Adani Group Shares: ಹಿಂಡೆನ್‌ಬರ್ಗ್ ವರದಿಗೆ ಡೋಂಟ್‌ಕೇರ್! ಏರಿಕೆಯತ್ತ ಅದಾನಿ ಗ್ರೂಪ್ ಷೇರುಗಳು
ಅದಾನಿ ಸಮೂಹ ಸಂಸ್ಥೆ ಮತ್ತು ಸೆಬಿ ಮುಖ್ಯಸ್ಥೆ ಮೇಲೆ ಹಿಂಡೆನ್‌ಬರ್ಗ್ ಆರೋಪಗಳ ಬಳಿಕ, ಸೋಮವಾರ ಕುಸಿತ ಕಂಡಿದ್ದ ಅದಾನಿ ಗ್ರೂಪ್ ಷೇರುಗಳು ಮಂಗಳವಾರ ಚೇತರಿಸಿಕೊಂಡಿದ್ದು ಮತ್ತೆ ಏರಿಕೆಯ ಹಾದಿ ಹಿಡಿದಿವೆ. ಅದಾನಿ ಎಂಟರ್ ಪ್ರೈಸಸ್, ಅಂಬುಜಾ ಸಿಮೆಂಟ್ ಷೇರುಗಳು ಮಾತ್ರ ಅಲ್ಪ ಕುಸಿತ ಕಂಡಿದ್ದರೆ ಉಳಿದ ಷೇರುಗಳು ಏರಿಕೆಯತ್ತ ಮುಖಮಾಡಿವೆ. ಹೂಡಿಕೆದಾರರು ಈ ಬಾರಿ ಹಿಂಡೆನ್‌ಬರ್ಗ್ ವರದಿ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೇ ಇರುವುದು ಸ್ಪಷ್ಟವಾಗಿದೆ.
ಮಂಗಳವಾರ ವಹಿವಾಟು ಆರಂಭವಾಗುತ್ತಿದ್ದಂತೆ ಅದಾನಿ ಗ್ರೂಪ್‌ನ ಒಂಬತ್ತು ಷೇರುಗಳು ಪುಟಿದೆದ್ದವು. ಅದಾನಿ ಎನರ್ಜಿ ಸಲ್ಯೂಷನ್ಸ್ ಷೇರುಗಳು 11 ಗಂಟೆಗೆ ವೇಳೆಗೆ 25 ರೂಪಾಯಿ ಅಂದರೆ 2.36% ರಷ್ಟು ಏರಿಕೆ ಕಂಡವು. ಅದಾನಿ ಟೋಟಲ್ ಗ್ಯಾಸ್ ಶೇಕಡಾ 2.11 (₹17.60) ರಷ್ಟು ಏರಿತು, ಎನ್‌ಡಿಟಿವಿ ಶೇಕಡಾ 1.63 ರಷ್ಟು ಏರಿತು ಮತ್ತು ಅದಾನಿ ಗ್ರೀನ್ ಎನರ್ಜಿ ಬಿಎಸ್‌ಇಯಲ್ಲಿ ಶೇಕಡಾ 1.50 ರಷ್ಟು ಏರಿತು.

ಉಳಿದಂತೆ ಅದಾನಿ ವಿಲ್‌ಮಾರ್ ಷೇರುಗಳು 0.37% ರಷ್ಟು ಏರಿಕೆಯಾದರೆ, ಎಸಿಸಿ ಷೇರುಗಳು 0.79%ರಷ್ಟು ಏರಿಕೆ ಕಂಡವು. ಆರಂಭಿಕ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ವಲ್ಪ ಕಡಿಮೆ ವಹಿವಾಟು ನಡೆಸಿತು.
ಅದಾನಿ ಎಂಟರ್ ಪ್ರೈಸಸ್ ಷೇರುಗಳ ಬೆಲೆಗಳಲ್ಲಿ ಕುಸಿತ ಕಂಡುಬಂದಿದ್ದು, 0.88% ರಷ್ಟು ಕುಸಿದಿದೆ. ಅದಾನಿ ಪವರ್ ಷೇರುಗಳ ಬೆಲೆಗಳು 0.05% ರಷ್ಟು ಕುಸಿದಿದ್ದು, ಅಂಬುಜಾ ಸಿಮೆಂಟ್ ಷೇರುಗಳ ಮೌಲ್ಯದಲ್ಲಿ 0.20% ಕುಸಿತ ಕಂಡಿದೆ. ಇದೆಲ್ಲವೂ ಅಲ್ಪ ಪ್ರಮಾಣದ ಕುಸಿತವಾಗಿದ್ದು ಸಂಜೆ ವೇಳೆಗೆ ಸುಧಾರಣೆ ಕಾಣುವ ಸಾಧ್ಯತೆ ಇದೆ.
ಹೂಡಿಕೆದಾರರಿಗೆ ಆತಂಕ ಬೇಡ
ಹಿಂಡೆನ್‌ಬರ್ಗ್ ವರದಿ ಬಗ್ಗೆ ಹೂಡಿಕೆದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಷೇರುಮಾರುಕಟ್ಟೆಯಲ್ಲಿ ಏರಿಳಿಯ ಇದ್ದಿದ್ದೇ, ಈಗ ಹಿಂಡೆನ್‌ಬರ್ಗ್ ವರದಿಯು ಇಂಟ್ರಾಡೇ ಟ್ರೇಡರ್ ಗಳ ಮೇಲೆ ಪ್ರಭಾವ ಬೀರಬಹುದು, ನಷ್ಟಕ್ಕೆ ಕಾರಣವಾಗಬಹುದು. ಆದರೆ ದೀರ್ಘಾವಧಿ ಹೂಡಿಕೆದಾರರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications