

ನವದೆಹಲಿ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ
* ಶುಕ್ರವಾರ (ಮೇ 24)ದಂದು ಪೆಟ್ರೋಲ್: 71.39ರು(0.15 ಪೈಸೆ ಏರಿಕೆ)
* ಗುರುವಾರದಂದು ಪೆಟ್ರೋಲ್ : 71.25 ರು(+0.08ಪೈಸೆ )
* ಬುಧವಾರದಂದು ಪೆಟ್ರೋಲ್ : 71.17ರು
ಡೀಸೆಲ್ ಬೆಲೆ
* ಶುಕ್ರವಾರ(ಮೇ 24)ದಂದು ಡೀಸೆಲ್ : 66.45ರು(0.16 ಪೈಸೆ ಏರಿಕೆ)
* ಗುರುವಾರದಂದು ಡೀಸೆಲ್: 66.29 ರು(+0.09ಪೈಸೆ)
* ಬುಧವಾರದಂದು ಡೀಸೆಲ್: 66.20ರು
****












Click it and Unblock the Notifications